ಕುಮಟಾ:ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ ಇದರ ಯೋಜನೆಯಡಿ ಮಂಜೂರಾದ ಕುಮಟಾ ತಾಲೂಕಿನ ಕಲ್ಲಬ್ಬೆ ಪಂಚಾಯತದ ಬೊಗ್ರಿಬೈಲ್ ಕತಗಾಲ ಸೇತುವೆ ಕಾಮಗಾರಿಯ ಅಡಿಗಲ್ಲು ಸಮಾರಂಭದ ಕಾರ್ಯಕ್ರಮನಡೆಯಿತು.
ರೂ 35 ಕೋಟಿ ರೂ ವೆಚ್ಚದ ಕಾಮಗಾರಿಯ ಅಡಿಗಲ್ಲು ಸಮಾರಂಭ ನೆರವೇರಿಸಿ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಮಾತನಾಡಿದರು. ಜನತೆಗೆ ತುಂಬಾ ಅಗತ್ಯವಾಗಿದ್ದ ಕಾಮಗಾರಿ ಇದಾಗಿದ್ದು ಇದರ ಅಡಿಗಲ್ಲು ಸಮಾರಂಭ ನಡೆಸಲು ಸಂತಸ ಪಡುವುದಾಗಿ ಶಾಸಕರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕಲ್ಲಬ್ಬೆ ಗ್ರಾ. ಪಂ. ಅಧ್ಯಕ್ಷರಾದ ಶ್ರೀಮತಿ ಶೋಭಾ ನಾಯ್ಕ,ಉಪಾಧ್ಯಕ್ಷರಾದ ಶ್ರೀ ಹರೀಶ ಭಟ್ಟ, ಅಳಕೋಡ ಗ್ರಾ. ಪಂ. ಅಧ್ಯಕ್ಷರಾದ ಶ್ರೀ ಕೃಷ್ಣಾನಂದ ವರ್ಣೇಕರ, ಉಪಾಧ್ಯಕ್ಷರಾದ ಶ್ರೀಮತಿ ಲಲಿತಾ ಲೋಪೇಜ್, ಮೂರುರು ಅಧ್ಯಕ್ಷರಾದ ಶ್ರೀಮತಿ ಕಲ್ಪನಾ ಗೌಡ, ಉಪಾಧ್ಯಕ್ಷರಾದ ಶ್ರೀ ರವಿ ಗೌಡ, ವಕೀಲರಾದ ಶ್ರೀ ಜಯಂತ ನಾಯ್ಕ, ಮುಖಂಡರಾದ ವಿ ಎಲ್ ನಾಯ್ಕ, ಶ್ರೀ ವಿನಾಯಕ ಅಂಬಿಗ, ಶ್ರೀ ಉದಯ ನಾಯ್ಕ, ಶ್ರೀ ಗಿರಿಯಾ ಗೌಡ, ಶ್ರೀ ದೇವು ಗೌಡ ,ರಾಜು ಅಂಬಿಗ ದಿವಗಿ ಹಾಗೂ ಸಮಸ್ತ ಅಳಕೋಡ,ಮೂರೂರು,ಕಲ್ಲಬ್ಬೆ ಹಾಗೂ ದಿವಗಿ ಗ್ರಾಮದ ಸಮಸ್ತ ನಾಗರೀಕರು ಉಪಸ್ಥಿತರಿದ್ದರು.