muralidhar 2

ಭಾಗ 1 ಮತ್ತು 2ರಲ್ಲಿ ತೃಪ್ತಿ ನೆಮ್ಮದಿ ಬಗ್ಗೆ ವಿಶ್ಲೇಷಿಸಿರುವಂತೆ ಭಾಗ 3ರಲ್ಲಿ ಸಂತೋಷದ ವಿಚಾರಕ್ಕೆ ಬಂದರೆ, ಸುಖ ಸಂತೋಷ ಕೇವಲ ಕ್ಷಣ ಕವಾದ ಭಾವನೆಯಾಗಿದೆ. ಚುನಾವಣೆಯಲ್ಲಿ ಗೆಲ್ಲುವುದು, ಪರೀಕ್ಷೆಯಲ್ಲಿ ಉತ್ತೀರ್ಣನಾಗುವುದು, ಕೆಲಸ ಸಿಗುವುದು, ಮದುವೆಯಾಗುವುದು, ಹೀಗೆ ನಾನಾ ರೀತಿಯಲ್ಲಿ ಮನುಷ್ಯನ ಕೆಲಸವಾಗಿ, ಜಯವನ್ನು ಹೊಂದಿ ಮನಸ್ಸಿಗೆ ಹಿತವಾದಂತಹ ಕೆಲಸವಾದಲ್ಲಿ ಆ ಕ್ಷಣ ಮನಸ್ಸಿನಲ್ಲಿ ಬಂದು ಹೋಗುವ ಮನಸ್ಸಿನ ಭಾವನೆಯೇ ಸಂತೋಷ ಎಂಬುದಾಗಿದೆ. ಮನುಷ್ಯ ಜೀವನದಲ್ಲಿ ಯಾವಾಗಲೂ ಸಂತೋಷದಿಂದ ಇರಲು ಸಾಧ್ಯವಿಲ್ಲ. ಯಾವಾಗಲೂ ಸಿಹಿ ತಿಂಡಿ ತಿನ್ನುತಿದ್ದರೆ ಸಿಹಿ ಎಂಬುದನ್ನು ಕಂಡರೆ ಜಿಗುಪ್ಸೆ ಬರುವಂತೆ, ಜೀವನದಲ್ಲಿ ಯಾವಾಗಲೂ ಸುಖವೇ ಇದ್ದರೆ ಜೀವನದ ಅರ್ಥವೇ ತಿಳಿಯುವುದಿಲ್ಲ. ಜೀವನದಲ್ಲಿ ಸ್ವಾರಸ್ಯವೂ ಇರುವುದಿಲ್ಲ. ಜೀವನದಲ್ಲಿ ಕಷ್ಟ ಸುಖ ಬೇವು-ಬೆಲ್ಲ ಇದ್ದಂತೆ ಇರಬೇಕು.

ಜೀವನದಲ್ಲಿ ಕಷ್ಟ ಸುಖ ಸಾವುನೋವು, ದುಃಖ ಎಲ್ಲವೂ ಮನುಷ್ಯನ ಜೀವನದಲ್ಲಿ ಬರುತ್ತದೆ. ಕ್ಷಣ ಕವಾದ ಸುಖ ಸಂತೋಷಕ್ಕೆ ತಮ್ಮ ಜೀವನವನ್ನೇ ಹಾಳು ಮಾಡಿಕೊಂಡು ಆರೋಪಿ ಸ್ಥಾನದಲ್ಲಿ ನಿಲ್ಲಬೇಕಾದ ಪ್ರಸಂಗಗಳು ಬರುತ್ತವೆ. ಆತುರ ಪಡದೆ, ಸ್ವಲ್ಪ ತಾಳ್ಮೆ ಇಟ್ಟುಕೊಂಡಲ್ಲಿ ಇಂತಹ ಅನಾಹುತಗಳಿಂದ ತಪ್ಪಿಸಿಕೊಳ್ಳಬಹುದು. ಇನ್ನು ಕೆಲವು ಸಂದರ್ಭಗಳಲ್ಲಿ ಮಕ್ಕಳು ಉತ್ತೀರ್ಣರಾದಲ್ಲಿ, ಮನೆಯನ್ನು ಕಟ್ಟಿದ್ದಲ್ಲಿ, ಕೆಲವು ಸಮಯ ಸಂತೋಷವಾಗಿದ್ದು, ನಂತರ ಬೇರೆ ರೀತಿಯ ಆಲೋಚನೆಗಳು ಮನಸ್ಸಿಗೆ ಬಂದರೆ ಆ ಸಂತೋಷ ಹೆಚ್ಚಿನ ದಿನಗಳು ಉಳಿಯುವುದೇ ಇಲ್ಲ. ಮಕ್ಕಳು 10 ನೇ ತರಗತಿ ಅಥವಾ ಪಿ.ಯು.ಸಿಯಲ್ಲಿ ತೇರ್ಗಡೆಯಾದರೆ, ಕ್ಷಣಮಾತ್ರ ಸಂತೋಷ ಇದ್ದು, ನಂತರದ ದಿನಗಳಲ್ಲಿ ಅವರ ಮುಂದಿನ ವಿದ್ಯಾಭ್ಯಾಸದ ಬಗ್ಗೆ ತಲೆ ಕೆಡಸಿಕೊಳ್ಳುವಂತ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕೆಲಸಕ್ಕೆ ಸಿಕ್ಕ ಸಂದರ್ಭದಲ್ಲಿಯೂ ಸಹ ಇದೇ ರೀತಿ ಭಾವನೆ ಬಂದು ಕೆಲಸಕ್ಕೆ ಹೋಗುವುದು ದಿನ ನಿತ್ಯದ ಕಾಯಕವಾಗಿರುತ್ತದೆ. ಕೆಲವು ವರ್ಷಗಳು ಕಳೆದಂತೆ ಕೆಲಸಕ್ಕೆ ಹೋಗುವುದಕ್ಕೆ ಬೇಸರವಾಗಿ ತನ್ನ ಸಂಸಾರವನ್ನು ನಡೆಸಲು ಬಲವಂತವಾಗಿ ಹೋಗಬೇಕಾದ ಪ್ರಸಂಗ ಬಂದಿರುತ್ತದೆ. ತಕ್ಷಣ ಕೆಲಸ ಸಿಕ್ಕದರೆ ಪರವಾಗಿಲ್ಲ ಅಲೆದೂ ಅಲೆದೂ ಕೆಲಸ ಗಿಟ್ಟಿಸಿಕೊಂಡರೆ ಆ ಸಂತೋಷವೂ ಹೊರಟು ಹೋಗುತ್ತದೆ. ಕೆಲಸ ಹುಡುಕಿ ಬೇಸರವಾಗಿದ್ದು, ಎಷ್ಟೋ ದಿನದ ಮೇಲೆ ಕೆಲಸ ಸಿಕ್ಕಾಗ, ಈಗ ಸ್ವಲ್ಪ ಸಮಾಧಾನವಾಯಿತು ಎಂದು ಹೇಳಬಹುದು. ಆ ವೇಳೆಗೆ ಸಂತೋಷ ಎಂಬುದು ಮನಸ್ಸಿನಿಂದ ಹೊರಟು ಹೋಗಿದ್ದು, ಸ್ವಲ್ಪ ಸಮಾಧಾನದಿಂದ ಇರಬೇಕಾದ ಸನ್ನಿವೇಶ ಉಂಟಾಗುತ್ತದೆ. ಚುನಾವಣೆಯಲ್ಲಿ ಗೆದ್ದಾಗ, ಯಾವುದಾದರೂ ಪ್ರಶಸ್ತಿ ಬಂದ ಸಂದರ್ಭದಲ್ಲಿಯೂ ಸಹ ಆ ಕ್ಷಣ ಸಂತೋಷ ಇರುತ್ತದೆ. ನಂತರದ ದಿನಗಳಲ್ಲಿ, ಜವಾಬ್ದಾರಿ ಎಂಬ ಪೆಡಂಭೂತ ಉದ್ಭವವಾಗಿ, ಸಂತೋಷ ಎಂಬುದು ಮರೀಚಿಕೆಯಾಗುತ್ತದೆ. ಮುಂದಿನ ಚುನಾವಣೆ ಹತ್ತಿರ ಬರುತ್ತಿದ್ದಂತೆ, ಗೆಲ್ಲುವ ಹಂಬಲ ಮನದಲ್ಲಿ ಮೂಡಿ ಭಯವು ಪ್ರಾರಂಭವಾಗುತ್ತದೆ. ಸಂತೋಷ ಎನ್ನುವುದು ಕ್ಷಣ ಕವಾಗಿದ್ದು, ಮುಂದಿನ ಜವಾಬ್ದಾರಿ ಕಣ್ಣುಮುಂದೆ ನಿಂತಾಗ ಆ ಸಂತೋಷವು ಮಾಯವಾಗಿ ಬಿಡುತ್ತದೆ. ಮನುಷ್ಯನು ಜೀವನದಲ್ಲಿ ಯಾವಾಗಲೂ ಸಂತೋಷದಿಂದಿರಲು ಸಾಧ್ಯವಿಲ್ಲ. ಅಡಿಗಡಿಗೆ ಬರುವ ಕಷ್ಟಗಳು, ಸಾವು ನೋವು, ನಿರಾಸೆ ಹೀಗೆ ಅನೇಕ ಸನ್ನಿವೇಶಗಳು ಎದುರಾಗಿ ಬಂದು, ಮನುಷ್ಯನಿಗೆ ಪೂರ್ಣ ಸಂತೋಷವೆಂಬುದು ಇರುವುದಿಲ್ಲ. ಯಾವಾಗಲೂ ಸಂತೋಷವಾಗಿರುತ್ತೇನೆ ಎಂದರೆ ಅದಕ್ಕೆ ಜೀವನದ ಅರ್ಥವೇ ಇಲ್ಲ. ಕಷ್ಟ ಸುಖ ಸಮಾನಾಂತರವಾಗಿ ಸ್ವೀಕರಿಸುವ ಮನೋಭಾವ ಇರಬೇಕು. ಯಾವಾಗಲೂ ಸಂತೋಷದಿಂದ ಇದ್ದರೆ ಜೀವನದ ಅರ್ಥ ತಿಳಿಯುವುದಿಲ್ಲ. ಅದಕ್ಕೆ ಜೀವನದಲ್ಲಿ ಕಷ್ಟ ಸುಖಗಳು ಸಮವಾಗಿರಲಿ ಎಂದು, ಉಗಾದಿ ಹಬ್ಬದಲ್ಲಿ ಬೇವು-ಬೆಲ್ಲ ಎರಡನ್ನೂ ತಿನ್ನುವ ಪದ್ದತಿಯನ್ನು ಅನುಸರಿಸಿಕೊಂಡು ಬಂದಿರುತ್ತಾರೆ. ಬೇವು ಎಂದರೆ ಕಷ್ಟ ಬೆಲ್ಲ ಎಂದರೆ ಸಂತೋಷ ಇವರೆಡೂ ಮನುಷ್ಯನ ಬಾಳಿನಲ್ಲಿ ಇರುವ ಎರಡು ಮುಖಗಳು. ಎರಡೂ ಒಂದೇ ನಾಣ್ಯದ ಎರಡು ಮುಖಗಳಂತೆ ಇರುತ್ತದೆ. ಕಷ್ಟಪಟ್ಟು ಕರ್ತವ್ಯ ನಿರ್ವಹಿಸಿದರೆ ಸುಖದಂತ ಜಯವು ಸಿಗುತ್ತದೆ. ಕಷ್ಟಬಂದಾಗ ಕುಗ್ಗದೆ ಸುಖಬಂದಾಗ ಹಿಗ್ಗದೆ ಎರಡನ್ನೂ ಸಮನಾಗಿ ಸ್ವೀಕರಿಸುವ ಮನೋಬಾವ ಇದ್ದರೆ, ಯಾವ ಕಷ್ಟ ಬಂದರೂ ಎದುರಿಸುತ್ತೇನೆಂಬ ದೈರ್ಯ ಬರುತ್ತದೆ. ಸಾವು ನೋವು ಮನುಷ್ಯನ ಜೀವನದಲ್ಲಿ ಬಂದು ಹೋಗುವ ನೆಂಟರಿದ್ದಂತೆ, ಕೆಳಕಂಡ ಕವನವು ಇದಕ್ಕೆ ಹೊಂದಿಕೊಂಡಂತೆ ಇದೆ.

RELATED ARTICLES  ಮಹಿಳೆಯರ ಏಕವಲಯ ವಾಲಿಬಾಲ್ ಪಂದ್ಯಾವಳಿ ಹಾಗೂ ಆಯ್ಕೆ ಹೊನ್ನಾವರದಲ್ಲಿ.

ಬಾಳಿನಲಿ ಸೋತವರಿಗೆ ಜೀವನವೇ ಅಂಧಕಾರ
ಗೆಲುವ ಮನುಜರಿಗೆ ಹೆಚ್ಚುವುದು ಬಾಳಿನಲಿ ಮಮಕಾರ
ಸೋತಾಗ ನಿರಾಶಿಸದೆ ಗೆದ್ದಾಗ ಬೀಗದೆ
ಇರುವುದೇ ನಿಜವಾದ ಬಾಳಿನ ಅರ್ಥ
ಇದನು ತಿಳಿಯದೆ ಮುನ್ನಡೆದರೆ
ಆಗುವುದು ಜೀವನವೆಲ್ಲಾ ವ್ಯರ್ಥ

RELATED ARTICLES  ಉತ್ತರ ಕನ್ನಡದಲ್ಲಿ ಇಂದು ಒಟ್ಟು 23 ಕೊರೋನಾ ಕೇಸ್

ಜೀವನವು ಖುಷಿ ಇರಲು ಮೆರೆದರೆ
ನಮ್ಮ ಮೀರಿಸುವವರಿಲ್ಲಾ ಎಂಬ ಹಮ್ಮಿನಲಿ
ಸಣ್ಣ ಕಷ್ಟ ಬಂದರೂ ಪರಿತಪಿಸಬಹುದು
ಎಂದೂ ಸಹಿಸನೆಂಬ ಉದ್ಗಾರದಲಿ
ಸುಖದಲಿ ಹಿಗ್ಗದೆ ಕಷ್ಟದಲಿ ಕುಗ್ಗದೆ ಇರುವುದೇ ಬಾಳಿನ ರಹಸ್ಯ
ಇದನರಿತು ನಡೆದರೆ ಸಾಧಿಸಬಹುದು ಬಾಳಿನಲಿ ಸಾಮರಸ್ಯ.

ಕಷ್ಟಗಳು ಪ್ರತಿಯೊಬ್ಬ ಮನುಷ್ಯನಿಗೂ ಒಂದಲ್ಲ ಒಂದು ರೀತಿಯಲ್ಲಿ ಕಾಡುತ್ತಾ ಇರುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎನ್ನಬಹುದು. ಕೆಲವೊಮ್ಮೆ ಜೀವನದಲ್ಲಿ ತೆಗೆದುಕೊಳ್ಳುವ ಕೆಲವು ನಿರ್ಣಯಗಳಿಂದ ಒಂದಲ್ಲ ಒಂದು ರೀತಿಯಲ್ಲಿ ನೋವು, ಕಷ್ಟದಲ್ಲಿ ಸಿಲುಕಿ ಒದ್ದಾಡುವಂತಹ ಪರಿಸ್ಥಿತಿ ಉಂಟಾಗುತ್ತದೆ. ಇದರಿಂದ ಮಾನಸಿಕವಾಗಿ ಘಾಸಿಯಾಗಿ. ಸಾಯುವವರೆಗೂ ಮನಸ್ಸಿನಲ್ಲಿ ಕಾಡುತ್ತಾ ಇರುತ್ತದೆ. ಇದರಿಂದ ಹೊರಬರಲು ಎಷ್ಟೇ ಪ್ರಯತ್ನ ಬಿದ್ದರೂ ಜೇಡರಬಲೆಯಲ್ಲಿ ಸಿಕ್ಕಿಕೊಂಡ ಕೀಟದಂತೆ ಆಗಿರುತ್ತದೆ. ಸಂತೋಷ ಎಂಬುವುದು ಯಾರಿಗೂ ಯಾವಾಗಲೂ ಸಿಕ್ಕುವ ಮನಸ್ಸಿನ ಭಾವನೆಯಲ್ಲ ಮತ್ತು ಇದು ಕೇವಲ ಕ್ಷಣ ಕ ಹಾಗೂ ಶಾಶ್ವತವಲ್ಲ. ಬೇರೊಬ್ಬರಿಗೆ ತೊಂದರೆಕೊಟ್ಟು ಸಂತೋಷ ಪಟ್ಟರೆ ಅದು ಸರ್ವತಾ ಒಪ್ಪತಕ್ಕದ್ದಲ್ಲ ಹಾಗೂ ದೇವರು ಕೂಡಾ ಮೆಚ್ಚುವುದಿಲ್ಲ.