ಯಲ್ಲಾಪುರ ; ಬಾಲಗಂಗಾಧರ ತಿಲಕ್ ಹಿಂದುಗಳನ್ನು ಒಗ್ಗೂಡಿಸಲು ಸಾರ್ವಜನಿಕ ಗಜಾನನೋತ್ಸವವನ್ನು ಪರಿಚಯಿಸಿದರು, ಅದೇ ರೀತಿ ಯುಗಾದಿ ಉತ್ಸವಗಳು ಕೂಡ ಹಿಂದುಗಳನ್ನು ಇನ್ನಷ್ಟು ಬಲಗೊಳ್ಳುವಂತೆ ಸಂಘಟಿಸಿ ಬೇಕೆಂದು ಕರ್ನಾಟಕ ಹಿಂದೂ ಯುವವಾಹಿನಿಯ ಚೈತ್ರ ಕುಂದಾಪುರ ಹೇಳಿದರು.

ಅವರು ಸೋಮವಾರ ಸಂಜೆ ಪಟ್ಟಣದ ಗ್ರಾಮದೇವಿ ದೇವಸ್ಥಾನದ ಸಭಾಭವನದಲ್ಲಿ ಯುಗಾದಿ ಉತ್ಸವದ ಅಂಗವಾಗಿ ಧರ್ಮ ಜಾಗೃತಿ ಕಾರ್ಯಕ್ರಮದಲ್ಲಿ ವೀರ ಸಂದೇಶ ನೀಡಿದರು. ಯುಗಾದಿ ಉತ್ಸವಗಳು ಅಥವಾ ಇನ್ನಿತರ ಹಬ್ಬಗಳು ನಮ್ಮ ಮಧ್ಯೆ ಬಾಂಧವ್ಯವನ್ನು ಬಲಗೊಳಿಸಬೇಕು, ಪಾಲಕರು ಮಕ್ಕಳ ಓದು ಒಂದನ್ನೇ ತಲೆಯಲ್ಲಿ ತುಂಬಿಕೊಂಡು ಕುಟುಂಬದವರೆಲ್ಲ ಕೂಡಿ ಸಂಭ್ರಮಿಸುವ ಹಿಂದೂ ಹಬ್ಬಗಳ ಆಚರಣೆಯಿಂದ ದೂರವಿಡುತ್ತಿದ್ದಾರೆ. ಮುಂದೊಂದು ದಿನ ಇದೇ ಮಕ್ಕಳು ಪಾಲಕರನ್ನು ವೃದ್ಧಾಶ್ರಮಕ್ಕೆ ಕಳಿಸಲಿದ್ದಾರೆ. ಹಬ್ಬ-ಹರಿದಿನ ಜಾತ್ರೆಗಳಲ್ಲಿ ಕುಟುಂಬದವರೆಲ್ಲರೂ ಪಾಲ್ಗೊಳ್ಳುವುದು ಅವರು ಮದ್ಯ ಬಾಂಧವ್ಯವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.

ನಮ್ಮ ಆಚಾರ-ವಿಚಾರ ಆಚರಣಾ ಪಧ್ಧತಿ ಉಡುಗೆ ತೊಡುಗೆಗಳನ್ನು ಪ್ರಶ್ನಿಸುವ ಮತ್ತು ಪ್ರಶ್ನಿಸಿದ್ದನ್ನು ಅನುಸರಿಸುವ ಜನರ ಸಂಖ್ಯೆ ಹೆಚ್ಚುತ್ತಿದೆ. ನಮ್ಮ ಎಲ್ಲ ಪದ್ಧತಿಗಳಿಗೂ ಒಂದು ವೈಜ್ಞಾನಿಕ ತಳಹದಿ ಇದೆ‌. ನಾವು ನಮ್ಮತನವನ್ನು ನಾವೆಂದೂ ಮರೆಯಬಾರದು ಎಂದು ಅವರು ಕಿವಿಮಾತು ಹೇಳಿದರು.

ಇತಿಹಾಸದುದ್ದಕ್ಕೂ ಹಿಂದೂ ದೇವಾಲಯಗಳನ್ನು ಇಸ್ಲಾಮಿಕರಣಗೊಳ್ಳುತ್ತ ಬಂದಿರುವುದನ್ನು ನಾವು ಕಾಣುತ್ತಿದ್ದೇವೆ. ಅದೇ ರೀತಿ ಯಲ್ಲಾಪುರದ ಕಾಳಮ್ಮನಗರವನ್ನು ಇಸ್ಲಾಮೀಕರಣ ಗೊಳಿಸುವ ಉದ್ದೇಶದಿಂದ ಟೀಪ್ಪುನಗರ ಎಂದು ಮರುನಾಮಕರಣ ಮಾಡಲಾಗಿದೆ. ಇದು ಹೀಗೆಯೇ ಮುಂದುವರೆದರೆ ನಮ್ಮ ಮನೆಗಳ ಮೇಲೆ ಮಸಿದಿಗಳ ಗೋಪುರಗಳು ನಿರ್ಮಾಣವಾಗಲಿವೆ ಎಂದು ಎಚ್ಚರಿಸಿದ ಅವರು, ಇಂತಹ ಬೆಳವಣಿಗೆಗಳನ್ನು ಮೊಳಕೆಯಲ್ಲಿಯೇ ಚಿವುಟಿ ಬಿಡಬೇಕು ಬೆಳೆಯಲು ಬಿಟ್ಟರೆ ನಮ್ಮನ್ನು ಇನ್ನಷ್ಟು ತೊಂದರೆಗೆ ಸಿಲುಕಿಸುತ್ತವೆ ಎಂದು ಹೇಳಿದರು.

RELATED ARTICLES  ‘ಹಣತೆ’ ಮುಂಡಗೋಡ ತಾಲೂಕು ಘಟಕ ಉದ್ಘಾಟನೆ ಫೇ. 12 ಕ್ಕೆ.

ಹಿಂದೂ ಯುವತಿಯರು ಲವ್ ಜಿಹಾದ್, ಸೆಕ್ಸ್ ಜಿಹಾದ್ ಬಗ್ಗೆ ಎಚ್ಚರ ವಹಿಸಬೇಕು ಎಂದ ಚೈತ್ರಾ ಕುಂದಾಪುರ, ಅನ್ಯ ಧರ್ಮಿಯರು ಪ್ರೀತಿ ಪ್ರೇಮ ಹಾಗೂ ಕಾಮದ ಮಧ್ಯೆ ಸಿಲುಕಿಸಿ ಅವರನ್ನು ಭಯೋತ್ಪಾದಕರ ವೇಶ್ಯೆಯರನ್ನಾಗಿ, ಮನವ ಬಾಂಬಗಳಾಗಿ, ಹಿಂದುಗಳ ತಲೆಯನ್ನು ತೆಗೆಯುವ ಯಂತ್ರಗಳನ್ನಾಗಿ ಮಾರ್ಪಡಿಸಿಯಾರು ಎಂದು ಎಚ್ಚರಿಸಿದರು.

ಪೋಲಿಸ್ ಇಲಾಖೆಯ ಅಧಿಕೃತ ಮಾಹಿತಿಯ ಪ್ರಕಾರ ಕಾಸರಗೋಡಿನಿಂದ ಕಾರವಾರದವರೆಗೆ ಕಳೆದ ಹತ್ತು ವರ್ಷದಲ್ಲಿ 32 ಸಾವಿರ ಯುವತಿಯರು ಲವ್ ಜಿಹಾದ್ ಗೆ ಬಲಿಯಾಗಿದ್ದಾರೆ. ಯಾವುದೇ ಹೋರಾಟ ಹೊಡೆದಾಟಗಳಿಗೆ ಜಗ್ಗದ ಹಿಂದೂ ಯುವಕರು ತಮ್ಮ ಮನೆಯ ಹೆಣ್ಣು ಮಕ್ಕಳ ವಿಷಯಕ್ಕೆ ಬಂದಾಗ ಅತ್ಯಂತ ಭಾವುಕರಾಗುತ್ತಾರೆ. ಲವ್ ಜಿಹಾದ್ ಅಪಾಯಕಾರಿಯಾಗಿದ್ದು ಈ ಕುರಿತು ಯುವಕ-ಯುವತಿಯರು ಪಾಲಕರು ಜಾಗೃತಿವಹಿಸಬೇಕೆಂದು ಅವರು ಕರೆ ನೀಡಿದರು.

ಗ್ರಾಮದೇವಿ ದೇವಸ್ಥಾನದ ಟ್ರಸ್ಟಿ ರಾಜೇಂದ್ರಪ್ರಸಾದ ಭಟ್ ಮಾತನಾಡಿ, ಈ ಜಾತ್ರಾ ಸಮಯದಲ್ಲಿ ಸಹಾಯ ಮಾಡಿರುವ ಸ್ವಯಂ ಸೇವಕರು ಬಹಳಷ್ಟು ಶ್ರಮ ವಹಿಸಿದ್ದಾರೆ. ಅವರನ್ನು ಸನ್ಮಾನಿಸುವ ಕಾರ್ಯ ಇಂದು ಇಟ್ಟುಕೊಂಡಿದ್ದೇವೆ. ಯುಗಾದಿ ಶೋಭಾಯಾತ್ರೆ ಚನ್ನಾಗಿ ಅಚರಿಸಿರುವ ಕುರಿತು ಯುಗಾದಿ ಉತ್ಸವ ಸಮಿತಿಯನ್ನು ಶ್ಲಾಘಿಸಿದರು.

ನಿವೃತ್ತ ಸರ್ಕಾರಿ ಅಧಿಕಾರಿ ಗೋಪಾಲಕೃಷ್ಣ ಬೇಕಲ್ ಮಾತನಾಡಿ, ನಿನ್ನೆಯ ಯುಗಾದಿ‌ ಶೋಭಾಯಾತ್ರೆ ಉತ್ತಮವಾಗಿ ನಡೆಯಿತು, ಇಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆದು ನಮ್ಮ ಹಿಂದೂಗಳಲ್ಲಿ ಜಾಗೃತಿ ಮೂಡಲಿ ಎಂದ ಅವರು ಹಿಂದೂ ಧರ್ಮ ‌ನಂಬಿಕೆಯ ಮೇಲೆ ನಿಂತಿದೆ. ನಮ್ಮ ಧರ್ಮದವರು ಪ್ರಕೃತಿ ಆರಾಧಕರು, ಇದು ನಮ್ಮ ಕರ್ತವ್ಯ ಎಂದು ತಿಳಿದು ಆಚರಿಸುತ್ತೆವೆ. ಧರ್ಮದ ನೆಲೆಗಟ್ಟು ಕುಟುಂಬ ಜೀವನದ ಮೇಲೆ ನಿಂತಿದೆ ಕುಟುಂಬದಲ್ಲಿ ಉತ್ತಮ ಬಾಂದವ್ಯವಿದ್ದರೇ ಧರ್ಮವೂ ಗಟ್ಟಿಯಾಗಿ ನಿಲ್ಲುತ್ತದೆ ಎಂದು ಹೇಳಿದರು.

RELATED ARTICLES  ಆತ್ಮಲಿಂಗ ಪೂಜೆ ನೆರವೇರಿಸಿದ ಶ್ರೀ ಶ್ರೀ ಮಹಾದೇವಿ ತಾಯಿ, ಶಿವಾನಂದಮಠ

ಯುಗಾದಿ ಉತ್ಸವ ಸಮಿತಿ ಅಧ್ಯಕ್ಷ ಜಿ.ಎನ್.ಗಾಂವ್ಕರ, ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.

ದೇಹಳ್ಳಿಯ ಜಾಗೋ ತಂಡದವರಿಂದ ರಾಷ್ಟ್ರಗೀತೆಗೆ ನೃತ್ಯ ನಡೆಯಿತು.

ಇದೆ ಸಂದರ್ಭದಲ್ಲಿ ಗ್ರಾಮದೇವಿ ಜಾತ್ರೆಯಲ್ಲಿ ಶ್ರಮಸಿದ ಸ್ವಯಂ ಸೇವಕರಿಗೆ ನೆನಪಿನ ಕಾಣಿಕೆಯನ್ನು ನೀಡಲಾಯಿತು. ಯುಗಾದಿ ಉತ್ಸವದ ಶೋಭಾಯಾತ್ರೆ ತೆರಳುವ ಮಾರ್ಗದಲ್ಲಿ ರಂಗೋಲಿ ತೋರಣಗಳಿಂದ ಸಿಂಗರಿಸಿದವರಿಗೆ ಗೌರವಿಸಲಾಯಿತು.

ಯುಗಾದಿ ಉತ್ಸವದ ಪ್ರಾಸ್ತಾವಿಕ ಮಾತನಾಡಿದ ಸಮಿತಿಯ ಪ್ರಮುಖ ರವಿ ಶಾನಭಾಗ, ಯಲ್ಲಾಪುರದಲ್ಲಿ ಸುಮಾರು 23 ವರ್ಷದ ಹಿಂದೆ ಪ್ರಾರಂಭವಾದ ಯುಗಾದಿ ಉತ್ಸವ ಇಂದು ಯಲ್ಲಾಪುರದ ಉತ್ಸವವಾಗಿ ಹೊರ ಹೊಮ್ಮುತ್ತಿದೆ. ಯುಗಾದಿ ಉತ್ಸವ ಸಮಿತಿಯವರು ಹಗಲಿರುಳು ಶ್ರಮಿಸಿ ಕೆಲಸ ಮಾಡಿದ್ದಾರೆ, ಹೊಸಬರು ಯುಗಾದಿ ಉತ್ಸವದಲ್ಲಿ ಪಾಲ್ಗೊಳ್ಳುವುದರ ಮೂಲಕ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಯಲ್ಲಾಪುರದ ಯುಗಾದಿ ಉತ್ಸವ ಗುರುತಿಸುವಂತೆ ಬದಲಾವಣೆ ಹಾಗೂ ಸಂಘಟನೆ ಮಾಡಬೇಕೆಂದು ಅವರು ಕರೆ ನೀಡಿದರು.