ಮಂಡ್ಯ: ಪ್ರಥಮ ಪ್ರಯತ್ನದಲ್ಲೇ ಸಂಸದೆಯಾಗಿ, ನಂತರದ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಲ್ಲಿ ಸೋಲುಂಡು ಜಿಲ್ಲೆಗೆ ಅಪರೂಪದ ಅತಿಥಿಯಾಗಿರುವ ರಮ್ಯಾ ಬದಲಿಗೆ ಅವರ ತಾಯಿ ರಂಜಿತಾ ಮಂಡ್ಯದಲ್ಲಿ ಚುನಾವಣಾ ಅಖಾಡಕ್ಕಿಳಿಯಲು ಸಜ್ಜಾಗುತ್ತಿದ್ದಾರೆ.

28 ವರ್ಷ ಸಂಘಟನೆ ಮಾಡಿದ ತಮಗೆ ಕಾಂಗ್ರೆಸ್ ಸೂಕ್ತ ಸ್ಥಾನಮಾನ ನೀಡಿಲ್ಲ. ಆದ್ದರಿಂದ ಹಿತೈಷಿಗಳ ಜತೆ ಚರ್ಚಿಸಿ ಪಕ್ಷೇತರವಾಗಿ ಸ್ಪರ್ಧೆ ಮಾಡುವ ನಿರ್ಧಾರ ಪ್ರಕಟಿಸುವುದಾಗಿ ಅವರು ‘ವಿಜಯವಾಣಿ’ಗೆ ತಿಳಿಸಿದ್ದಾರೆ. ನಾನು ಅಂಬರೀಶ್ ಅಥವಾ ಕಾಂಗ್ರೆಸ್ ವಿರೋಧಿಯಲ್ಲ. ನನ್ನ ಸ್ಪರ್ಧೆ ಬಗ್ಗೆ ಮಗಳ ಜತೆ ಚರ್ಚಿಸಿಲ್ಲ. ಜನರ ಸೇವೆ ಮಾಡುವ ಸಲುವಾಗಿ ಪಕ್ಷೇತರ ಅಭ್ಯರ್ಥಿಯಾಗಲು ಇಚ್ಛಿಸಿರುವೆ ಎಂದು ಹೇಳಿದ್ದಾರೆ. ಆದರೆ ಅಂಬರೀಶ್ ಹಾಗೂ ಅವರ ಬೆಂಬಲಿಗರ ವಿರುದ್ಧ ಅಸಮಾಧಾನ ಇರುವುದು ರಂಜಿತಾ ಅವರ ಮಾತುಗಳಿಂದ ಅರ್ಥವಾಗುತ್ತದೆ.

RELATED ARTICLES  ಸುರಿದ ಮಳೆಗೆ ಕುಸಿದ ಗೋಡೆ : ಜನ ಜೀವನ ಅಸ್ತವ್ಯಸ್ಥ