ಹೊನ್ನಾವರ: ಹಳದಿಪುರದ ಶ್ರೀ ರಾಜೇಶ ಇಲೆವೆನ್ ಆಶ್ರಯದಲ್ಲಿ ನಡೆದ ಪ್ರಥಮ ವರ್ಷದ ಹಿಂದೂ ಟ್ರೋಫಿಯ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾವಳಿ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮವನ್ನು ಬಿಜೆಪಿ ಮುಖಂಡರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ ನ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆಯವರು ದೀಪ ಬೆಳಗಿಸಿ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ವಿವಿಧತೆಯಲ್ಲಿ ಏಕತೆಯನ್ನು ಸಾರುವ ಹೆಮ್ಮೆಯ ಧರ್ಮ ಹಿಂದೂ ಧರ್ಮ. ತಲೆ ತಲಾಂತರದಿಂದ ಒಡೆದು ಆಳುವ ಜನರು ತಮ್ಮ ಕುಟಿಲ ಬುದ್ಧಿಯನ್ನು ಕಾರ್ಯರೂಪಕ್ಕೆ ತರಲೆತ್ನಿಸಿದಾಗ ಒಗ್ಗಟ್ಟಾಗಿ ಎದುರಿಸಿ ತೋರಿಸಿದವರು ನಾವು ಹಿಂದುಗಳು. ರಾಷ್ಟ್ರ ಮತ್ತು ಧರ್ಮದ ವಿಷಯದಲ್ಲಿ ಎಂದೂ ರಾಜಿಯಾಗಲು ಸಾಧ್ಯವಿಲ್ಲ ಎಂದರು ಹಿಂದೆಯೂ ಮುಂದೆಂದು
ನನ್ನ ಹಿಂದೂ ಧರ್ಮ ನನ್ನ ಹೆಮ್ಮೆ ಎಂದು ಅವರು ಹೇಳಿದರು.

RELATED ARTICLES  ಮುರ್ಡೇಶ್ವರದಲ್ಲಿ ಬಲೆಗೆ ಬಿದ್ದ ಬೈಕ್ ಕಳ್ಳರು! ಅಬ್ಬಾ ಕದ್ದಿದ್ದೆಷ್ಟು ಗೊತ್ತಾ?

ಮಾಜಿ‌ ಶಾಸಕ‌ ಹಾಗೂ ಬಿಜೆಪಿ ಮುಖಂಡರಾದ ದಿನಕರ ಶೆಟ್ಟಿ ಕಾರ್ಯಕ್ರಮದಲ್ಲಿ ಹಾಜರಿದ್ದು ಕಾರ್ಯಕ್ರಮದ‌ ಸಂಘಟಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ. ನಮ್ಮದು ಪ್ರಭಲ ‌ದೇಶ ದೇಶಾಭಿಮಾನ ಬೆಳೆಸಿಕೊಂಡು ದೇಶ ಕಟ್ಟುವ ಕೆಲಸ‌ ಯುವಕರಿಂದ‌ ಆಗಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

RELATED ARTICLES  ಕುಮಟಾ ಶಿಕ್ಷಕರ ಸಂಘಕ್ಕೆ ನಾಮನಿರ್ದೇಶಿತ ಸದಸ್ಯರ ನೇಮಕ- ಶಿಕ್ಷಕರ ಹಿತರಕ್ಷಣೆ ನಮ್ಮ ಆದ್ಯ ಕರ್ತವ್ಯ ಎಂಬ ಸಂಕಲ್ಪ.

ಜಿ.ಪಂ‌ಸದಸ್ಯ ಶಿವಾನಂದ ಹೆಗಡೆ, ಗಣಪತಿ ನಾಯ್ಕ , ಹಾಗೂ ಇನ್ನಿತರ ಪ್ರಮುಖರು ಹಾಜರಿದ್ದರು.