ಹೊನ್ನಾವರ : ಯುಗಾದಿ ಅಥವಾ ಉಗಾದಿ ಚೈತ್ರ ಮಾಸದ ಮೊದಲ ದಿನ. ಭಾರತದ ಅನೇಕ ಕಡೆಗಳಲ್ಲಿ ಈ ದಿನ ಹೊಸ ವರ್ಷದ ಮೊದಲ ದಿನ. ಹೊಸ ವರ್ಷದ ಹಬ್ಬವಾಗಿ ಯುಗಾದಿಯನ್ನು ಆಚರಿಸಲಾಗುತ್ತದೆ. ಅದೇ ರೀತಿ ತಾಲೂಕಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಳದೀಪುರದಲ್ಲಿ ವಿಜೃಂಭಣೆಯಿಂದ “ಹಳದೀಪುರ ಯುಗಾದಿ ಉತ್ಸವ-2018” ಕಾರ್ಯಕ್ರಮ ನಡೆಯಿತು.

ಸಭಾ ಕಾರ್ಯಕ್ರಮವನ್ನು ಕುಮಟಾ-ಹೊನ್ನಾವರ ಕ್ಷೇತ್ರದ ಶಾಸಕರು ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಉದ್ಘಾಟಿಸಿ ಮಾತನಾಡಿದರು‌‌‌‌‌‌‌‌.

RELATED ARTICLES  ಕುಮಟಾ : ಅಧಿಕಾರಿಗಳ ದಾಳಿ: ಅನಧಿಕೃತ ಆಸ್ಪತ್ರೆಗೆ ಬಿತ್ತು ಬೀಗ

ಭಾರತೀಯ ಸಂಸ್ಕೃತಿಯಲ್ಲಿ ‘ಯುಗಾದಿ ಹಬ್ಬ’ಕ್ಕೆ ತನ್ನದೇ ಆದ ಒಂದು ಅತ್ಯುನ್ನತವಾದ ಸಾಂಸ್ಕೃತಿಕ ಮಹತ್ವವಿದೆ. ಆದುದರಿಂದ ಭಾರತೀಯರು ಅದರಲ್ಲೂ ದಕ್ಷಿಣಭಾರತದವರಲ್ಲಿ ಕರ್ನಾಟಕದ ಜನರು ತಮ್ಮ ಹೊಸವರುಷದ ದಿನವು ‘ಯುಗಾದಿ’ಯ ದಿನದಿಂದಲೇ ಆರಂಭವಾಗುತ್ತದೆ ಎಂದು ನಂಬುತ್ತಾರೆ. ಅದಕ್ಕಾಗಿಯೇ ಅಂದು ತಮ್ಮ ನೆಂಟರಿಷ್ಟರು, ಬಂಧು- ಬಾಂಧವರು, ಕುಟುಂಬವರ್ಗದವರೆಲ್ಲರೂ ಒಂದೆಡೆ ಸೇರಿ ಯುಗಾದಿಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲು ತೊಡಗುತ್ತಾರೆಂದು ಅವರು ಹೇಳುತ್ತಾ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

RELATED ARTICLES  ಬಿಜೆಪಿ ಪ್ರಣಾಳಿಕೆಯಲ್ಲಿ ಕರಾವಳಿಯ ರಕ್ಷಣೆಗೂ ಹೆಚ್ಚಿನ ಆದ್ಯತೆ ನೀಡಲಾಗಿದೆ: ನಾಗರಾಜ ನಾಯಕ

ಈ ಸಂದರ್ಭದಲ್ಲಿ ಶ್ರೀ ಜಗದೀಪ ತೆಂಗೇರಿ, ಶ್ರೀ ವಿನಾಯಕ ಶೇಟ,ದಾಮೋದರ ನಾಯ್ಕ,ಸೀತಾರಾಮ‌ ನಾಯ್ಕ ಹಾಗೂ ಇತರರು ಉಪಸ್ಥಿತರಿದ್ದರು. ನಂತರ ಮಕ್ಕಳಿಂದ‌ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆದವು.