ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಆಶೀರ್ವಾದಗಳೊಂದಿಗೆ ‘ಗೋರಕ್ಷಕ ಬಳಗ ಗೋಕರ್ಣ’ ಆಯೋಜನೆಯಲ್ಲಿ ಹಾಲುಹಬ್ಬ (ಕ್ಷೀರೋತ್ಸವ) ಇಂದು 18-06-2017 ರವಿವಾರ ಸಂಪನ್ನಗೊಂಡಿತು.

ರಾಣೆಬೆನ್ನೂರು ಶ್ರೀರಾಮಕೃಷ್ಣ ಆಶ್ರಮದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಸ್ವಾಮಿ ಪ್ರಕಾಶಾನಂದಜೀ ಮಹಾರಾಜ್, ಶ್ರೀ ಶ್ರೀ ಸ್ವಾಮಿ ಗುರುದೇವ ಚರಣಾನಂದಜೀ ಮಹಾರಾಜ್, ಶ್ರೀ ಶ್ರೀ ಸ್ವಾಮಿ ಸುಮೇಧಾನಂದಜೀ ಮಹಾರಾಜ್ ಇವರುಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇ ಶಿವರಾಮ ಮಯ್ಯರ್, ಶ್ರೀ ಮಂಗಲಮೂರ್ತಿ ಸಭಾಹಿತ, ಶ್ರೀ ರಮೇಶ ಪ್ರಸಾದ, ಶ್ರೀ ಲಂಬೋಧರ ಸಭಾಹಿತ , ಶ್ರೀ ಜಿ ಕೆ ಹೆಗಡೆ ಹಾಗೂ ಊರ ನಾಗರೀಕರು, ಗೋಪ್ರೇಮಿಗಳು ಪಾಲ್ಗೊಂಡಿದ್ದರು.

RELATED ARTICLES  ಸಂಪನ್ನವಾದ ಹೊನ್ನಾವರ ಎಸ್.ಡಿ.ಎಂ ಕಾಲೇಜಿನ ವಾರ್ಷಿಕೋತ್ಸವ.