ಕೇವಲ ಮಗಳಾಗಿ,ತಂಗಿಯಾಗಿ, ಅಕ್ಕನಾಗಿ,,ಮಡದಿಯಾಗಿ, ತಾಯಿಯಾಗಿ ಮನೆಯ ಕಾಯಕ ಯೋಗಿಯಾಗಿ ಬದುಕುತ್ತಿದ್ದ ಕಾಲ ಉರುಳಿ ಹೆಣ್ಣು ಈಗ ಸಾಮಾಜಿಕ ಕ್ಷೇತ್ರದಲ್ಲಿಯೂ ತನ್ನನ್ನು ತೊಡಗಿಸಿಕೊಂಡು ಹೇಗೆ ಸಮಾಜದ ಅಭಿವೃದ್ಧಿಗೆ ಕಾರಣವಾಗಬಹುದು ಎಂಬುದಕ್ಕೆ ಸತ್ಯ ಸಾಕ್ಷಿಯೇ ಕುಮಟಾ ಹೊನ್ನಾವರ ಕ್ಷೇತ್ರದ ಜನತೆಯ ಜನ ಮೆಚ್ಚಿದ ಶಾಸಕಿ ಶ್ರೀಮತಿ ಶಾರದಾ ಮೋಹನ ಶೆಟ್ಟಿ.

ಅಡುಗೆಯ ಸೌಟು ಹಿಡಿದ ಕೈ, ಮಕ್ಕಳನ್ನು ಹೊತ್ತು ಹೆತ್ತು ಸಲುಹಿದ ಆ ಮಾತೃಹೃದಯಕ್ಕೆ ಕಿಂಚಿತ್ತೂ ಲೋಪ ಬಾರದಂತೆ ಮನೆಯನ್ನು ನಿಭಾಯಿಸಿದ್ದ ಆ ಜವಾಬ್ದಾರಿಗಳೇ ಪೆನ್ನು ಹಿಡಿದು ಅಭಿವೃದ್ಧಿಗೆ ಜನತೆಯ ಕಷ್ಟ ತಿಳಿಯುವ ಆ ಮೃದು ಹೃದಯವಂತಿಕೆಗೆ ಹಾಗೂ ತನ್ನ ಕ್ಷೇತ್ರದ ಕುಂದು ಕೊರತೆ ನೀಗುವ ಹಂಬಲಕ್ಕೆ ಕ್ರಿಯಾ ರೂಪ ನೀಡಿದೆ ಎನ್ನಬಹುದು.

ಜನಾನುರಾಗಿ ಹಾಗೂ ಅಜಾತ ಶತೃವಾಗಿದ್ದ ದಿ|| ಮೋಹನ ಶೆಟ್ಟಿಯವರ ಕಾಲಾ ನಂತರ ಜನತೆಯ ಪ್ರೀತಿ ಹಾಗೂ ಪ್ರೇಮ ಸಾಗರ ಹರಿದಿದ್ದು ಶಾರದಮ್ಮನವರ ಕಡೆಗೆ. ಜನರ ಭರವಸೆ, ಜನತೆಯ ಪ್ರೀತಿಯೇ ಶ್ರೀಮತಿ ಶಾರದಾ ಮೋಹನ ಶೆಟ್ಟಿಯವರನ್ನು ಶಾಸಕತ್ವದ ಖುರ್ಚಿಯಲ್ಲಿ ಕುಳ್ಳುವಂತೆ ಮಾಡಿದ್ದು ಕಣ್ಣ ಮುಂದಿನ ಸತ್ಯ .ಅದರಂತೆ ದಿ. ಮೋಹನ ಶೆಟ್ಟಿಯವರು ಶಾಸಕರಾಗಿದ್ದ ಕಾಲದಿಂದ ಮುಂದುವರೆದು ಬಂದ ಸಾಮಾಜಿಕ ನ್ಯಾಯ, ಅಭಿವೃದ್ಧಿ ಅನುದಾನದ ಸದ್ಬಳಕೆ, ನಿಶ್ಚಿತ ಗುರಿ, ಮುಂದಾಲೋಚನೆ, ಶಿಸ್ತು ಬದ್ದ ಆಡಳಿತದ ವೈಖರಿ, ಕೌಟುಂಬಿಕವಾಗಿಯೋ ಸಹಯೋಗದಲ್ಲಿಯೋ ಮುಂದುವರಿದು ಜನಾನುರಾಗಿಗಳಾಗಿ ಬೆಳೆದ ಶಾಸಕಿ ಶಾರದಾ ಶೆಟ್ಟಿ ಜನತೆಯ ಪ್ರೀತಿ ಹಾಗೂ ನಂಬಿಕೆಗಳನ್ನು ಸುಳ್ಳಾಗಿಸಲಿಲ್ಲ ಎಂಬುದೇ ಶಾಸಕರನ್ನು ಬಲ್ಲ ಜನರೆಲ್ಲರ ಮಾತು.

ಕಾರ್ಯ ನಿಪುಣತೆ ಬೆಳೆಸಿಕೊಂಡ ಶಾಸಕರು
ರಾಜಕೀಯ ರಂಗ ಹಾಗೂ ಶಾಸಕತ್ವ ಹೊಸತಾದುದರಿಂದ ಶ್ರೀಮತಿ ಶಾರದಾ ಶೆಟ್ಟಿಯವರು ಸೂಕ್ಷ್ಮವಾಗಿ ಕಾರ್ಯ ನಿಪುಣತೆ ಬೆಳೆಸಿಕೊಂಡರಂತೆ. “ಸತ್ವಾಧಾರ ನ್ಯೂಸ್” ಜೊತೆಗೆ ಮಾತನಾಡುತ್ತ ಅವರೇ ಹೇಳಿದಂತೆ, ಪ್ರಾರಂಭದಲ್ಲಿ ವಿವಿಧ ಇಲಾಖೆಗಳು ಹಾಗೂ ಇಲಾಖಾ ಅಧಿಕಾರಿಗಳನ್ನು ಭೇಟಿಮಾಡಿ ಇಲಾಖೆಯ ಸಮಗ್ರ ವರದಿ ಹಾಗೂ ಜನತೆಗೆ ಆಗುವ ಅನುಕೂಲಗಳ ಮಾಹಿತಿ ಸಂಗ್ರಹಿಸಿದರಂತೆ .ವಿಧಾನ ಸೌಧದಲ್ಲಿಯೂ ನಿರ್ವಹಿಸಬೇಕಾದ ಕರ್ತವ್ಯಗಳ ಬಗ್ಗೆ ಹಾಗೂ ಪ್ರತಿಯೊಂದು ಕಾರ್ಯಚಟುವಟಿಕೆ ಕೈಗೊಳ್ಳುವ ಬಗ್ಗೆ ಮಾಹಿತಿ ಪಡೆದು ಕೊಂಡು ಕಾರ್ಯನಿಪುಣತೆ ಸಿದ್ಧಿಸಿಕೊಂಡರಂತೆ.ಇವರ ಚಾಕಚಕ್ಯತೆಗೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗದ್ದುಗೆಯೂ ಇವರಿಗೆ ಒಲಿದು ಬಂತು.

Shetty

ಅಭಿವೃದ್ಧಿಯೆಡೆಗೆ ಹೆಜ್ಜೆ
ಜನತೆಯ ಕಷ್ಟ, ನಷ್ಟ, ನೋವು ನಲಿವುಗಳನ್ನು ಅರ್ಥಮಾಡಿಕೊಳ್ಳಲು ಶಾಸಕರಿಗೆ ಹೆಚ್ಚಿನ ದಿನ ಬೇಕಾಗಲಿಲ್ಲ. ಮೊದಲಿನಿಂದಲೂ ಮನೆಯಲ್ಲಿ ಪತಿ ಜನತೆಯೊಂದಿಗೆ ಮಾಡುತ್ತಿದ್ದ ಸಮಾಲೋಚನೆ ಹಾಗೂ ಅವರೊಂದಿಗಿನ ಒಡನಾಟ, ಅಭಿವೃದ್ಧಿಯೆಡೆಗೆ ದಿಟ್ಟ ನಿರ್ಧಾರ ತೆಗೆದುಕೊಳ್ಳಲು ಸಹಾಯಕವಾಯಿತು ಎಂದು ಶಾಸಕಿ ಶಾರದಾ ಶೆಟ್ಟಿಯವರು ಸತ್ವಾಧಾರಾ ನ್ಯೂಸ್ ಗೆ ತಮ್ಮ ಪ್ರಾರಂಭಿಕ ಅನುಭವದ ಘಟನೆಗಳನ್ನು ಸತ್ವಾಧಾರಾ ನ್ಯೂಸ್ ಜೊತೆ ಹಂಚಿಕೊಂಡರು.

RELATED ARTICLES  ಹುಳ ಹಿಡಿದಿದೆ 300 ಕ್ವಿಂಟಲ್ ಬೇಳೆ-ಕಾಳು: ಹುಟ್ಟಿದೆ ನೂರಾರು ಅನುಮಾನ

ಕಡು ಕಷ್ಟದಿಂದ ಬಳಲುತ್ತ ಕತ್ತಲಲ್ಲಿ ದಿನ ದೂಡುತ್ತಿದ್ದ ‘ಮೇಧಿನಿ’ ಊರಿಗೆ ವಿದ್ಯುತ ಸಂಪರ್ಕ ಕಲ್ಪಿಸಿಕೊಟ್ಟು ಮೇಧಿನಿಯ ಜನತೆಗೆ ಬಡವರ ಪಾಲಿನ ಆಶಾ ಕಿರಣವೇ ಆದವರು ಶ್ರೀಮತಿ ಶಾರದಾ ಶೆಟ್ಟಿ. ಸುಮಾರು 2 ಕೋಟಿ ವೆಚ್ಚದಲ್ಲಿ ಮೇಧಿನಿಗೆ ವಿದ್ಯುತ ಸಂಪರ್ಕದ ವ್ಯವಸ್ಥೆ ಮಾಡಿಸಿದವರು, ಸುಮಾರು 35 ಕೋಟಿ ವೆಚ್ಚದಲ್ಲಿ ಬೊಗ್ರಿಬೈಲ್ ಉಪ್ಪಿನ ಪಟ್ಟಣ ಸೇತುವೆ ಕಾಮಗಾರಿ ,10 ಕೋಟಿ ರೂಪಾಯಿಯಲ್ಲಿ ಐಗಳ ಖೂರ್ವೆ ಬ್ರಿಡ್ಜ್ ನಿರ್ಮಾಣ ಕಾಮಗಾರಿಗಳು “ಶಾಸಕರು ಹಾಗೂ ಜನತೆಯ ಪ್ರೀತಿಗೆ ಸೇತುವೆಯಾಗಿದೆ” ಎಂಬುದು ಜನತೆಯ ಮಾತು.

ಗೋಕರ್ಣ ನೀರು ಸರಬರಾಜು ವ್ಯವಸ್ಥೆಗೆ 24.50 ಕೋಟಿ, ಹೊನ್ನಾವರ ಶರಾವತಿ ನದಿಯಿಂದ 9 ಗ್ರಾ.ಪಂ.ನ ವ್ಯಾಪ್ತಿ ಹಾಗೂ ಹೊನ್ನಾವರ ಪಟ್ಟಣಕ್ಕೆ ನೀರು ಸರಬರಾಜಿನ ಬಹುದೊಡ್ಡ ವ್ಯವಸ್ಥೆಗೆ 122 ಕೋಟಿ ಅನುದಾನ ತಂದು ಕಾಮಗಾರಿ ನಡೆಸಿರುವುದು ಜನತೆಯ ನೀರಿನ ಬವಣೆ ತಗ್ಗಿಸಲು ಶಾಸಕರು ಕೈಗೊಂಡ ಬಹು ಉಪಯೋಗಿ ಕಾಮಗಾರಿಗಳು.

bbd

ಶೈಕ್ಷಣಿಕ ಕ್ಷೇತ್ರಕ್ಕೆ ಹೆಚ್ಚಿನ ಪ್ರಾತಿನಿದ್ಯ.

ಶಾಸಕರು ಮತ್ತು ಕರಾವಳಿ ಅಭಿವೃದ್ಧಿ ಪ್ರಾದಿಕಾರದ ಅಧ್ಯಕ್ಷರಾದ ಶ್ರೀಮತಿ ಶಾರದಾ ಶೆಟ್ಟಿ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿರುವುದು ಜನಜನಿತವಾಗಿದೆ. ಮೊರಾರ್ಜಿ ದೇಸಾಯಿ ಶಾಲಾ ಕಟ್ಟಡವು ಬಡ ವಿದ್ಯಾರ್ಥಿಗಳಿಗೆ ಸುಸಜ್ಜಿತ ಶಿಕ್ಷಣಕ್ಕೆ ಆಧಾರವಾಗಿ ಉಪಯೋಗವಾಗುತ್ತಿದೆ.

ಕುಮಟಾಕ್ಕೆ ಐ.ಟಿ.ಐ ಕಾಲೇಜು, ಕುಮಟಾದಲ್ಲಿ ಕೃಷಿ ಡಿಪ್ಲೋಮಾ ಕಾಲೇಜು ತಂದಿದ್ದು ,ಹೊನ್ನಾವರ ಪಿ.ಯು ಕಾಲೇಜಿಗೆ ಜಾಗ ಮತ್ತು ಕಟ್ಟಡ ವ್ಯವಸ್ಥೆ , ಕುಮಟಾ ಡಿಗ್ರಿ ಕಾಲೇಜಿಗೆ ಜಾಗ ಮತ್ತು ಕಟ್ಟಡ, ಹನುಮಂತ ಬೆಣ್ಣೆ ಕಾಲೇಜಿನ ಕೊಠಡಿಗಳ ಸಂಖ್ಯೆ ಹೆಚ್ಚಳ ,ಹಿರೆಗುತ್ತಿ ಪಿ.ಯು ಕಾಲೇಜಿಗೆ ಅನುದಾನ, ಮಿರ್ಜಾನ ಸಂತೆಗುಳಿ ಅಘನಾಶಿನಿ ಹೊದ್ಕೆಶಿರೂರು ಕಾಲೇಜಿಗೆ ಆರ್.ಎಂಎಸ್.ಎ ಅನುದಾನದಡಿ ಹೆಚ್ಚಿನ ಕಟ್ಟಡ,ಹೊನ್ನಾವರ ಪದವಿ ಪೂರ್ವ ಕಾಲೇಜಿಗೆ ಹೊಸ ಕಟ್ಟಡ ವ್ಯವಸ್ಥೆ ಹೀಗೆ ಹತ್ತು ಹಲವು ಶೈಕ್ಷಣಿಕ ಕಾರ್ಯಗಳು ಶಾಸಕಿ ಶಾರದಾ ಶೆಟ್ಟಿಯವರ ಅವಧಿಯಲ್ಲಿ ನಡೆದಿರುವುದು ಜನತೆಯ ಪ್ರಶಂಸೆಗೆ ಕಾರಣವಾಗಿದೆ.

aa 1

ರೈತಾಪಿ ವರ್ಗದವರಿಗೆ ಅನುಕೂಲಕರ ಯೋಜನೆಗಳು

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಶಾಸಕಿ ಶಾರದಾ ಶೆಟ್ಟಿಯವರು ವೈಯಕ್ತಿಕ ಮುತುವರ್ಜಿ ವಹಿಸಿ ರೈತಾಪಿ ವರ್ಗದವರಿಗೆ ಹಾಗೂ ಕಡಲ ತಡಿಯವರಿಗೆ ಅನುಕೂಲ ಕಲ್ಪಿಸಿ ಜೀವನೋಪಾಯ ಕಂಡುಕೊಳ್ಳುವಂತೆ ಮಾಡಿದ ಶಾಸಕರು ಕಷ್ಟದ ಸ್ಥಿತಿಯಿಂದ ಅವರನ್ನು ಪಾರುಮಾಡುವ ನಿಟ್ಟಿನಲ್ಲಿ ಸಮುದ್ರ ತಡೆಗೋಡೆ ಹಾಗೂ ಕಾರ್ಲೆಂಡ ನಿರ್ಮಾಣಕ್ಕೆ ಹೆಚ್ಚಿನ ಅನುದಾನವನ್ನು ನೀಡಿದ್ದಾರೆ. ಸರಿ ಸುಮಾರು ಸಾವಿರ ಕೋಟಿ ಅನುದಾನ ತಂದಿರುವ ಶಾಸಕರು ಸಮುದ್ರ ತಡೆಗೊಡೆಗೆ ಇನ್ನು ಹೆಚ್ಚಿನ ಅನುದಾನದ ಅಗತ್ಯವಿದೆ, ಮುಂದಿನ ಅವಕಾಶದಲ್ಲಿ ಆ ಅನುದಾನವನ್ನು ತಂದು ಜನತೆಗೆ ಅನುಕೂಲ ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಸತ್ಯಧಾರ ನ್ಯೂಸಗೆ ತಿಳಿಸಿದರು.

RELATED ARTICLES  20 ತಿಂಗಳ ಬಳಿಕ ಶಾಲೆಯಲ್ಲಿ ಮಕ್ಕಳ ಕಲರವ : 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳು ಆರಂಭ

ಪ್ರವಾಸೋದ್ಯಮಕ್ಕೆ ಒತ್ತು

ಉತ್ತರ ಕನ್ನಡವು ಪ್ರವಾಸಿ ತಾಣಗಳನ್ನು ಹೆಚ್ಚಿನದಾಗಿ ಹೊಂದಿದ್ದು ಗೋಕರ್ಣದ ಓಂ ಬೀಚ, ಕುಡ್ಲೆ ಬೀಚ್ ಹಾಗೂ ಪ್ರಧಾನ ಬೀಚಗಳನ್ನು ಅಭಿವೃದ್ಧಿ ಪಡಿಸಲಾಗಿದ್ದು ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ.ವನ್ನಳ್ಳಿ ಬೀಚ್ ,ಮಾವಿನಕುರ್ವಾ ಹಾಗೂ 15 ಕೋಟಿ ರೂ ಅನುದಾನದಲ್ಲಿ ಧಾರೇಶ್ವರ ಬೀಚ ಅಭಿವೃದ್ಧಿ ಪಡಿಸಿದ್ದು ಪ್ರಸಿದ್ದ ಪ್ರವಾಸಿ ತಾಣವಾಗಿದೆ .ಮೂಲ ಸೌಕರ್ಯ ಒದಗಿಸುವಿಕೆಯಲ್ಲಿ ಪ್ರಾಮಾಣಿಕ ಪ್ರಯತ್ನವಾಗಿದ್ದು ಪ್ರವಾಸೋದ್ಯಮದಲ್ಲಿ ಅಭಿವೃದ್ಧಿಗೆ ಒತ್ತು ನೀಡಿರುವುದು
ಸಾಮಾನ್ಯರಿಗೂ ಅರ್ಥವಾಗುತ್ತದೆ ಎಂಬುದು ವಿನಾಯಕ ಶೆಟ್ಟಿಯವರ ಮಾತು.

ಗ್ರಾಮೀಣ ಅಭಿವೃದ್ಧಿ :

ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಲ್ಲಿ ಅನುದಾನ ತಂದು ಹಳ್ಳಿ ಹಳ್ಳಿಗಳ ಅಭಿವೃದ್ಧಿ ಪ್ರಯತ್ನಿಸುತ್ತಿರುವುದು ಜನ ಜನಿತವಾಗಿದೆ. ಆದರ್ಶ ಗ್ರಾಮ ಯೋಜನೆಯಲ್ಲಿ ಹಳದೀಪುರ, ಮಿರ್ಜಾನ, ಕೋಡ್ಕಣಿ, ಗೋಕರ್ಣ, ಹೆಗಡೆ ಹಾಗೂ ಕೆಲ ಸ್ಥಳಗಳ ವಿದ್ಯುತ್ ಲೈನ್ ಕಂಬ, ಟಿ.ಸಿ. ಬದಲಾಯಿಸಿ ಹೊಸದಾಗಿ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದ್ದು, 24 ಗಂಟೆಯೂ ವಿದ್ಯುತ್ ನೀಡುವ ಯೋಜನೆ ಇದಾಗಿದೆ ಎಂದು ಶಾಸಕರು ತಮ್ಮ ಸರಕಾರದ ಬಗ್ಗೆ ಹೆಮ್ಮೆ ಪಡುತ್ತಾರೆ. ಮರಾಕಲ್ ವಿದ್ಯುತ್ ಉಪಕೇಂದ್ರ ನಿರ್ವಹಣೆ ಕಾರ್ಯ ನಡೆಯುತ್ತಿದ್ದು ಉದ್ಘಾಟನಾ ಹಂತ ತಲುಪಿದ್ದು 7 ಹಳ್ಳಿಗಳಿಗೆ ವಿದ್ಯುತ ಹಾಗೂ ಕುಡಿಯುವ ನೀರಿಗೆ ಅನುಕೂಲಕರ ಯೋಜನೆ ಇದಾಗಿದೆ ಎಂದು ಶಾಸಕರು ‘ಸತ್ಪಧಾರ ನ್ಯೂಸ’ಗೆ ಮಾಹಿತಿ ನೀಡಿದರು.

ee

ಧನ್ಯತೆಯ ಭಾವ ಶಾಸಕರದ್ದು.

ಜನತೆ ಹೇಳಿದ ಬಹುತೇಕ ಕೆಲಸಗಳನ್ನು ಮಾಡಿಸಿಕೊಟ್ಟಿರುವ ಧನ್ಯತೆ ನಮಗಿದೆ ಎನ್ನುವ ಶಾಸಕರು,ಜನತೆ ಧೈರ್ಯ ತುಂಬಿ ಚುನಾವಣೆಗೆ ನಿಲ್ಲಿಸಿ ಆಯ್ಕೆಗೊಳ್ಳುವಂತೆ ಮಾಡಿದ್ದರು ,ಈ ಬಾರಿಯೂ ಜನತೆಯ ಆಶೀರ್ವಾದ ನನಗಿದೆ ಎಂಬುದರ ಬಗ್ಗೆ ಧನ್ಯತೆಯ ಭಾವ ವ್ಯಕ್ತಪಡಿಸಿದರು.
nnaa
ಶಾಸಕರು ಮಾಡಿರುವ ಅಭಿವೃದ್ಧಿಯ ಮೂಲಕವೇ ಆಡುವವರ ಬಾಯಿ ಮುಚ್ಚಿಸಿದ್ದಾರೆ ಎಂಬುದು, ಕುಮಟಾಕ್ಕೆ 26 ಹೊಸ ಬಸ ತಂದ ಕೀರ್ತಿ ಶಾಸಕರದ್ದು ಎಂದು ಸಾರ್ವಜನಿಕರು ಸಂತೋಷದಿಂದ ಹೇಳುವಾಗ ನನಗೆ ಜೀವನ ಧನ್ಯ ಎನ್ನಿಸಿತು ಎನ್ನುತ್ತಾರೆ ಶಾರದಾ ಶೆಟ್ಟಿ. ಇನ್ನೂ 232 ಮನೆಗಳಾದರೆ ವಸತಿ ವ್ಯವಸ್ಥೆ ಜನತೆಗೆ ಪೂರ್ಣ ಪ್ರಮಾಣದಲ್ಲಿ ಆದಂತೆ ಆಗುತ್ತದೆ ಎಂದು ಹೆಮ್ಮೆಯಿಂದ ಸಂತಸ ಹಂಚಿಕೊಂಡ ಶಾಸಕರು ಮುಂಬರುವ ಚುನಾವಣೆಗಳಲ್ಲಿ ಗೆಲ್ಲುವ ವಿಶ್ವಾಸವಿದೆ. ಚುನಾವಣೆಯನ್ನು ಹಬ್ಬದಂತೆ ಸ್ವೀಕರಿಸುವುದಾಗಿ ಅಷ್ಟೇ ಖುಷಿಯಿಂದಲೇ ವಿವರಿಸುತ್ತಾರೆ.

ಸಹಕಾರ : ಜಯದೇವ ಬಳಗಂಡಿ
ವರದಿ : ಸತ್ವಾಧಾರಾ ನ್ಯೂಸ್.