ಯಲ್ಲಾಪುರ : ಪಟ್ಟಣ ವ್ಯಾಪ್ತಿಯ ಅತೀ ದೊಡ್ಡ ನಗರ ಎಂದು ಕರೆಯಲ್ಪಡುವ ಕಾಳಮ್ಮನಗರಕ್ಕೆ ಮತ್ತೆ ಟಿಪ್ಪು ನಗರವೆಂಬ ಹಣೆಪಟ್ಟಿ ಬಂದಿದೆ, ಗೂಗಲ್ ಮ್ಯಾಪ್ ನಲ್ಲಿ ಕಾಳಮ್ಮ ನಗರ ಹೆಸರನ್ನು ಅಳಿಸಿ ಹಾಕಿ ಟಿಪ್ಪು ನಗರ ಎಂದು ನಮೂದಿಸಲಾಗಿದೆ. ಇದು ಎರಡನೇ ಬಾರಿ ನಡೆಯುತ್ತಿರುವ ಘಟನೆಯಾಗಿದ್ದು, ಕಾಳಮ್ಮನಗರ ನಿವಾಸಿಗಳು ಅದರಲ್ಲಿಯೂ ಹಿಂದುಗಳ ಕಣ್ಣು ಕೆಂಪಾಗಿಸಿದೆ.

ಬಹಳ ವರ್ಷದ ಹಿಂದಿನಿಂದ ಕಾಳಮ್ಮ ನಗರ ಪ್ರದೇಶದಲ್ಲಿ ಜನ ವಾಸ್ತವ್ಯ ಪ್ರಾರಂಭವಾದಾಗಿನಿಂದ, ಸುಮಾರು ಎರಡು ನೂರು ನೂರು ನೂರು ವರ್ಷಗಳ ಹಿಂದಿನಿಂದ ಕಾಳಮ್ಮನಗರವೆಂದೆ ಕರೆಯಲ್ಪಡುವ ಪಟ್ಟಣದ ವಿಶಾಲವಾದ ಪ್ರದೇಶವಾಗಿದೆ ಇದೀಗ ಕೆಲವು ಕಿಡಿಗೇಡಿಗಳು ಗೂಗಲ್ ಮ್ಯಾಪ್‍ನಲ್ಲಿ ಕಾಳಮ್ಮ nagar ಎನ್ನುವ ಹೆಸರನ್ನು ಅಳಿಸಿ ಹಾಕಿ ಟಿಪ್ಪು ನಗರ ಎಂದು ಹೆಸರು ಬದಲಾಯಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ಇದೇ ರೀತಿ ಕಾಳಮ್ಮ ನಗರದ ಹೆಸರನ್ನು ಬದಲಾಯಿಸಿ ಟಿಪ್ಪು ನಗರ ಎಂದು ಹೆಸರಿಸಲಾಗಿತ್ತು. ಅನೇಕ ಜನರ ಪ್ರಯತ್ನದ ಫಲವಾಗಿ ಗೂಗಲ್ ಕಂಪನಿಯ ಮತ್ತು ಕಾಳಮ್ಮ ನಗರ ಎಂದು ಹೆಸರನ್ನು ಪರಿವರ್ತಿಸಿತ್ತು,

ಆ ಸಂದರ್ಭದಲ್ಲಿ ಕಾಳಮ್ಮನಗರವೂ ಸೇರಿದಂತೆ ಯಲ್ಲಾಪುರ ಪಟ್ಟಣ ವ್ಯಾಪ್ತಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು, ಕಾಳಮ್ಮ ನಗರ ಮತ್ತು ಟಿಪ್ಪುನಗರದ ಪರವಾಗಿ ವಿರುದ್ಧವಾಗಿ ಮಾತುಕತೆಗಳು ಪ್ರಾರಂಭವಾಗಿದ್ದವು. ಕಾಳಮ್ಮ ನಗರ ಎಂದು ಹೆಸರು ಬದಲಾಯಿಸಿದ ನಂತರ ಈ ವಿವಾದಗಳಿಗೆ ತೆರೆ ಬಿದ್ದಿತು.

RELATED ARTICLES  ಜಪಾನಿನಲ್ಲಿರುವ ವಿಜ್ಞಾನಿಯಿಂದ ತವರಿನ ಶಾಲೆಗೆ ಕೊಡುಗೆ

ಇದೀಗ ಮತ್ತೆ ವಿವಾದ ತಲೆಯೆತ್ತಿದ್ದು, ಕಾಳಮ್ಮ ನಗರ ಹೆಸರು ಬದಲಾಯಿಸಿದ ಇರುವುದಕ್ಕೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಪದೇ ಪದೇ ಇಂತಹ ಘಟನೆಗಳು ಮರುಕಳಿಸಿ ಸಮಾಜದ ಸ್ವಾಸ್ಥ್ಯ ಹಾಳುಗೆಡವಲು ಕೆಲವು ಕಿಡಿಗೇಡಿಗಳು ಪ್ರಯತ್ನಿಸಿರುವ ಕುರಿತು ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

ಕಾಳಮ್ಮ ನಗರ ನಿವಾಸಿಗಳಾದ ಮಹೇಶ ನಾಯ್ಕ, ದಿಲೀಪ ಅಂಬೀಗ, ರಮೇಶ ಕಮ್ಮಾರ, ಹಿಂದೂ ಸಂಘಟನೆಯ ಪ್ರಮುಖ ಸೋಮೇಶ್ವರ ನಾಯ್ಕ, ಇನ್ನೂ ನೂರಾರು ಜನ ತಮ್ಮ ಅಸಮಾದಾನ ವ್ಯಕ್ತಪಡಿಸಿ ಇಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಕೂಡಲೇ ಟಿಪ್ಪು ನಗರವನ್ನು ತೆರವುಗೊಳಿಸಿ ಕಾಳಮ್ಮನಗರ ಎಂದು ಶಾಶ್ವತವಾಗಿ ಗೂಗಲ್ ಮ್ಯಾಪ್ನಲ್ಲಿ ಅಳವಡಿಸಬೇಕು. ಸಮಾಜದ ಸ್ವಾಸ್ಥ್ಯ ಹಾಳು ಮಾಡುವಂತಹ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಟಿಪ್ಪುನಗರ ಹೆಸರು ಬದಲಾವಣೆ ಆಗದೇ ಇದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಕೂಡ ಅವರು ಎಚ್ಚರಿಸಿದ್ದಾರೆ.

RELATED ARTICLES  ಸಾಧಕರನ್ನು ಸನ್ಮಾನಿಸಿದ ಅಂಕೋಲಾದ ಕಲ್ಪವೃಕ್ಷ ವಾಟ್ಸಪ್ ಬಳಗ

ಪಟ್ಟಣದ ಕಾಳಮನಗರಕ್ಕೆ ಅಲ್ಲಿರುವ ಕಾಳಮ್ಮದೇವಿ ದೇವಸ್ಥಾನವಿರುವ ಕಾರಣಕ್ಕೆ ವಿಶಾಲವಾದ ಪ್ರದೇಶವನ್ನು ಕಾಳಮ್ಮನಗರವೆಂದೆ ಕರೆಯಲ್ಪಡುತ್ತದೆ, ಸರಕಾರದ ದಾಖಲೆಯಲ್ಲಿಯೂ ಕಾಳಮ್ಮನಗರವೆಂದೆ ದಾಖಲಿಸಲಾಗಿದೆ, ಇದೇ ಭಾಗದಲ್ಲಿರುವ ಕೆರೆಗೆ ಕಾಳಮ್ಮನಗರ ಕೆರೆಯೆಂದು ಕರೆಯಲಾಗುತ್ತದೆ, ಆದರೆ ಯಾವುದೇ ತಪ್ಪಿಗೆ ಅವಕಾಶ ಕೊಡದ ಗೂಗಲ್ ನಂತಹ ಸಂಸ್ಥೆ ತನ್ನ ನಕಾಶೆಯಲ್ಲಿ ಕಾಳಮ್ಮನಗರವನ್ನು ಟಿಪ್ಪು ನಗರವೆಂದು ಬದಲಾಯಿಸಿರುವುದು ವಿಪರ್ಯಾಸವಾಗಿದೆ.
ಪಟ್ಟಣದಲ್ಲಿ ಈ ಹಿಂದೆ ಬಹಳಷ್ಟು ಓಣಿಗಳು, ರಸ್ತೆಗಳು ತಮ್ಮ ಮೂಲ ಹೆಸರನ್ನು ಕಳೆದುಕೊಂಡಿದ್ದು, ಡೊಬಿಗಲ್ಲಿ, ಇಸ್ಲಾಂ ಗಲ್ಲಿಯಾಗಿ, ಮಹಿಳಾ ಮಂಡಳ ರಸ್ತೆ ವಲಿಶಾಗಲ್ಲಿಯಾಗಿ ಪರಿವರ್ತನೆಯಾಗಿವೆ. ಇದು ಅಧಿಕೃತವಾಗಿ ದಾಖಲೆಯಲ್ಲಿದೆ, ಪಟ್ಟಣದ ದೇವಿ ದೇವಸ್ಥಾನ ರಸ್ತೆಯನ್ನು ಕೂಡ ಹೆಸರು ಬದಲಿಸುವ ಪ್ರಯತ್ನ ಹಿಂದೆ ನಡೆದಿದ್ದು, ಸ್ಥಳೀಯರ ತೀವೃ ವಿರೋದದಿಂದಾಗಿ ದೇವಿ ದೇವಸ್ಥಾನ ರಸ್ತೆ ಅಥವಾ ದೇವಿ ಟೆಂಪಲ್( ಡಿ.ಟಿ ರಸ್ತೆಯಾಗಿ ಉಳಿಸಕೊಳ್ಳಲಾಗಿದೆ. ಇದೀಗ ಗೂಗಲ್ ತನ್ನ ನಕಾಶೆಯಲ್ಲಿ ಕಾಳಮ್ಮನಗರ ಹೆಸರು ಬದಲಾಯಿಸಿರುವುದು ಮತ್ತೊಂದು ಹೋರಾಟಕ್ಕೆ ನಾಂದಿಯಾಗಲಿದೆ ಎನ್ನಲಾಗುತ್ತಿದೆ. ಕೂಡಲೆ ಗೂಗಲ್ ತನ್ನ ತಪ್ಪನ್ನು ಸರಿ ಪಡಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ಗೂಗಲ್ ವಿರುದ್ದ ಕಾನೂನಾತ್ಮಕ ಹೋರಾಟ ನಡೆಸಲಾಗುವುದೆಂದು ಪ.ಪಂ ಸದಸ್ಯ ಯೋಗೇಶ ಹಿರೇಮಠ ತಿಳಿಸಿದ್ದಾರೆ.