ಕುಮಟಾ: “ಭಾರತೀಯ ಜೀವ ವಿಮಾ ನಿಗಮ ಭಾರತದಾದ್ಯಂತ ಸೇವೆಯಲ್ಲಿ ಮಂಚೂಣಿಯಲ್ಲಿದೆ. ಗ್ರಾಹಕರ ಅತ್ಯಂತ ನಂಬಿಕಸ್ಥ ಸಂಸ್ಥೆಯಾಗಿದೆ. ವಿದ್ಯಾರ್ಥಿಯ ಕಲಿಕೆಗೆ ಕೂಡ ಉತ್ತೇಜನ ನೀಡುತ್ತಿದೆ” ಎಂದು ಕೆ. ಪ್ರಕಾಶ ಕುಮಟಾ ಇವರು ನುಡಿದರು.

ಅವರು ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲಿನಲ್ಲಿ ನಡೆದ ಭಾರತೀಯ ಜೀವ ವಿಮಾ ನಿಗಮದ ವಿಮಾ ಗ್ರಾಮ ಯೋಜನೆಯಡಿಯಲ್ಲಿ ಸಹಾಯ ಧನ ವಿತರಣಾ ಸಮಾರಂಭದಲ್ಲಿ ಚೆಕ್ ವಿತರಿಸಿ ಮಾತನಾಡಿದರು. “ಸ್ವಚ್ಛತೆ ಉತ್ತಮ ಆರೋಗ್ಯದ ತಳಹದಿ ಆದ್ದರಿಂದ ನಾವು ಮೊದಲು ನಮ್ಮ ಮನೆ, ಶಾಲೆ, ಗ್ರಾಮ ಸ್ವಚ್ಛವಾಗಿಟ್ಟುಕೊಳ್ಳಬೇಕು. ಈ ದಿಶೆಯಲ್ಲಿ ಎಲ್.ಐ.ಸಿ ನೀಡಿದ ಸಹಾಯ ಧನವನ್ನು ಶೌಚಾಲಯ ಕಾರ್ಯಕ್ಕೆ ಉಪಯೋಗಿಸಿಕೊಳ್ಳಿ ಎಂದರು. ಅಲ್ಲದೇ ವಿದ್ಯಾರ್ಥಿಗಳು ತಮ್ಮ ಭವಿಷತ್ತಿನ ಜೀವನವನ್ನು ಉತ್ತಮ ಕಲಿಕೆಯಿಂದ ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ” ಎಂದರು.

RELATED ARTICLES  ಅಪ್ರತಿಮ ಸಾಧನೆ ತೋರಿದ ಕುಮಟಾದ ಗಿಬ್ ಆಂಗ್ಲಮಾಧ್ಯಮ

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಹೊನ್ನಪ್ಪ ಎನ್. ನಾಯಕ “ಭಾರತೀಯ ಜೀವ ವಿಮಾ ನಿಗಮವು ಸೇವಾ ಮನೋಭಾವನೆಯಿಂದ ಹುಟ್ಟಿಕೊಂಡಿದೆ. ತನ್ನ ಲಾಭಾಂಶದಲ್ಲಿ ಸ್ವಲ್ಪ ಹಣವನ್ನು ಸಮಾಜೋಪಯೋಗಿ ಕೆಲಸಗಳಿಗಾಗಿ ನೀಡುತ್ತಿದೆ. ಸಂಸ್ಥೆಯ ಸಹಕಾರ ಹೀಗೆಯೇ ಮುಂದುವರಿಯಲಿ” ಎಂದರು.
ಭೀಮಪ್ಪ ಮಾತನಾಡಿ “ಭಾರತೀಯ ಜೀವ ವಿಮಾ ನಿಗಮವು ನೀಡುವ ಸಹಾಯಧನಕ್ಕೆ ಕಾರಣ ೀಕತೃರಾದ ಎಲ್ಲರನ್ನೂ ಸ್ಮರಿಸಿದರು. ಸಂಸ್ಥೆಯ ಧ್ಯೇಯೋದ್ದೇಶದ ಕುರಿತು ಮಾತನಾಡಿದರು.

ಮಹಾತ್ಮ ಗಾಂಧಿ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಹೊನ್ನಪ್ಪ ಎನ್. ನಾಯಕ ಇವರು ಎಲ್.ಐ.ಸಿ ಅಧಿಕಾರಿಗಳಾದ ಕೆ. ಪ್ರಕಾಶ, ಭೀಮಪ್ಪ ಹಾಗೂ ಶಂಕರ ಕೆ. ಗೌಡ ಇವರನ್ನು ಸನ್ಮಾನಿಸಿದರು.

RELATED ARTICLES  ಒಂದೇ ವಾರದೊಳಗೆ ತಲಗೋಡ್ ಸಮಸ್ಯೆ ಬಗೆಹರಿಸಿದ ಶಾಸಕ ದಿನಕರ ಶೆಟ್ಟಿ

ಕಾರ್ಯಕ್ರಮದಲ್ಲಿ ಕಮಲಾಕ್ಷ ಗಾಂವಕರ ಕುಮಟಾ, ಶಂಕರ ಕೆ. ಗೌಡ, ಗಣಪತಿ ಹಾಗೂ ಶಾಲೆಯ ಶಿಕ್ಷಕರಾದ ಬಾಲಚಂದ್ರ ಹೆಗಡೆಕರ ವಿಶ್ವನಾಥ ಬೇವಿನಕಟ್ಟಿ, ನಾಗರಾಜ ನಾಯಕ, ಇಂದಿರಾ ನಾಯಕ, ಶಿಲ್ಪಾ ನಾಯಕ, ಸೌಜನ್ಯ ಬಂಟ ಉಪಸ್ಥಿತರಿದ್ದರು.

ಕಾರ್ಯಕ್ರಮವು ಶಶಿ ಸಂಗಡಿಗರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಶಾಲೆಯ ಮುಖ್ಯೋಧ್ಯಾಪಕರಾದ ರೋಹಿದಾಸ ಗಾಂವಕರ ಸ್ವಾಗತಿಸಿದರು. ಎನ್.ರಾಮು ಹಿರೇಗುತ್ತಿ ಕಾರ್ಯಕ್ರಮ ನಿರೂಪಿಸಿದರು. ಮಹಾದೇವ ಬಿ. ಗೌಡ ಸರ್ವರನ್ನೂ ವಂದಿಸಿದರು.