ಭಟ್ಕಳ:ಕ್ಷುಲ್ಲಕ ಕಾರಣಗಳಿಗೆ ಪರಸ್ಪರ ಹೊಡೆದಾಡಿಕೊಂಡು ಠಾಣೆಗೆ ದೂರು ನೀಡಲು ಹೋದ ವ್ಯಕ್ತಿಯ ಮೇಲೆ ಠಾಣೆಯಲ್ಲೆ ಇಬ್ಬರು ಯುವಕರು ಹಲ್ಲೆ ನಡೆಸಿ ಗಾಯಗೊಳಿಸಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಬಂಧಿಸಿರುವ ಘಟನೆ ನಗರ ಪೊಲೀಸ್ ಠಾಣೆಯಲ್ಲಿ ಭಾನುವಾರ ನಡೆದಿದೆ.

ಬಂಧಿತ ಆರೋಪಿಗಳನ್ನು ಸಲ್ಮಾನ ಪಠಾಣ್ (25) ಹಾಗೂ ಅಬ್ದುಲ್ ಮೌಸೀನ್ (28) ಎಂದು ಗುರುತಿಸಲಾಗಿದೆ. ಹಲ್ಲೆಗೊಳಗಾಗಿ ಗಾಯಗೊಂಡಿರುವ ವ್ಯಕ್ತಿಯನ್ನು ಗುಳ್ಮಿಯ ಶಬ್ಬಿರ್ ಆಹಮದ್ ಎಂದು ತಿಳಿದುಬಂದಿದ್ದು ಅವರನ್ನು ಚಿಕಿತ್ಸೆಗಾಗಿ ಕುಂದಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. 

RELATED ARTICLES  ಪೌರಕಾರ್ಮಿಕರಿಗೆ ಸೌಕರ್ಯವೊದಗಿಸಲು ಮನವಿ

ಇಲ್ಲಿನ ಮುಠ್ಠಳ್ಳಿ ಗ್ರಾ.ಪಂ.ನ ಬಿಳಲಖಂಡ(ಗುಳ್ಮೆ)ಯಲ್ಲಿ ದೂರದ ಸಂಬಂಧಿಕನೋರ್ವನ ಸಂಬಂಧಿ ಯುವತಿಗೆ ಹಲ್ಲೆ ಮಾಡಿದ ಎಂಬ ಕಾರಣಕ್ಕೆ ಯುವತಿಯ ಮಾವ ಶಬ್ಬಿರ್ ಎನ್ನುವವರು ಗ್ರಾಮೀಣ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಲು ಹೋದಾಗ ಇಬ್ಬರು ಯುವಕರು ಶಬ್ಬಿರ ಮೇಲೆ ಎರಗಿ ವ್ಯಕ್ತಿಯ ತಲೆಗೆ ಕಲ್ಲಿನಿಂದ ಬಲವಾಗಿ ಹೊಡೆದು ಹಲ್ಲೆ ಮಾಡಿದ್ದಾರೆ ಎಂದು ಎಮ್.ಎ.ರೆಹೆನಾ ಶೇಖ್ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕ್ರಮ ಜರಗಿಸಿದ್ದಾರೆ. 

RELATED ARTICLES  ಅಪಘಾತ : ಓರ್ವ ಸಾವು : ಇಬ್ಬರು ಗಂಭೀರ.