ಯಲ್ಲಾಪುರ ; ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಸುಪಾ ಚಾರಿಟೇಬಲ್ ಪೌಂಡೇಶನ್ ಜೊಯಿಡಾ. ಹಾಗೂ ಯಲ್ಲಾಪುರದ ರಂಗ ಸಹ್ಯಾದ್ರಿ ಇವರ ಸಹಯೋಗದಲ್ಲಿ ಕಲಾಹಬ್ಬ 2018 ಪಟ್ಟಣ ವ್ಯಾಪ್ತಿಯ ಎಪಿಎಂಸಿ ಆವಾರದ ಅಡಿಕೆ ಭವನದಲ್ಲಿ ಮಂಗಳವಾರ ನಡೆಯಿತು.

ಕಲೆ ಕಲಾವಿದರಿದ್ದಲ್ಲಿ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ, ಇತ್ತೀಚೆಗೆ ಸಂಗೀತವನ್ನು ಪೂಜಿಸುವ ಹಾಗೂ ಆರಾಧಿಸುವ ಸಂಖ್ಯೆ ಕಡಿಮೆಯಾಗುತ್ತಿದೆ ಎಂದ ಅವರು, ಸಂಗೀತಕ್ಕೆ ಮನುಷ್ಯನ ಮನಸ್ಸನ್ನು ಉಲ್ಲಾಸಮಯವಾಗಿಸುವ ಶಕ್ತಿಯಿದೆ. ನಾವು ಎಷ್ಟೆ ಒತ್ತಡದ ಮಧ್ಯದಲ್ಲಿದ್ದರೂ, ಪ್ರತಿ ದಿನ ನಮಗಾಗಿ ಕೆಲವು ಸಮಯ ಮೀಸಲಿಡಬೇಕು, ಇಂತಹ ಮೀಸಲಿಟ್ಟ ಸಮಯದಲ್ಲಿ ಸಂಗೀತವನ್ನು ಆಲಿಸಿ ಮನಸ್ಸು ದೇಹವನ್ನು ಪ್ರಫುಲ್ಲತೆಗೊಳಿಸಿಕೊಳ್ಳುವಂತೆ ಅವರು ಕರೆ ನೀಡಿದರು.

RELATED ARTICLES  ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿಯ ಶಿಕ್ಷಕ ಹಾಗೂ ವಿದ್ಯಾರ್ಥಿಗಳಿಗೆ ಅಭಿನಂದನೆ.

ಖ್ಯಾತ ಸಂಗೀತಗಾರ ಬೆಂಗಳೂರಿನ ಅನನ್ಯ ಭಾರ್ಗವ ಮಾತನಾಡಿ, ಇಂದಿನ ಪೀಳಿಗೆ ಟಿ.ವಿ ಹಾಗೂ ವಾಟ್ಸಪ್ ಗಳಲ್ಲಿ ಹೆಚ್ಚು ಸಮಯ ಮೀಸಲಿಡುವುದರಿಂದ ಸಂಗೀತದಂತಹ ಕಾರ್ಯಕ್ರಮ ನಗಣ್ಯವಾಗುತ್ತಿವೆ. ಸಂಗೀತ ಕಾರ್ಯಕ್ರಮಕ್ಕೆ ಪ್ರೇಕ್ಷಕರ ಕೊರತೆಯಾಗುತ್ತಿದೆ ಎಂದ ಅವರು ಜನರ ಮನಸ್ಸು ಬದಲಾಗಬೇಕು ಎಂದು ಹೇಳಿದರು.

ಅಧ್ಯಕ್ಷತೆವಹಿಸಿದ್ದ ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಎಂ ಆರ್ ಹೆಗಡೆ ಕುಂಬ್ರಿಗುಡ್ಡೆ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಸಂಗೀತ, ಸಾಹಿತ್ಯ, ನಾಟಕದ ಅನೇಕ ಕಲಾವಿದರಿದ್ದಾರೆ, ಜಿಲ್ಲೆಯ ಮಣ್ಣಿನ ಗುಣದ ಕಾರಣಕ್ಕಾಗಿ ಸಾಮಾನ್ಯ ವ್ಯಕ್ತಿಯಿಂದ ಅಸಾಮಾನ್ಯ ವ್ಯಕ್ತಿಯವರೆಗೂ ಸಂಸ್ಕಾರಯುತ ಬದುಕು ಸಾಗಿಸುತ್ತಿರುವುದನ್ನು ನಾವು ಕಾಣುತ್ತೆವೆ. ಜಿಲ್ಲೆಯಲ್ಲಿ ಸಂಗೀತ, ಸಾಹಿತ್ಯದಂತಹ ಕಲೆಗಳು ಎಂದಿಗೂ ಸೊರಗಬಾರದು, ಜಿಲ್ಲೆಯ ಜನತೆ ಕಲೆಯನ್ನು ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ಅವರು ಕರೆ ನೀಡಿದರು.

RELATED ARTICLES  ಉಡುಪಿಯಲ್ಲಿ ಇಂದಿನಿಂದ ಮೂರು ದಿವಸ ಆಯೋಜಿಸಿರುವ ಧರ್ಮ ಸಂಸದ್​​ಗೆ ಚಾಲನೆ.

ರಂಗ ಸಹ್ಯಾದ್ರಿ ಅಧ್ಯಕ್ಷ ಡಿ ಎನ್ ಗಾಂವ್ಕರ ಪ್ರಾಸ್ತಾವಿಕ ಮಾತನಾಡಿ, ಸುಪಾ ಚಾರಿಟೇಬಲ್ ಪೌಂಡೇಶನ ಭಾರತೀಯ ಕಲೆಗಳನ್ನು ಸಂಗೀತವನ್ನು ಉಳಿಸ ಬೆಳೆಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಸುಪಾ ಚಾರಿಟೇಬಲ್ ಪೌಂಡೇಶನ್ ಪ್ರಮುಖ ಗಿರೀಶ ಭಾಗ್ವತ ಸ್ವಾಗತಿದರು, ಸುಪರ್ಣ ದೇಸಾಯಿ ನಿರೂಪಿಸಿದರು.