ಯಲ್ಲಾಪುರ ; ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆ ನಿಮಿತ್ತ ಜಿಲ್ಲೆಯಾದ್ಯಂತ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪರವಾನಿಗೆ ಹೊಂದಿರುವ ಬಂದೂಕು ಹಾಗೂ ಪರವಾನಿಗೆಯ ಮಾಹಿತಿ ಪರಿಶಿಲಿಸುತ್ತಿದ್ದಾರೆ.

ಕೆಲವರು ಪರವಾನಿಗೆಯನ್ನು ನವೀಕರಿಸಿಕೊಳ್ಳದೇ ಇರುವುದು ಗಮನಕ್ಕೆ ಬಂದಿರುತ್ತಿದ್ದು, ಅಂತಹ ಬಂದೂಕುದಾರರು ತಮ್ಮ ಬಂದೂಕುಗಳನ್ನು ಪೊಲೀಸ್ ಠಾಣೆಗೆ ಜಮಾ ಮಾಡಬೇಕು, ಒಂದು ವೇಳೆ ಜಮಾ ಮಾಡದಿದ್ದರೆ ಅಂತವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES  ಕೊವಿಡ್ ಪರೀಕ್ಷೆ ನಿರಾಕರಿಸಿದರೆ ಕಠಿಣ ಕ್ರಮ : ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಕೆ.

ಯಲ್ಲಾಪುರ ತಾಲ್ಲೂಕಿನಲ್ಲಿಯ ಬಂದೂಕುದಾರರು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಬಂದೂಕು ಜಮಾ ಮಾಡಬೇಕೆಂದು ಪೊಲೀಸ್ ನಿರೀಕ್ಷಕರಾದ ಡಾ.ಮಂಜುನಾಥ ನಾಯಕ ತಿಳಿಸಿದ್ದಾರೆ.