ಆಲಿವ್ ರಿಡ್ಲೆ ಆಮೆಗಳು ಕೂರ್ಮ ಕುಲದಲ್ಲೇ ಅತ್ಯಂತ ವಿಶೇಷ ಪ್ರಜಾತಿ. ಈ ಆಮೆಗಳು ಆಗಾಗ ಅಪಾಯಕ್ಕೆ ಸಿಲುಕುತ್ತವೆ. ಇವುಗಳನ್ನು ಪಾರು ಮಾಡಲು ವಿಶ್ವದ ವಿವಿಧೆಡೆ ಪ್ರಯತ್ನಗಳು ನಡೆಯುತ್ತಿವೆ. ಮೆಕ್ಸಿಕೋದಲ್ಲಿ ಆಗತಾನೆ ಮೊಟ್ಟೆಗಳಿಂದ ಹೊರ ಬಂದ ಸಾವಿರಾರು ಅಮೆಗಳನ್ನು ಸಮುದ್ರಕ್ಕೆ ಬಿಡಲಾಗಿದೆ. ಮೆಕ್ಸಿಕೋದ ಓಕ್ಸಾಕಾ ರಾಜ್ಯದ ಕಾನ್‍ಸೆಪ್‍ಸಿಯಮ್ ಬಾಂಬಾ ಕಡಲ ಕಿನಾರೆಯಲ್ಲಿ ಅನೇಕ ಜನರು ಜಮಾಯಿಸಿದ್ದರು. ಇದಕ್ಕೆ ಕಾರಣವೂ ಇತ್ತು. ಅವನತಿಯ ಅಂಚಿನಲ್ಲಿರುವ ಆಲಿವ್ ರಿಡ್ಲೆ ಜಾತಿಯ ಆಮೆಗಳನ್ನು ಮರಳಿ ಸಮುದ್ರಕ್ಕೆ ಬಿಡುವುದು ಇದರ ಉದ್ದೇಶವಾಗಿತ್ತು.

RELATED ARTICLES  ಅಕಾಡೆಮಿ ಅಧ್ಯಕ್ಷರ ವೀರಬಾಹುಕ, ಮೋಹನರ ಚಂದ್ರಮತಿ!

tort 1boo

ಸಹಸ್ರಾರು ಆಲಿವ್ ರಿಡ್ಲೆ ಆಮೆಗಳು ಪ್ರತಿ ವರ್ಷ ಮೆಕ್ಸಿಕೋದ ಓಕ್ಸಾಕಾ ಪೆಸಿಫಿಕ್ ಸಮುದ್ರ ದಂಡೆಗಳಿಗೆ ವಲಸೆ ಬಂದು ಮೊಟ್ಟೆಗಳನ್ನು ಇಡುತ್ತವೆ. ಹೊರಬಂದ ಮರಿಗಳನ್ನು ಮತ್ತೆ ಸಮುದ್ರಕ್ಕೆ ಬಿಡುವ ಕಾರ್ಯಕ್ರಮ ಅಲ್ಲಿ ನಡೆಯುತ್ತದೆ. ಸ್ಥಳೀಯ ಕುಟುಂಬಗಳು ಕಡಲ ಕಿನಾರೆಗೆ ಬಂದು ಮರಳಿನಿಂದ ಮರಿ ಆಮೆಗಳು ಹೊರ ಬಂದು ಸಾಗರ ಸೇರಲು ನೆರವಾಗುತ್ತವೆ. ಸ್ಥಳೀಯ ಆಮೆ ಸಂತತಿ ರಕ್ಷಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಸಾಮೂಹಿಕ ಬಿಡುಗಡೆ ಕಾರ್ಯಕ್ರಮ ನಡೆಯುತ್ತ

ಒಕ್ಸಾಕಾದ ಕರಾವಳಿಯಲ್ಲಿ ಅಮೆ ಮಾಂಸ ಮತ್ತು ಮೊಟ್ಟೆ ಸಾಂಪ್ರ ದಾಯಿಕ ಆಹಾರ. ಅಲ್ಲಿನ ಮಾರು ಕಟ್ಟೆಗಳಲ್ಲಿ ಇವುಗಳನ್ನು ಮುಕ್ತವಾಗಿ ಮಾರಾಟ ಮಾಡಲಾಗುತ್ತದೆ. ಆಮೆ ಮಾಂಸ ಮತ್ತು ಮೊಟ್ಟೆ ಮಾರಾಟದ ಮೇಲೆ ಕಾನೂನು ನಿಷೇಧ ಹೇರಿದ್ದರೂ ಅಲ್ಲಿ ಆಮೆಗಳ ಬೇಟೆ ಅವ್ಯಾಹತವಾಗಿ ಮುಂದುವರಿದಿವೆ.
ಶತಶತಮಾನಗಳಿಂದಲೂ ಉಭಯಚರ ಜೀವಿಗಳಾದ ಆಲಿವ್ ರಿಡ್ಲೆ ಆಮೆಗಳನ್ನು ಮಾಂಸ, ಮೊಟ್ಟೆ ಮತ್ತು ಚರ್ಮಕ್ಕಾಗಿ ನಿರಂತರವಾಗಿ ಬೇಟೆಯಾಡಲಾಗುತ್ತಿದ್ದು, ಅವುಗಳ ಸಂತತಿ ವಿನಾಶದತ್ತ ಸಾಗಿದೆ. ಈ ಪ್ರಜಾತಿಯ ಆಮೆಗಳ ರಕ್ಷಣೆಗಾಗಿ ವಿಶ್ವದ ವಿವಿಧೆಡೆ ಪ್ರಯತ್ನಗಳು ಮುಂದು ವರಿದಿರುವುದು ಸಮಾಧಾನಕರ ಸಂಗತಿ.

RELATED ARTICLES  ತಲೆತಲಾಂತರದಿಂದ ಬ್ರಾಹ್ಮಣ ಗಳಿಸುತ್ತಿರುವ ಯಶಸ್ಸಿನ ಗುಟ್ಟು ಬಯಲು.