ಮುಂಡಗೋಡ ; ತಾಲೂಕಿನ ಮೈನಳ್ಳಿ‌ಪಂಚಾಯತ ವ್ಯಾಪ್ತಿಯ ಸಿಡ್ಲಗುಂಡಿ ಸಮೀಪದ ಗೊಡ್ನಾಳ ಗ್ರಾಮದಲ್ಲಿ ಸೋಮವಾರ ಸಂಜೆ ಸಿಡಿಲು ಬಿದ್ದ ಪರಿಣಾಮ ಮನೆಯೊಂದು ಧ್ವಂಸವಾಗಿರುವ ಘಟನೆ ವರದಿಯಾಗಿದೆ.

RELATED ARTICLES  ನಾಡುಮಾಸ್ಕೇರಿಯಲ್ಲಿ ಘನತ್ಯಾಜ್ಯ ಸಂಪನ್ಮೂಲ ನಿರ್ವಹಣಾ ಘಟಕ ಉದ್ಘಾಟನೆ.

ಗೊಡ್ನಾಳ ನಿವಾಸಿ ಗೌಳಿಗ ಕೊಂಡು ಭಾಗು ಯೆಡೆಗೆ ಎಂಬುವವರ ಮನೆ ಸಿಡಿಲಿಗೆ ನಾಶವಾಗಿದ್ದು, ಅದೃಷ್ಟವಶಾತಃ ಈ ಸಂದರ್ಭದಲ್ಲಿ ಕುಟುಂಬದವರೆಲ್ಲ ಹೊಲದಲ್ಲಿ ಕೆಲಸಕ್ಕೆ ತೆರಳಿದ್ದರು ಎನ್ನಲಾಗಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಒಟ್ಟು 80 ಸಾವಿರ ರೂ ಗಳಷ್ಟು ಹಾನಿಯಾಗಿರಬಹುದೆಂದು ಅಂದಾಜಿಸಲಾಗಿದೆ.

RELATED ARTICLES  ನಾಳೆ ಖಾಸಗಿ ವೈದ್ಯರ ಮುಷ್ಕರ: ಹೊರರೋಗಿಗಳ ಸೇವೆ ಬಂದ್