ಸೌತೇಕಾಯಿಯನ್ನು ಸಂತಸದಿಂದ ತಿನ್ನಿ ಸಕಲ ಅನುಕೂಲಗಳಿವೆ ಎಂದು ಸಲಹೆ ನೀಡುತ್ತಾರೆ ತಿಳಿದವರು. ಎಲ್ಲಾ ವಯೋಮಾನದವರು ಪ್ರತಿದಿನ ತಪ್ಪದೇ ಸೇವಿಸಲೇ ಬೇಕಾದಂತ ಪದಾರ್ಥ ಇದಾಗಿದೆ. ಸಾಮಾನ್ಯವಾಗಿ ಊಟದೊಂದಿಗೆ ಸೇವಿಸುವುದು ನಮಗೆ ರೂಡಿ, ಆದರೆ ಸೌತೇಕಾಯಿಯನ್ನು ಸಮಯ, ಸಂದರ್ಭ ನೋಡದೆ ಕಣ್ಣಿಗೆ ಕಂಡಗಾ, ಕೈಗೆ ಸಿಕ್ಕಾಗ ತಿನ್ನುತ್ತಿರಬೇಕು, ನಮ್ಮ ಮನೆಗಳಲ್ಲಿ ಹಿರಿಯರು ಅಡುಗೆಗೆ ಕುಳಿತರೆ ಸೌತೇಕಾಯಿಯನ್ನು ಕಡ್ಡಾಯವಾಗಿ ತಿನ್ನುವುದನ್ನು ನಾವು ಗಮನಿಸಿರುತ್ತೆವೆ. ಇದರಲ್ಲಿ ಹಿಂದಿನವರ ಉತ್ತಮ ಆರೋಗ್ಯದ ಗುಟ್ಟು ಕೂಡ ಅಡಗಿತ್ತು ಎಂಬುದು ಸತ್ಯ. ಈ ಗುಟ್ಟನ್ನು ಅರಿತವರು ಸೌತೇಕಾಯಿ ಜೊತೆಗಿನ ನಂಟನ್ನು ಬಿಡಲಾರರು. ಆದರೆ ಇತ್ತೀಚಿನ ದಿನಗಳಲ್ಲಿ ಯುವಜನಾಂಗವು ಸೌತೇಕಾಯಿಯ ಸಹವಾಸ ಮಾಡುವುದನ್ನೇ ಬಿಟ್ಟಿದ್ದಾರೆ. ಇದರ ಪರಿಣಾಮ ಪೌಷ್ಠಿಕಾಂಶದ ಕೊರತೆಯಿಂದ ಬಳಲುತ್ತಿದ್ದಾರೆ. ಸೌತೇಕಾಯಿ ಸೇವನೇ ಮಾಡುವುದನ್ನು ಬಿಟ್ಟು, ಮುಖ, ಮೈ, ಕೈಗೆ ಮೆತ್ತಿಕೊಳ್ಳುವುದೇ ಹೆಚ್ಚಾಗಿದೆ. ಇದು ಅಲ್ಪಕಾಲಿಕ ಸೌಂದರ್ಯಕ್ಕೆ ಸೀಮಿತ. ಅದೇ ಸೇವನೆ ಮಾಡುವುದರಿಂದ ಆರೋಗ್ಯ ವೃದ್ಧಿಯಾಗುವುದಲ್ಲದೇ ಶಾಶ್ವತ ಬಾಹ್ಯ ಸೌಂದರ್ಯವು ನಮ್ಮದಾಗಲಿದೆ.
ಸೌತೇಕಾಯಿ ಸೇವಿಸುವುದರಿಂದ ಉತ್ತಮ ಆರೋಗ್ಯಕ್ಕೆ ಸಿಗುವ ಲಾಭಗಳು.
> ಉರಿಮೂತ್ರ ನಿವಾರಣೆಯಾಗಲಿದೆ.
> ಜೀರ್ಣಕ್ರೀಯೆಗೆ ಸಹಕಾರಿಯಾಗಲಿದೆ.
> ದೇಹಕ್ಕೆ ಅವಶ್ಯಕವಾಗಿರುವ ಶಕ್ತಿ ಸಿಗಲಿದೆ.
> ದೇಹದಲ್ಲಿನ ನೀರಿನಾಂಶವನ್ನು ಹೆಚ್ಚಿಸುತ್ತದೆ.
> ಬೇಸಿಗೆಯ ಬಾಯರಿಕೆನ್ನು ನಿವಾರಣೆ ಮಾಡುತ್ತದೆ.
> ಚರ್ಮದ ಕಾಂತಿ ವೃದ್ಧಿ, ಮೃದು ಚರ್ಮ, ಚರ್ಮದ ಮೇಲಿನ ಕಪ್ಪು ಕಲೆಗಳು ಮಾಯಾವಾಗಲಿವೆ.
> ಉಪ್ಪು, ಮೆಣಸಿನ ಜೊತೆ ಹೆಸರುಬೇಳೆ, ಸೌತೇಕಾಯಿ ಬೆರೆಸಿ ಕೊಸಂಬರಿ ರೂಪದಲ್ಲಿ ತಿಂದರೆ ಆರೋಗ್ಯದ ಜೊತೆಗೆ ನಾಲಿಗೆಯ ರುಚಿಯನ್ನು ಹೆಚ್ಚು ಮಾಡುತ್ತದೆ.