ಯಲ್ಲಾಪುರ ; ಅಕ್ರಮ ಗೋ ಸಾಗಣಿಕೆಯನ್ನು ತಡೆದಿರುವ ಪ್ರಕಟರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಧುರೀಣ ಸೂರಜ ನಾಯ್ಕ ಸೋನಿಯವರನ್ನು ವಿನಾಕಾರಣ ಬಂಧಿಸಿದ್ದು, ಅಕ್ರಮ ಕಳ್ಳಸಾಗಾಣಿಕೆದಾರರಿಗೆ ಹೊಸ ಹುರುಪು ನೀಡಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಪ್ರಮೋದ ಹೆಗಡೆ ಆಪಾದಿಸಿದ್ದಾರೆ.

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ ಸರಕಾರದ ಅಗೋಚರ ಪ್ರೇರಣೆಯಿಂದ ದನಗಳ ಕಳ್ಳ ಸಾಗಾಣಿಕೆ ಅವ್ಯಾಹತವಾಗಿ ನಡೆಯುತ್ತಿದೆ. ಪೋಲಿಸರಿಗೆ ಸಾರ್ವಜನಿಕರು ಸಹಕಾರ ನೀಡಿ ಇಂತಹ ಅಕ್ರಮ ಹಿಡಿದರೆ ಕಳ್ಳ ಸಾಗಾಣಿಕೆದಾರರಿಗೆ ಭಯ ಉಂಟಾಗಿ ಅಕ್ರಮ ದಂಧೆ ನಿಯಂತ್ರಣಕ್ಕೆ ಬರುತ್ತದೆ. ಅದರ ಬದಲು ಈ ಅಕ್ರಮಗಳನ್ನು ಹಿಡಿಯಲು ನೆರವಾದವರಿಗೆ ಪೋಲಿಸರು ಬಂಧಿಸಿ ಹೆದರಿಸಿದರೆ ಅಕ್ರಮ ದನಸಾಗಾಣಿಕೆದಾರರಿಗೆ ಹೆಚ್ಚು ಪ್ರಚೋದನೆ ಬರುತ್ತದೆ ಎಂದು ತಿಳಿಸಿದ್ದಾರೆ.

RELATED ARTICLES  ಪರೇಶ ಮೇಸ್ತ ಸಾವು ಪ್ರಕರಣ: ಮುಂಡಗೋಡ ಬಂದ್‌.

ಜಿಲ್ಲಾ ಆಡಳಿತ ಮಾಡುವ ಇಂತಹ ತಪ್ಪುಗಳಿಗೆ ಜನ ರೋಸಿ ಹೋಗಿ ಪ್ರತಿಭಟನೆ ಮಾರ್ಗವನ್ನು ಹಿಡಿಯಬೇಕಾಗುತ್ತದೆ. ಸೂರಜ ನಾಯ್ಕರವರ ಈ ಬಂಧನವನ್ನು ಬಿಜೆಪಿ ಮುಂದಿನ ದಿನಗಳಲ್ಲಿ ಪ್ರತಿಭಟಿಸುತ್ತದೆ ಎಂದವರು ಎಚ್ಚರಿಸಿದ್ದಾರೆ.

RELATED ARTICLES  ಜಿಲ್ಲಾ ಕಸಾಪ ದಿಂದ 21ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಸೈಯದ್ ಝಮೀರುಲ್ಲಾ ಷರೀಫ್ ಅವರಿಗೆ ಆಹ್ವಾನ