ಕುಮಟಾ: ಕುಮಟಾ ಜನತೆಗೆ ಅಗತ್ಯವಾಗಿದ್ದ ಮೀನು ಮಾರುಕಟ್ಟೆ ನಿರ್ಮಾಣಕ್ಕೆ ಚಾಲನೆ ದೊರೆತಿದೆ.

2017-18 ನೇ ಸಾಲಿನ ಆರ್ಥಿಕ ವರ್ಷದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅನುದಾನದಡಿ ಕುಮಟಾ ತಾಲೂಕಿನ ಪುರಸಭೆ ವ್ಯಾಪ್ತಿಯ ಮೀನು ಮಾರುಕಟ್ಟೆ ನವೀಕರಣ ಕಾಮಗಾರಿಯ ಭೂಮಿಪೂಜೆಯನ್ನು ಶಾಸಕರು ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ನೆರವೇರಿಸಿದರು.

RELATED ARTICLES  ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಸರ್ವೆಪಲ್ಲಿ ರಾಧಾಕೃಷ್ಣನ್ ಜನ್ಮದಿನಾಚರಣೆ

ನಂತರ ಮಾತನಾಡಿದರು ಜನತೆಯ ಬಹುದಿನದ ಬೇಡಿಕೆ ಈಢೇರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಜನತೆಯ ಮನವಿಗೆ ಸ್ಪಂದಿಸಿ ಈ ಕಾರ್ಯಕ್ಕೆ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ಅವರು ಅಭಿಪ್ರಾಯಟ್ಟರು.

RELATED ARTICLES  ಬಸ್ ಮತ್ತು ಬೈಕ್ ಅಪಘಾತ -ಬೈಕ್ ಸವಾರ ಗಂಭೀರ.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷರಾದ ಮಧುಸೂದನ ಶೇಟ, ಉಪಾಧ್ಯಕ್ಷರು, ಸದಸ್ಯರು, ಮುಖಂಡರಾದ ವಿ ಎಲ್ ನಾಯ್ಕ, ಜಗದೀಶ ಹರಿಕಂತ್ರ, ಶಿವರಾಮ ಹರಿಕಂತ್ರ, ರಾಜು ಅಂಬಿಗ ಮುಂತಾದವರು ಉಪಸ್ಥಿತರಿದ್ದರು.