‌ಹೊನ್ನಾವರ: ತಾಲೂಕಿನ ಚಂದಾವರ ಪಂಚಾಯತ್ ವ್ಯಾಪ್ತಿಯ ನೂರಾನಿ ಮೋಹಲ್ಲಾದಲ್ಲಿ ನೂತನವಾಗಿ ಅಂದಾಜು 9 ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡ ಅಂಗನವಾಡಿ ಕೇಂದ್ರ ಉದ್ಘಾಟನೆಗೊಂಡಿದೆ.

ಕುಮಟಾ-ಹೊನ್ನಾವರ ಕ್ಷೇತ್ರದ ಶಾಸಕರು ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಪಂಚಾಯತ್ ಸದಸ್ಯರ, ಅಧಿಕಾರಿಗಳ ಹಾಗೂ ಊರ ನಾಗರಿಕರ ಉಪಸ್ಥಿತಿಯಲ್ಲಿ ಈ
ಅಂಗನವಾಡಿ ಕೇಂದ್ರ ಉದ್ಘಾಟಿಸಿದರು.

RELATED ARTICLES  ಹೊನ್ನಾವರ ಸಾರ್ವಜನಿಕ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳಿಗೆ ಕಾಂಗ್ರೇಸ್ ಮುಖಂಡರಿಂದ ಕಿಟ್ ವಿತರಣೆ.

ಶಿಕ್ಷಣದ ಮೊದಲ‌ ಹೆಜ್ಜೆ ಅಂಗನವಾಡಿ ಕೇಂದ್ರವಾಗಿದ್ದು ಅವುಗಳ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಬೇಕು ಎಂದರು.

ಈ ಸಂಧರ್ಭದಲ್ಲಿ ಗ್ರಾ ಪಂ ಅಧ್ಯಕ್ಷರಾದ ಶ್ರೀ ಚಂದ್ರು ನಾಯ್ಕ, ಗ್ರಾ ಪಂ ಸದಸ್ಯರಾದ ಶ್ರೀ ಅನ್ಸರ್ ಶೇಖ, ಮುಖಂಡರಾದ ಮಹೇಶ ಭಂಡಾರಿ ಉಪಸ್ಥಿತರಿದ್ದರು.

RELATED ARTICLES  ಹಿರೇಗುತ್ತಿ ಹೈಸ್ಕೂಲಿನಲ್ಲಿ ಕನಕದಾಸ ಜಯಂತಿ ಕಾರ್ಯಕ್ರಮ