ಕುಮಟಾ : ಬಾಡದ ಶ್ರೀ ಕಾಂಚಿಕಾಂಬ ದೇವಸ್ಥಾನದ ಹುಂಡಿಯನ್ನು ಇಂದು ಸಾರ್ವಜನಿಕರ ಸಮಕ್ಷಮದಲ್ಲಿ ಲೆಕ್ಕಾಚಾರ ಮಾಡಲಾಯಿತು.
ಕಳೆದ ಕೆಲ ದಿನದ ಹಿಂದೆ ಅಷ್ಟೆ ದೇವಾಲಯಕ್ಕೆ ನೂತನ ಆಡಳಿತ ಮಂಡಳಿಯನ್ನು ನೇಮಿಸಲಾಗಿದ್ದು ಇಂದು ಆಡಳಿತ ಮಂಡಳಿಯ ಅಧ್ಯಕ್ಷ ಜೆ.ಎಸ್ ನಾಯ್ಕ್ ಹಾಗೂ ಆಡಳಿತ ಮಂಡಳಿಯ ಎಂಟು ಜನ ಸದ್ಯರ ಸಮ್ಮುಖದಲ್ಲಿ ದೇವಾಲಯದ ಹುಂಡಿಯಲ್ಲಿರುವ ಹಣವನ್ನು ಲೆಕ್ಕಾಚಾರ ಮಾಡಲಾಯಿತು.
ಈ ಬಾರಿಯ ವಿಶೇಷವೆಂದರೆ ಹುಂಡಿಯಲ್ಲಿರುವ ಹಣದ ಲೆಕ್ಕಾಚಾರಕ್ಕೆ ಆಡಳಿತ ಮಂಡಳಿಯು ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡಿರುವದು.
“ಕಾಂಚಿಕಾ ಪರಮೇಶ್ವರಿ ದೇವಿಯು ಗ್ರಾಮದೇವಿಯಾಗಿದ್ದು ಈ ದೇವಿಗೆ ಸುತ್ತಮುತ್ತಲಿನ ಗ್ರಾಮದವರು ನಡೆದುಕೊಳ್ಳುತ್ತಾರೆ. ಆದ್ದರಿಂದ ಇಲ್ಲಿನ ಆಡಳಿತದಲ್ಲಿ ಸಂಪೂರ್ಣ ಪಾರದರ್ಶಕತೆ ತರುವುದೇ ನಮ್ಮ ಗುರಿ” ಎಂದು ದೇವಸ್ಥಾನ ಆಡಳಿತ ಮಂಡಳಿರ ಅಧ್ಯಕ್ಷ ಜೆ.ಎಸ್ ನಾಯ್ಕ್ ಹೇಳಿದರು.