ಗೋಕರ್ಣ : ಗೋಕರ್ಣದ ಮೇಲಿನಕೇರಿಯ ಶ್ರೀ ಭದ್ರಕಾಳಿ ಗೆಳೆಯರ ಬಳಗದ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಹಾಲಕ್ಕಿ ಒಕ್ಕಲಿಗರ ಹೊನಲು ಬೆಳಕಿನ ವಾಲಿಬಾಲ ಪಂದ್ಯಾವಳಿಯ ಉದ್ಘಾಟನಾ ಸಮಾರಂಭವು ಮೇಲಿನಕೇರಿಯ ಮೈದಾನದಲ್ಲಿ ಜರುಗಿತು.

ವೇದಿಕೆಯಲ್ಲಿನ ಎಲ್ಲಾ ಗಣ್ಯರೂ ಸೇರಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಪಂದ್ಯಾವಳಿಗೆ ಚಾಲನೆ ನೀಡಿದ ಬಿಜೆಪಿ ಮುಖಂಡರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಶ್ರೀ ನಾಗರಾಜ ನಾಯಕ ತೊರ್ಕೆ ಅವರು ಮಾತನಾಡಿ ಹಾಲಕ್ಕಿ ಸಮಾಜದವರು ಸಂಘಟಿತರಾಗಿ ಜಿಲ್ಲಾ ಮಟ್ಟದ ಪಂದ್ಯಾವಳಿಯನ್ನು ಆಯೋಜಿಸಿ ಕ್ರೀಡಾ ಮನೋಭಾವನೆ ಮೆರೆದಿದ್ದಾರೆ. ಹಾಲಕ್ಕಿ ಸಮಾಜದವರು ಶ್ರಮಜೀವಿಗಳು. ಈ ಸಮಾಜ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಆ ಮೂಲಕ ಸಾಮಾಜಿಕ, ಆರ್ಥಿಕ, ಸಾಂಸ್ಕøತಿಕವಾಗಿಯೂ ಕೂಡಾ ಅಭಿವೃದ್ಧಿ ಹೊಂದಿ ಬಲಿಷ್ಠ ಸಮಾಜವನ್ನು ನಿರ್ಮಿಸಿಕೊಳ್ಳಬೇಕು. ಕೇಂದ್ರ ಸರಕಾರ ಬಡವರಿಗಾಗಿ ಆಯುಷ್ಮಾನ್ ಭಾರತ ಯೋಜನೆಯಡಿ 5 ಲಕ್ಷಗಳವರೆಗಿನ ಉಚಿತ ವೈದ್ಯಕೀಯ ಸೌಲಭ್ಯವನ್ನು ಒದಗಿಸುವ ಹಾಗೂ ಸಾಲ ಸೌಲಭ್ಯಗಳನ್ನು ಒದಗಿಸುವ ಮುದ್ರಾ ಯೋಜನೆಯಂತಹ ಹತ್ತು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳ ಪ್ರಯೋಜನವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು. ಇಂತಹ ಸಂಘಗಳು ತಮ್ಮ ಸಮಾಜದ ಬಲಿಷ್ಠತೆಗಾಗಿ ಶ್ರಮಿಸಬೇಕು. ಅಲ್ಲದೇ ಸರಕಾರದಿಂದ ದೊರೆಯುವ ಎಲ್ಲಾ ಸೌಲಭ್ಯಗಳು ಅಥವಾ ಇತರೆಡೆಗಳಿಂದ ಸಿಗುವ ಅನುಕೂಲತೆಯನ್ನು ಬಡವರಿಗೆ ತಲುಪಿಸುವ ನಿಟ್ಟಿನಲ್ಲಿ ಹೆಚ್ಚಿನ ಪ್ರಯತ್ನ ವಹಿಸಬೇಕು ಎಂದರು.

RELATED ARTICLES  ಗ್ರಾಮ ಚಾವಡಿಯ ಕಟ್ಟಡ ಕುಸಿಯುವ ಭೀತಿ.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಜಿ.ಪಂ. ಸದಸ್ಯರಾದ ಪ್ರದೀಪ ನಾಯಕ ದೇವರಬಾವಿ ಅವರು ಮಾತನಾಡಿ ಭದ್ರಕಾಳಿ ಗೆಳೆಯರ ಬಳಗದ ಸಂಘಟನೆಯನ್ನು ಶ್ಲಾಘಿಸಿದರು.

RELATED ARTICLES  ಅಬ್ಬರಿಸುತ್ತಿರುವ ಮಳೆರಾಯ ಅತಂತ್ರವಾಗುತ್ತಿರುವ ಅನ್ನದಾತ : ಕೊಯ್ದಿಟ್ಟ ಗದ್ದೆಯಲ್ಲಿ ತುಂಬಿದ ನೀರು : ಕೆಸರುಗದ್ದೆ ಸೇರಿದ ಭತ್ತದ ಕಾಳು.

ಈ ಸಂದರ್ಭದಲ್ಲಿ ತಾ.ಪಂ. ಸದಸ್ಯರಾದ ಮಹೇಶ ಶೆಟ್ಟಿ, ಮಂಜುನಾಥ ಜನ್ನು, ಮಂಗಳಮೂರ್ತಿ ಸಭಾಹಿತ, ಮನೋಹರ ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.