ವಿಜಯಪುರ.ಮಾ. 18 : ಚುನಾವಣಾ ಸಮೀಪಿಸುತ್ತಿದಂತೆ ಕರ್ನಾಟಕದಲ್ಲಿ ರಾಜಕೀಯ ಬೆಳವಣಿಗೆಗಳು ಜೋರಾಗಿಯೇ ನಡೆಯುತ್ತಿದ್ದು. ಮಾಜಿ ಡಿವೈಎಸ್ಪಿ ಅನುಪಮಾ ಶಣೈ ನೇತ್ರತ್ವದಲ್ಲಿ ಹೊಸ ಪಕ್ಷ ಇಂದು ಅಸ್ತಿತ್ವಕ್ಕೆ ಬಂದಿದೆ. ಯುಗಾದಿ ಹಬ್ಬದ ದಿನವೇ ತಮ‌್ಮ ಹೊಸ ಪಕ್ಷದ ಲಾಂಛನ ಬಿಡುಗಡೆ ಮಾಡಿದ್ದಾರೆ. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದ ಅನುಪಮ ಶಣೈ, ತಮ್ಮ ಭಾರತೀಯ ಜನಶಕ್ತಿ ಕಾಂಗ್ರೆಸ್ ಪಕ್ಷದ ಲಾಂಛನ ಬಿಡುಗಡೆ ಮಾಡಿದ್ದಾರೆ. ನಾಲ್ಕು ಬೆಂಡಿಕಾಯಿ ಇರುವ ಚೆಹ್ನೆಯನ್ನ ತಮ್ಮಪಕ್ಷದ ಚಿಹ್ನೆಯಾಗಿ ಬಿಡುಗಡೆ ಮಾಡಲಾಗಿದೆ.
ಭಾರತೀಯ ಜನಶಕ್ತಿ ಕಾಂಗ್ರೆಸ್ ಪಕ್ಷ ಹಾಗೂ ಚಿನ್ಹೆ ಅಧಿಕೃತವಾಗಿ ಉದ್ಘಾಟನೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಮಹಾದೇವಪ್ಪ ಉದ್ಘಾವಿ ಸೇರಿ ಸುಮಾರು ಕೇವಲ 12 ಜನ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಿವೈಎಸ್ಪಿ ಹುದ್ದೆಗೆ ರಾಜೀನಾಮೆ ನೀಡಿ ಹೊಸ ಪಕ್ಷ ಸ್ಥಾಪನೆ ಮಾಡಿರುವ ಅನುಪಮಾ ಶಣೈ, ಇದೇ ಮೊದಲ ಬಾರಿಗೆ ಒಬ್ಬ ರಾಜಕೀಯ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ.