ಪ್ರತಿ ವರ್ಷ ಸಹಯಾನ (ಆರ್ ವಿ. ಭಂಡಾರಿ ನೆನಪಿನ ಸಂಸ್ಕøತಿ ಅಧ್ಯಯನ ಕೇಂದ್ರ) ಕೆರಕೋಣ ನೀಡುತ್ತಾ ಬಂದಿರುವ ದಿ. ಜಿ. ಎಸ್. ಭಟ್ಟ, ಧಾರೇಶ್ವರ ಅವರ ನೆನಪಿನ 2018 ನೆ ಸಾಲಿನ “ಸಹಯಾನ ಸಮ್ಮಾನ” ಗೌರವಕ್ಕೆ ಯಕ್ಷಗಾನ ಸ್ತ್ರೀ ವೇಷಧಾರಿಗಳಾದ ಗಣೇಶ ನಾಯ್ಕ ಮುಗ್ವಾ ಇವರನ್ನು ಆಯ್ಕೆ ಮಾಡಲಾಗಿದೆ. ಸಹಯಾನ ಸಮ್ಮಾನವು ಸನ್ಮಾನ ಪತ್ರ, ನೆನಪಿನ ಕಾಣ ಕೆ ಮತ್ತು 5000-00 ರೂ ನಗದನ್ನು ಒಳಗೊಂಡಿರುತ್ತದೆ ಎಂದು ಸಹಯಾನದ ಅಧ್ಯಕ್ಷರಾದ ಶಾಂತಾರಾಮ ನಾಯಕ ಹಿಚ್ಕಡ, ಕಾರ್ಯಾಧ್ಯಕ್ಷರಾದ ವಿಷ್ಣು ನಾಯ್ಕ, ಕಾರ್ಯದರ್ಶಿ ವಿಠ್ಠಲ ಭಂಡಾರಿ ತಿಳಿಸಿದ್ದಾರೆ.
01-06-1965 ರಲ್ಲಿ ಮುಗ್ವಾದಂತಹ ಸಣ್ಣ ಹಳ್ಳಿಯಲ್ಲಿ ಜನಿಸಿದ ಗಣೇಶ ನಾಯ್ಕ ಅವರು ಇಂದು ನಾಡಿನ ಗಮನ ಸೆಳೆದÀ ಯಕ್ಷಗಾನ ಪ್ರತಿಭೆ. ಬಾಲ್ಯದಲ್ಲಿಯೇ ಯಕ್ಷಗಾನ ಕಲೆಯ ಕುರಿತು ಪ್ರೀತಿ ಬೆಳೆಸಿಕೊಂಡ ಇವರು 10 ನೇ ತರಗತಿಯ ವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಿ 1982-83ರಲ್ಲಿ ಉಡುಪಿಯ ಯಕ್ಷಗಾನ ಕೇಂದ್ರವನ್ನು ಸೇರಿ ತರಬೇತಿ ಪಡೆದರು. ಕರ್ನಾಟಕದ ಅದ್ಭುತಗಳಲ್ಲಿ ಒಂದಾದ ಡಾ. ಶಿವರಾಮ ಕಾರಂತರ ಮಾರ್ಗದರ್ಶನದಲ್ಲಿ ಅವಿಸ್ಮರಣೀಯ ಕಲಿಕೆ ಅವರದು. ಮುಂದೆ ಅವರ ಬ್ಯಾಲೆಯಲ್ಲಿ ಮತ್ತು ಉಡುಪಿ ಯಕ್ಷಗಾನ ಕೇಂದ್ರದ ಖಾಯಂ ಕಲಾವಿದರಾಗಿ ಸೇವೆ ಸಲ್ಲಿಸಿದ್ದಾರೆ.
ಸ್ತ್ರೀ ವೇಷಧಾರಿಯೆಂದು ಪ್ರಸಿದ್ಧರಾಗಿರುವ ಇವರು ಪುರುಷ ಮತ್ತು ಸ್ರ್ತೀ ವೇಷಗಳೆರಡರಲ್ಲೂ ಸೈ ಎನ್ನಿಸಿಕೊಂಡವರು. ಅಂಬೆ, ದಾಕ್ಷಾಯಿಣ , ಸುಭದ್ರೆ, ಪ್ರಭಾವತಿ, ಸೈರಂದ್ರಿ, ರುಚಿಮತಿ, ಸತ್ಯಭಾಮೆ, ದೇವಿ, ಚಿತ್ರಾಂಗದೆ, ಮುಂತಾದ ಸ್ತರೀ ಪಾತ್ರವಲ್ಲದೇ ರಾಮ, ಕೃಷ್ಣ, ಬಲರಾಮ, ಸಂಜಯ ಮುಂತಾದ ಪುರುಷ ಪಾತ್ರಗಳಲ್ಲಿ ಕೂಡ ನಾಡಿನಾದ್ಯಂತ ಖ್ಯಾತಿ ಪಡೆದಿದ್ದಾರೆ. ಹಲವು ವರ್ಷಗಳ ಕಾಲ ಹವ್ಯಾಸಿ ಕಲಾವಿದರಾಗಿ ದುಡಿದ ಇವರು ಸಧ್ಯ ಕಲಾಧರ ಯಕ್ಷಗಾನ ಮಂಡಲಿ, ಜಲವಳ್ಳಿ ಇದರಲ್ಲಿ ಕಲಾವಿದರಾಗಿ ತಿರುಗಾಟದಲ್ಲಿದ್ದಾರೆ.
ಹಿರಿಯ ಯಕ್ಷನಟರಾದ ಮಹಾಬಲ ಹೆಗಡೆ ಕೆರಮನೆ, ಚಿಟ್ವಾಣ ರಾಮಚಂದ್ರ ಹೆಗಡೆ, ಗೋಡೆ ನಾರಾಯಣ ಹೆಗಡೆ, ಕುಮಟಾ ಗೋವಿಂದ ನಾಯ್ಕ, ಪಿ.ವಿ. ಹಾಸ್ಯಗಾರ, ಬಳ್ಳೂರು ಕೃಷ್ಣಯಾಜಿ, ಕೊಂಡದಕುಳಿ ರಾಮಚಂದ್ರ ಹೆಗಡೆ, ಎಂ.ಎಲ್. ಸಾಮಗ, ಎಂ.ಎ. ನಾಯ್ಕ, ಭಾಸ್ಕರ ಜೋಷಿ ಶಿರಳಗಿ ಮುಂತಾದವರೊಡನೆ ಸ್ರ್ತೀ ಪಾತ್ರ ನಿರ್ವಹಿಸಿದ್ದಾರೆ.
ರಷ್ಯಾ, ದುಬೈ (ಅಬುದಾಬಿ), ಇಂಗ್ಲೆಂಡ್, ಸೌತ್ ಅಮೇರಿಕಾ ಪೆರು, ಬ್ರೆಜಿಲ್, ಜರ್ಮನಿ, ಸ್ಕಾಟ್‍ಲ್ಯಾಂಡ್, ಸ್ವೀಡನ್, ಆಸ್ಟ್ರೇಲಿಯಾ, ಸ್ವಿಜರ್‍ಲ್ಯಾಂಡ್, ಸಿಂಗಾಪುರ, ಐರ್‍ಲ್ಯಾಂಡ್ ಹೀಗೆ 15 ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಭಾರತದ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಇವರು ಯಕ್ಷಗಾನ ಪ್ರದರ್ಶನ ನೀಡಿದ್ದಾರೆ.
ನಾಗಶ್ರೀ ದತ್ತಿನಿಧಿ ಪ್ರಶಸ್ತಿ ಒಳಗೊಂಡಂತೆ ನಾಡಿನ ಹಲವು ಸಂಘಟನೆಗಳು ಅವರನ್ನು ಸನ್ಮಾನಿಸಿವೆ.

RELATED ARTICLES  ಪಲ್ಸರ್ ಬೈಕ್ ಕದ್ದ ಆರೋಪಿಗಳು ಅಂದರ್...!

ಇಂತಹ ಮಹತ್ವದ ಕಲಾವಿದರಾದ ಗಣೇಶ ನಾಯ್ಕ ಮುಗ್ವಾ ಇವರಿಗೆ ದಿನಾಂಕ 24-03-2018 ರಂದು ಕೆರೆಕೋಣದ ಸಹಯಾನದಲ್ಲಿ ನಡೆಯುವ ಸಮಾರಂಭದಲ್ಲಿ ಸನ್ಮಾನ ನೀಡಲಾಗುವುದು.
ಎಂದು ವಿಠ್ಠಲ ಭಂಡಾರಿ, ಕಾರ್ಯದರ್ಶಿ, ಸಹಯಾನ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES  ಸರಸ್ವತಿ ಪದವಿ ಪೂರ್ವ ಕಾಲೇಜಿನಲ್ಲಿ ಮೊದಲ ಪಾಲಕರ ಸಭೆ ಮತ್ತು ಆಪ್ತ ಸಲಹೆ ಕಾರ್ಯಕ್ರಮ.