ಶಾಸಕರಾದ ಶಾರದಾ ಶೆಟ್ಟಿ ಹಾಗೂ ಜೇ.ಡಿ.ಎಸ್ ಅಭ್ಯರ್ಥಿ ಪ್ರದೀಪ ನಾಯಕರ ಮುಸುಕಿನ ಗುದ್ದಾಟ ಸ್ಪೋಟಗೊಂಡಿದ್ದು .ಮೊನ್ನೆ ನಡೆದ ಸುದ್ದಿಗೋಷ್ಟಿಯಲ್ಲಿ ಪ್ರದೀಪ ನಾಯಕ ನಾನೂ ಜೆ.ಡಿ.ಎಸ್ ಸಭೆಯಲ್ಲಿ ಕುಮಟಾ ಒಳಚರಂಡಿ ಅವೈವಸ್ಥೆಯ ಬಗ್ಗೆ ಮಾತನಾಡುತ್ತ ಶಾಸಕರು ಕಮಿಷನ್ ತೆಗೆದುಕೊಂಡಿದ್ದಾರೆ ಎಂದು ಶಾಸಕರ ಮೇಲೆ ಮಾಡಿದ ಆರೋಪ ನಿಜ. ಆದರೆ ಶಾಸಕರು ತಮ್ಮ ಒಳಚರಂಡಿ ಕಾಮಗಾರಿಯ ಬಗ್ಗೆ ಸಮರ್ಥನೆ ಮಾಡಿಕೊಳ್ಳುವ ಬದಲು ತನ್ನ ವೈಕ್ತಿತ್ವವನ್ನು ಹಾಳುಮಾಡುವ ನಿರಾಧಾರ ಆರೋಪವನ್ನು ಮಾಡುತಿರುವುದು ಖಂಡನಿಯವಾಗಿದೆ. ಇದು ನಮ್ಮ ಜೆ.ಡಿ.ಎಸ್ ಪಕ್ಷದಿಂದ ಈ ಬಾರಿ ವಿಧಾನಸಭಾ ಚುನಾವಣೆಗೆ ನನ್ನ ಹೆಸರು ಘೋಷಣೆಯಾಗುತಿದ್ದಂತೆ ಇವರು ಭಯಗೊಂಡು ಮುಂದೆ ನಾನೂ ಚುನಾವಣೆಯಲ್ಲಿ ಇವರಿಗೆ ಮಾರಕವಾಗುತ್ತೆನೆ ಎನ್ನುವ ದೃಷ್ಠಿಯಿಂದ ನನ್ನ ತೇಜೋವದೆ ನಡೆಸಿದ್ದಾರೆ ಎಂದು ಕುಮಟಾ ಜೆ.ಡಿ.ಎಸ್ ಅಭ್ಯರ್ಥಿ ಮತ್ತು ಜಿಲ್ಲಾ ಪಂಚಾಯತ ಸದಸ್ಯ ಪ್ರದೀಪ ನಾಯಕ ಶಾಸಕರಾದ ಶಾರದಾ ಶೆಟ್ಟಿಯವರ ಆರೋಪಕ್ಕೆ ಪ್ರತಿಯಾಗಿ ಸ್ಪಷ್ಟೀಕರಣ ನೀಡಿದ್ದರು.
ನಾನೂ ಅಕ್ರಮವಾಗಿ ಚಿಪ್ಪಿ ಉದ್ಯಮವನ್ನು ಮಾಡುತಿದ್ದೇನೆ ಎನ್ನುವ ಶಾಸಕರು, ಅದಕ್ಕೆ ಸರಿಯಾದ ದಾಖಲೆಯನ್ನು ಒದಗಿಸಬೇಕು. ಮತ್ತು ಇವರದೆ ಸರಕಾರ ಇರುವುದರಿಂದ ತಡೆಗಟ್ಟುಬೇಕು ಹಾಗೂ ಚಿಪ್ಪಿ ಉದ್ಯಮದಿಂದ ಚಿಪ್ಪಿಕಲ್ಲ ನಾಶವಾಗುತ್ತೆ ಎನ್ನುವ ಮೊಸಳೆ ಕಣ್ಣಿರಿನ ಕಥೆ ಹೇಳುತಿದ್ದಾರೆ. ಆದರೆ ಒಂದಡೆ ಸರಕಾರಕ್ಕೆ ಬರೆದ ಪತ್ರದಲ್ಲಿ ಚಿಪ್ಪಿ ಉದ್ಯಮವನ್ನು ಟೆಂಡರ್ ಮೂಲಕ ಕರೆಯಬೇಕು ಎನ್ನುವ ಮನವಿ ಮಾಡಿದ್ದಾರೆ. ಟೆಂಡರ್ ಮೂಲಕ ಚಿಪ್ಪಿ ತೆಗೆಯುವುದಿದ್ದರೆ ಚಿಪ್ಪಿ ಕಲ್ಲು ನಾಶವಾಗುವುದಿಲ್ಲವಾ? ಇದು ಶಾಸಕರ ದ್ವಂದ್ವ ನೀತಿ. ಇಂದು ಚಿಪ್ಪಿ ಉದ್ಯಮ ಶಾಸಕರನ್ನು ಪಾಲುದಾರರನ್ನಾಗಿ ಮಾಡಿಕೊಳ್ಳದ ಪರಿಣಾಮ, ಸ್ಥಗಿತವಾಗಿದೆ. ಅದೇ ರೀತಿ ಇಸ್ಪಿಟ್ ನಡೆಸುತ್ತಾರೆ ಎನ್ನುವ ಆರೋಪ ಮಾಡಿದ್ದಾರೆ ಇವರದೆ ಸರಕಾರ ಇದೆ. ನನ್ನ ಕ್ಷೇತ್ರದಲ್ಲಿ ಎಷ್ಟು ಇಸ್ಪಿಟ್ ಕ್ಲಬ್‍ಗಳಿವೆ ಎನ್ನುವುದುನ್ನು ತೋರಿಸಲಿ. ಮತ್ತು ಶಾಸಕರ ಮನೆಯ ಮುಂದೆಯೇ ಇಸ್ಪಿಟ್, ಮಟ್ಕ ದಂದೆ ನಡೆಯುತ್ತೆ ಅದನ್ನು ಯಾಕೆ ವಿರೋಧಿಸುತಿಲ್ಲ? ಎಂದ ಅವರು, ಸಿಲಿಕಾನ್ ಸ್ಯಾಂಡ್ ಬಗ್ಗೆ ಮಾತನಾಡಿ ಅವರು, ಶಾಸಕರಾದ ಶಾರದಾ ಶೆಟ್ಟಿ ಅವರು ಅಧಿಕಾರಕ್ಕೆ ಬರುವ ಮುನ್ನವೆ ನಾನೂ ಮತ್ತು ಸ್ಥಳಿಯ ಪಂಚಾಯತ ವಿರೋಧ ಮಾಡಿ ಬಂದ್ ಮಾಡಿಸಿದ್ದೆವೆ ಮತ್ತು ಗುತ್ತಿಗೆದಾರರಿಗೆ ದಂಡ ಕೂಡ ಸರಕಾರ ಹಾಕಿದೆ ಎಂದು, ಅಂದಿನ ಪತ್ರಿಕೆಯಲ್ಲಿ ಬಂದ ವರದಿಯನ್ನು ತೋರಿಸಿ ದಾಖಲೆ ನೀಡಿದ್ರು,, ಹೀಗೆ ಶಾಸಕರು ಮಾಡಿದ ಎಲ್ಲಾ ಆರೊಪವನ್ನು ತಳ್ಳಿ ಹಾಕಿದ ಅವರು ನಾನೂ ಶಾಸಕರಿಗೆ ಹದಿನೈದು ದಿನ ಸಮಯ ನೀಡುತ್ತೆನೆ ಅವರು ನನ್ನ ಮೇಲೆ ಮಾಡಿದ ಒಂದು ಆರೋಪವನ್ನಾದರೂ ಸಾಬೀತುಪಡಿಸಬೇಕು ಇಲ್ಲವಾದರೆ ಅವರು ಸಾರ್ವಜನಿಕರ ಎದುರಿನಲ್ಲಿ ನನಗೆ ಕ್ಷಮೆ ಕೇಳಿದ್ರೆ ಸಾಕು, ರಾಜಿನಾಮೆ ನೀಡಬೇಕೆಂದು ನಾನೂ ಕಳುವುದಿಲ್ಲ. ಇಲ್ಲವಾದರೆ ನಾನು ಶಾಸಕರ ಅವ್ಯವಾಹರದ ಬಗ್ಗೆ ಸರಣಿ ಸರಣಿಯಾಗಿ ದಾಖಲೆ ಸಮೇತ ಆರೋಪ ಮಾಡುತ್ತೆನೆ ಎಂದಿದ್ದರು.
ಈ ವಿಷಯದ ಕುರಿತಾಗಿ ಇಂದು ಮಾಧ್ಯಮದವರ ಪ್ರಷ್ನೆಗೆ ಇತ್ತರಿಸಿದ ಶಾಸಕರಾದ ಶಾರದಾ ಶೆಟ್ಟಿ ನಾನು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ಕಳ್ಳರ ಜೊತೆ ನಾನೇಕೆ ಕ್ಷಮೆ ಕೇಳಬೇಕು ಎಂದು ಪ್ರಶ್ನಿಸಿದರು. ನಾನು ಆಧಾರವಿಲ್ಲದೇ ಮಾತನ್ನಾಡುವುದಿಲ್ಲ.ನಮ್ಮ ಕಟ್ಟಡ ಇರುವುದೂ ಸೂಕ್ತವಾದ ಸ್ಥಳದಲ್ಲಿಯೇ, ಅದರಲ್ಲಿ ಮೋಸ ಯಾವುದೂ ಇಲ್ಲ. ಪ್ರದೀಪ ನಾಯಕರ ಹೇಳಿಕೆ ನಿರಾಧಾರ ಎಂದರು. ನಾನು ಯಾವುದೇ ತಪ್ಪು ಮಾಡಿಲ್ಲ. ಸಮಾಜಸೇವೆಯೊಂದೇ ನನ್ನ ಗುರಿಯೆಂದು ಸ್ಪಷ್ಟನೆ ನೀಡಿದರು.
ಈ ಬಗ್ಗೆ ಪ್ರದೀಪ ನಾಯಕ್ ಯಾವ ರೀತಿ ಪ್ರತಿಕ್ರಿಯೆ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.