ಹೊನ್ನಾವರ”ವಾಣಿಜ್ಜ್ಯೀಕರಣ ಹಾಗೂ ಪರಿಸರ ಮಾಲಿನ್ಯದಿಂದಾಗಿ ತಾಯಿ ಹಾಲಿನಲ್ಲೂ ವಿಷ ಸೇರಿಕೊಂಡಿರುವ ಅಪಾಯಕಾರಿ ಸನ್ನಿವೇಶ ನಿರ್ಮಾಣವಾಗಿದೆ’ ಎಂದು ಫೀಪಲ್ ಫಸ್ಟ್ ಫೌಂಡೇಶನ್‍ನ ಮುಖ್ಯ ಕಾರ್ಯನಿರ್ವಾಹಕ ವ್ಯವಸ್ಥಾಪಕ ಡಾ.ಪ್ರಕಾಶ ಭಟ್ಟ ಅಭಿಪ್ರಾಯಪಟ್ಟರು.

ಇಲ್ಲಿನ ಎಸ್.ಡಿ.ಎಂ. ಪದವಿ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ವಿಭಾಗದ ವಾರ್ಷಿಕ ಸ್ನೇಹ ಸಮ್ಮೇಳನದ ಮುಖ್ಯ ಅತಿಥಿಯಾಗಿ ಅವರು ಭಾಗವಹಿಸಿದರು.

ಇಂದಿನ ವಿದ್ಯಾರ್ಥಿಗಳ ಮುಂದೆ ಹಿಂದೆಂದಿಗಿಂತ ಹೆಚ್ಚಿನ ಸಮಸ್ಯೆ ಹಾಗೂ ಸವಾಲುಗಳಿವೆ.ಭೂಮಿಯನ್ನು ಉಳಿಸಿಕೊಳ್ಳಲು ಗಾಂಧೀಜಿ ಪ್ರತಿಪಾದಿಸಿದ ಸರಳ ಬದುಕು ಹಾಗೂ ಸುಸ್ಥಿರ ಅಭಿವೃದ್ಧಿ ಅಗತ್ಯವಾಗಿದೆ.ಆತ್ಮವಿಶ್ವಾಸ ಹಾಗೂ ನೆಮ್ಮದಿ ನೀಡುವ ವೃತ್ತಿಯನ್ನು ಯುವಕರು ಆಯ್ದುಕೊಳ್ಳುವಂತಾಗಬೇಕು’ ಎಂದು ಅವರು ಹೇಳಿದರು.
ದಕ್ಷಿಣ-ಪಶ್ಚಿಮ ರೇಲ್ವೆ ವಲಯದ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಡಾ.ಕಾರ್ತಿಕ ಹೆಗಡೆಕಟ್ಟಿ ಮಾತನಾಡಿ,”ಜೀವನದಲ್ಲಿ ಯಶಸ್ವಿಯಾಗಲು ಶಿಸ್ತುಬದ್ಧ ಯೋಜನೆ,ಉತ್ತಮ ಅಭಿವ್ಯಕ್ತಿ,ನಿರ್ಧಿಷ್ಟ ಗುರಿ,ತಪ್ಪಿನಿಂದ ಕಲಿಯುವ ಮನೋಭಾವ ಅಗತ್ಯ.ಕಾಲ್ಪನಿಕ ಹೆದರಿಕೆ ಬಿಟ್ಟು ಹೊಸ ವಿಚಾರದ ಆವಿಷ್ಕಾರದ ಮನೋಭಾವದೊಂದಿಗೆ ಬದುಕಿನಲ್ಲಿ ಮುನ್ನುಗ್ಗಬೇಕು’ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

RELATED ARTICLES  ದಾಂಡೇಲಿಯಲ್ಲಿ ವಾಲ್ಮೀಕಿ ಜಯಂತಿ ಆಚರಣೆ

ಎಂ.ಪಿ.ಇ.ಸೊಸೈಟಿಯ ಅಧ್ಯಕ್ಷ ಕೃಷ್ಣಮೂರ್ತಿ ಭಟ್ಟ,”ಕರ್ತವ್ಯ ಪ್ರಜ್ಞೆ ಹಾಗೂ ಸಾಮಾಜಿಕ ಹೊಣೆಗಾರಿಕೆಯೊಂದಿಗೆ ಕಾರ್ಯ ತತ್ಪರರಾಗಬೇಕು’ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಡಾ.ಎಸ್.ಎಸ್.ಹೆಗಡೆ “ಮಹನೀಯರ ಬದುಕಿನ ಆದರ್ಶಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.
ವಿದ್ಯಾರ್ಥಿ ಕಾರ್ಯದರ್ಶಿಗಳಾದ ರಾಘವೇಂದ್ರ ನಾಯ್ಕ,ಪೈಜಲ್ ಶೇಖ್,ಎಂ.ಎಚ್.ಶಿವಮೂರ್ತಿ,ವಿನೋದ ನಾಯ್ಕ ಉಪಸ್ಥಿತರಿದ್ದರು.

RELATED ARTICLES  ಅಕ್ಟೋಬರ್ 19 ರಂದು “ಭಾಷಾಂತರಂಗ’ ಕಾರ್ಯಕ್ರಮ : ‘ಕಾಸರಗೋಡು ಚಿನ್ನಾ’ ಜೊತೆಗೆ ಮುಕ್ತ ಮಾತು.

ಕಾಲೇಜಿನ್ ಮ್ಯಾಗಝಿನ್ “ಶರಾವತಿ’ ಹಾಗೂ ವಿದ್ಯಾರ್ಥಿಗಳ ಕೈಬರಹ ಪತ್ರಿಕೆಗಳನ್ನು ಬಿಡುಗಡೆಗೊಳಿಸಲಾಯಿತು.
ಪ್ರೊ.ಆರ್.ವಿ.ಹೆಗಡೆ ಸ್ವಾಗತಿಸಿದರು.ಪ್ರೊ.ನಾಗರಾಜ ಹೆಗಡೆ ಅಪಗಾಲ,ಪ್ರೊ.ಪ್ರಶಾಂತ ಹೆಗಡೆ ನಿರೂಪಿಸಿದರು.ಪ್ರೊ.ಜಿ.ಎಸ್.ಭಟ್ಟ,ಡಾ.ರೇಣುಕಾದೇವಿ ಗೋಳಿಕಟ್ಟೆ,ಪ್ರೊ.ಆರ್.ಕೆ.ಮೇಸ್ತ ವಿವಿಧ ವಿಭಾಗಗಳ ವರದಿ ವಾಚಿಸಿದರು.ಡಾ.ವಿ.ಎಂ.ಭಂಡಾರಿ,ಪ್ರೊ.ಪಿ.ಎಂ.ಹೊನ್ನಾವರ ಹಾಗೂ ಪ್ರೊ.ಶಾರದಾ ಭಟ್ಟ ಮ್ಯಾಗಝಿನ್‍ಗಳ ಕುರಿತು ಮಾತನಾಡಿದರು.