ಹೊನ್ನಾವರ: ಜಿಲ್ಲಾ ಪಂಚಾಯತ್ ಕಾರವಾರ ಮತ್ತು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿಗಳು ಕಾರವಾರ ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕಾ ಆಸ್ಷತ್ರೆ ಹೊನ್ನಾವರ ಇಲ್ಲಿ ನೂತನವಾಗಿ “ಡಯಾಲಿಸಿಸ್ ಘಟಕ”ವನ್ನು ಪ್ರಾರಂಭಿಸಲಾಗಿದ್ದು ಅದರ ಉದ್ಘಾಟನಾ ಸಮಾರಂಭ ಇಂದು ನಡೆಯಿತು.

RELATED ARTICLES  ಲೈಫ್ ಗಾರ್ಡ್ ಸಿಬ್ಬಂದಿಗಳಿಗೆ ಜೀವ ರಕ್ಷಕ ತರಬೇತಿ

ಕುಮಟಾ-ಹೊನ್ನಾವರ ಕ್ಷೇತ್ರದ ಶಾಸಕರು ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಉದ್ಘಾಟಿಸಿ ಮಾತನಾಡಿದರು. ಜನತೆ ಆರೋಗ್ಯ ಕಾಪಾಡಿಕೊಳ್ಳುವತ್ತ ಪ್ರಯತ್ನಿಸಬೇಕು. ಈ ಡಯಾಲಿಸಿಸ್ ಕೇಂದ್ರ ಜನತೆಗೆ ಅನುಕೂಲವಾಗಲಿ ಎಂದರು.

RELATED ARTICLES  ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ರಾಘವೇಶ್ವರ ಭಾರತಿ ಶಾಲೆಯ ವಿದ್ಯಾರ್ಥಿಗಳ ಸಾಧನೆ.

ಈ ಸಂದರ್ಭದಲ್ಲಿ ಉಲ್ಲಾಸ ನಾಯ್ಕ, ಶರಾವತಿ ಮೇಸ್ತ, ತುಕಾರಾಮ ನಾಯ್ಕ, ಜಗದೀಪ ತೆಂಗೇರಿ, ಹುಸೇನ್ ಖಾದ್ರಿ, ಲಲಿತಾ ನಾಯ್ಕ, ತಾರಾ ಗೌಡ, ಆಸ್ಪತ್ರೆ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು‌…