ಯಲ್ಲಾಪುರ ; ಅಪರಿಚಿತ ವಾಹನವೊಂದು ಬೈಕ್ ಸವಾರನಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿ, ಸಹ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಗುಳ್ಳಾಪುರ ಗ್ರಾಮದ ಮೂಲಕ ಹಾದು ಹೋದ ರಾಷ್ಟ್ರೀಯ ಹೆದ್ದಾರಿ 63 ಮೇಲೆ ಮಂಗಳವಾರ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಸಂಭವಿಸಿದೆ.

RELATED ARTICLES  ಶ್ರೀ ಕಾಂಚಿಕಾಂಬ ದೇವಸ್ಥಾನದ ಹುಂಡಿ ಲೆಕ್ಕಾಚಾರ

ಯಲ್ಲಾಪುರ ಗ್ರಾಮಾಂತರ ನಿವಾಸಿ ಗಣಪತಿ ಬೀರಾ ಗೌಡ ಸ್ಥಳದಲ್ಲಿಯೇ ಸಾವನ್ನಪ್ಪಿರುವ ದುರ್ದೈವಿಯಾಗಿದ್ದಾನೆ, ಇನ್ನೋರ್ವ ಸಹ ಸವಾರ ಜೋಯಿಡಾ ತಾಲ್ಲೂಕಿನ ದಾಮೊದರ ತಿಮ್ಮಣ್ಣ ಮಿರಾಶಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು ಆತನನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

RELATED ARTICLES  ಮಳೆಯ ಮುಂದುವರಿಕೆ ಹಿನ್ನೆಲೆ : ನಾಳೆಯೂ ಶಾಲಾ ಕಾಲೇಜಿಗೆ ರಜೆ.

ಸ್ಥಳಕ್ಕೆ ತೆರಳಿರುವ ಯಲ್ಲಾಪುರ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ತಲೆ ಮರೆಸಿಕೊಂಡಿರುವ ವಾಹನ ಚಾಲಕನ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.