ಯಲ್ಲಾಪುರ ; ಪಟ್ಟಣ ವ್ಯಾಪ್ತಿಯ ಕಾಳಮ್ಮನಗರ ಆಶ್ರಯ ಕಾಲೋನಿಯಲ್ಲಿ ಸಿಡಿಲು ಬಡಿದ ಪರಿಣಾಮ ಮೂರು ತೆಂಗಿನ ಮರಗಳು ಸುಟ್ಟು ಹೋಗಿರುವ ಘಟನೆ ಸೋಮವಾರ ಸಂಜೆ ನಾಲ್ಕು ಗಂಟೆಯ ಸುಮಾರಿಗೆ ನಡೆದಿದೆ.

ಕಾಳಮ್ಮನಗರ ಅಕ್ಷಯ ಕಾಲೋನಿ ನಿವಾಸಿ ಅಬ್ದುಲ್ ಖಾದರ್ ಸತ್ತಾರ್, ಹಾಗೂ ಮೋಹನ ಆಚಾರಿ ಎಂಬುವರರ ಮನೆಯ ಪಕ್ಕ ನೆಡಲಾದ ಸುಮಾರು 30 ಅಡಿ ಎತ್ತರದ ಮೂರು ತೆಂಗಿನ ಮರ ಸಿಡಿಲಿಗೆ ಬಲಿಯಾಗಿದೆ.

RELATED ARTICLES  ವಿದ್ಯುತ್‌ ಉತ್ಪಾದನೆ ಹೆಚ್ಚಿಸಲಾಗಿದೆ : ಲಿಂಗನಮಕ್ಕಿಯ ನೀರು ಬಿಟ್ಟಿಲ್ಲ ಭಯ ಬೇಡ.

ಸೋಮವಾರ ಸಂಜೆ ಏಕಾಏಕಿ ಗಾಳಿ ಸಹೀತ ತುಂತುರು ಮಳೆಹನಿ ಕಾಣಿಸಿಕೊಂಡಿದ್ದು, ಸಿಡಿಲು ಗುಡುಗು ಹಾಗೂ ಮಿಂಚಿನ ಅರ್ಭಟ ಹೆಚ್ಚಾಗಿತ್ತು. ಅವುಗಳಲ್ಲಿ ಒಂದು ಸಿಡಿಲು ಅಬ್ದುಲ್ ಖಾದರ್ ಅವರ ಮನೆಯ ಪಕ್ಕದ ತೆಂಗಿನ ಮರ ಹಾಗೂ ಮೋಹನ ಆಚಾರಿಯವರ ತೆಂಗಿನ ಮರದ ಮೇಲೆ ಬಿದ್ದಿದೆ. ತೆಂಗಿನ ಮರ ಹೊತ್ತಿ ಉರಿಯಲಾರಂಭಿಸಿತು. ಅಕ್ಕಪಕ್ಕದ ಯುವಕರು ಬೇರೆಬೇರೆ ಮನೆಗಳ ಮೇಲೆ ಹತ್ತಿ ಉರಿಯುತ್ತಿರುವ ಮರಕ್ಕೆ ನೀರನ್ನು ಸಿಂಪಡಿಸುವ ಕೆಲಸ ಮಾಡಿದರಾದರೂ ಮರಗಳು ಅದಾಗಲೇ ಭಾಗಶಃ ಸುಟ್ಟು ಕರಕಲಾಗಿದ್ದವು.

RELATED ARTICLES  ಯಕ್ಷಗಾನ ಕಲೆಯಿಂದ ಸಿಗುವ ಸಂದೇಶ ಜೀವನದ ಮೌಲ್ಯವನ್ನು ಹೆಚ್ಚಿಸುತ್ತದೆ.

ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ದಳದವರು ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.