*ಸಿದ್ಧಾಪುರ: ಭೀಮಣ್ಣ ಅಭಿಮಾನಿ ಬಳಗದ ಸಾಮಾಜಿಕ ಜಾಲತಾಣದ ತರಬೇತಿ ಕಾರ್ಯಾಗಾರ ಇಂದು ಇಲ್ಲಿಯ ಲಯನ್ಸ್ ಬಾಲಭವನದಲ್ಲಿ ನಡೆಯಿತು. ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದ ಈ ಕಾರ್ಯಾಗಾರದಲ್ಲಿ ಮಾತನಾಡಿದ ಶಿರಸಿ ಎ.ಪಿ.ಎಂ.ಸಿ. ಅಧ್ಯಕ್ಷ ಸುನಿಲ್ ನಾಯ್ಕ ಸಾಮಾಜಿಕ ಜಾಲತಾಣ ಈಗ ಪ್ರಭಾವಿ ಮಾಧ್ಯಮವಾಗಿದ್ದು ಕೆಲವರು ಅದರ ಸದುಪಯೋಗ, ದುರುಪಯೋಗವನ್ನೂಮಾಡುತಿದ್ದಾರೆ. ಭೀಮಣ್ಣ ಅಭಿಮಾನಿ ಬಳಗ ಸಾಮಾಜಿಕ ಜಾಲತಾಣದಲ್ಲಿ ಭೀಮಣ್ಣನವರ ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳ ಪ್ರಚಾರಮಾಡುವ ಮೂಲಕ ಸಮಾಜಸೇವೆಗೆ ನೆರವಾಗುತ್ತಿದೆ ಎಂದರು.

ಕಾರ್ಯಾಗಾರದಲ್ಲಿ ಮಾತನಾಡಿದ ಕಾಂಗ್ರೆಸ್ ಧುರೀಣ ದೀಪಕ ದೊಡ್ಡೂರು ಟೀಕೆ, ವಿಮರ್ಶೆಗಳ ಎಚ್ಚರದೊಂದಿಗೆ ಎಲ್ಲಾ ಕ್ಷೇತ್ರಗಳಲ್ಲಿ ಕೆಲಸಮಾಡುತ್ತಿರುವ ಭೀಮಣ್ಣನವರ ಕಾರ್ಯಚಟುವಟಿಕೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಪ್ರಚಾರ ಮಾಡಬೇಕು ಎಂದರು.

RELATED ARTICLES  ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸಾವು

ಸಾಮಾಜಿಕ ಜಾಲತಾಣಗಳಲ್ಲಿ ಜಾತಿ,ಧರ್ಮ, ಸೈದಾಂತಿಕ ಪ್ರಲೋಭನೆಗಳು ನಡೆಯುತ್ತಿವೆ.ಅವುಗಳ ಮಧ್ಯೆ ಒಳ್ಳೆಯ ಕೆಲಸಗಳಿಗೆ ಹೆಚ್ಚು ಅವಕಾಶ, ಪ್ರಚಾರ ನಡೆಯುವಂತೆ ಕೆಲಸಗಳಾಬೇಕು ಎಂದು ಶ್ರೀಪಾದ ಹೆಗಡೆ ಕಡವೆ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ತಾ.ಪಂ. ಅಧ್ಯಕ್ಷ ಸುಧೀರ್ ಗೌಡರ್ ನಮ್ಮ ಕ್ಷೇತ್ರದಲ್ಲಿ ಕೆಲವು ರಾಜಕಾರಣಿಗಳು 25 ವರ್ಷಗಳಿಂದ ಜನಪ್ರತಿನಿಧಿಗಳಾಗಿ ದುಡಿದು ದಣಿದಿದ್ದಾರೆ. ಅವರಿಗೆ ವಿಶ್ರಾಂತಿ ನೀಡಿ ಭೀಮಣ್ಣನವರಂಥ ಜನಪರ ಕಾಳಜಿಯ ವ್ಯಕ್ತಿಗಳನ್ನು ಜನಪ್ರತಿನಿಧಿಯಾಗಿ ಮಾಡಲು ಸಾಮಾಜಿಕ ಜಾಲತಾಣದ ಚಟುವಟುಕೆಗಳು ನೆರವಾಗಲಿ ಎಂದರು.

RELATED ARTICLES  ಗದ್ದಲ ಎಬ್ಬಿಸಿದ ಶೌಚಾಲಯ ಪ್ರಕರಣ! ಪರಸ್ಪರ ಆರೋಪ ಪ್ರತ್ಯಾರೋಪ.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿದ್ಧಾಪುರ ಎ.ಪಿ.ಎಂ.ಸಿ. ಅಧ್ಯಕ್ಷ ಕೆಜಿ ನಾಗರಾಜ್ ಸಾಮಾಜಿಕ ಜಾಲತಾಣ ಈಗ ಕೆಲವರಿಗೆ ಪ್ರಚಾರ ನೀಡುವ ಕೆಲವರಿಗೆ ಉದ್ದೇಶಿತ ಅಪಪ್ರಚಾರ ಮಾಡುವ ಮಾಧ್ಯಮವಾಗಿದೆ. ಕೆಲಸಮಾಡದಿದ್ದವರ ಅಬ್ಬರದ ಪ್ರಚಾರದ ನಡುವೆ ಕೆಲಸಗಾರರಿಗೆ ಪ್ರಚಾರ ದೊರೆಯದ ದುಸ್ಥಿತಿ ಇದೆ ಎಂದು ವಿಶಾದಿಸಿದರು.

ಸಾಮಾಜಿಕ ಜಾಲತಾಣ ಸೇರಿದಂತೆ ಮಾಧ್ಯಮಗಳಲ್ಲಿ ಜನಪರ ಕೆಲಸಗಳ ಪರಿಚಯವಾಗುತ್ತಿಲ್ಲ. ಸಾಮಾಜಿಕ ಜಾಲತಾಣ, ಮಾಧ್ಯಮಗಳನ್ನು ಬಳಸಿಕೊಳ್ಳುವಲ್ಲಿ ಜಾತ್ಯಾತೀತರು, ಜನಪರರು ಯಶಸ್ವಿಯಾಗುತ್ತಿಲ್ಲ. ಧಾರ್ಮಿಕ,ರಾಜಕೀಯ ಸೋಗಿನ ಕೆಲವರು ಸಾಮಾಜಿಕ ಜಾಲತಾಣಗಳ ದುರ್ಭಳಕೆಯಿಂದ ಸಾರ್ವಜನಿಕರನ್ನು ಧಿಕ್ಕುತಪ್ಪಿಸುತಿದ್ದಾರೆ.