ಅಂಕೋಲಾ: ತಾಲೂಕಿನ ಶೆಟಗೇರಿಯಲ್ಲಿ ನಡೆಯಲಿರುವ ಅಂಕೋಲಾ ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾಗಿ ನಿವೃತ್ತ ಪ್ರಾದ್ಯಾಪಕ ಹಾಗೂ ಶ್ರೀ ಶಾಂತಿಕಾ ಸೌಹಾರ್ದ ಸಹಕಾರಿ ಅಧ್ಯಕ್ಷ ಕೆ.ವಿ.ನಾಯಕ ಅವರು ಆಯ್ಕೆ ಆಗಿದ್ದಾರೆ.

ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಜೇಂದ್ರ ನಾಯ್ಕ , ಶಾಸಕ ಸತೀಶ ಸೈಲ್, ಜಿ.ಪ. ಮಾಜಿ ಅಧ್ಯಕ್ಷ ರಮಾನಂದ ನಾಯಕ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಿರ್ದೇಶಕ ಜಿ.ಎಂ.ಶೆಟ್ಟಿ ಅವರು ಗೌರವಾಧ್ಯಕ್ಷರಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ತಾಲೂಕು ಕಸಾಪ ಅಧ್ಯಕ್ಷ ಡಾ. ಪ್ರಕಾಶ ನಾಯಕ ಅವರು ಕಾರ್ಯನಿರ್ವಾಹಕರಾಗಿ ಕಾರ್ಯನಿರ್ವಹಿಸಲಿದ್ದು, ಉಪಾಧ್ಯಕ್ಷರಾಗಿ ತಾ.ಪಂ.ಅಧ್ಯಕ್ಷೆ ಸುಜಾತಾ ಗಾಂವಕರ, ಜಿ.ಪಂ.ಸದಸ್ಯೆ ಸರಳಾ ದೀಕ್ಷಿತ, ಶೆಟಗೇರಿ ಗ್ರಾ.ಪಂ.ಅಧ್ಯಕ್ಷ ಶಶಿಧರ ಎನ್.ನಯಕ, ತಹಸೀಲ್ದಾರ ವಿವೇಕ ಶೇಣ ್ವ, ಅಂಕೋಲಾ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಾನಂದ ಮಲ್ನಾಡ್, ಅಂಕೋಲಾ ವೃತ್ತ ಆರಕ್ಷಕ ನಿರೀಕ್ಷಕರು, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಎನ್.ವಿ.ನಾಂiÀಕ, ಪಿ.ಎಂ. ಹೈಸ್ಕೂಲ್ ಅಧ್ಯಾಪಕ ನಾಗಪತಿ ಹೆಗಡೆ ಅವರು ಇದ್ದಾರೆ.

ಶಾಂತಾರಾಮ ನಾಯಕ ಹಿಚಕಡ, ಬಿ.ಹೊನ್ನಪ್ಪ, ವಿಷ್ಞು ನಾಯ್ಕ, ಪ್ರೊ. ಮೋಹನ ಹಬ್ಬು, ಡಾ. ರಾಮಕ್ರಷ್ಣ ಗುಂದಿ, ಪುರಸಭೆ ಅದ್ಯಕ್ಷೆ ಅಂಜಲಿ ಐಗಳ, ಜಿ.ಪಂ.ಸದಸ್ಯರಾದ ಜಗದೀಶ ನಾಯಕ, ಉಷಾ ಉದಯ ನಾಯಕ, ತಾ.ಪಂ.ಸದಸ್ಯೆ ಶಾಂತಿ ಆಗೇರ, ಕರ್ನಾಟಕ ಸಂಘದ ಅಧ್ಯಕ್ಷ ಅರವಿಂದ ನಾಯಕ, ನಾಗೇಂದ್ರ ನಾಯಕ ಅವರು ವಿಶೇಷ ಆಮಂತ್ರಿತರಾಗಿ ಸ್ಪಂದಿಸಲಿದ್ದಾರೆ.
ಸದಸ್ಯರಾಗಿ ಹಾಗೂ ವಿವಿಧ ಸಮಿತಿಗಳ ಸದಸ್ಯರಾಗಿ ತಾಲೂಕಿ ಹಲವು ಗಣ್ಯರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ಸ್ವಾಗತ ಸಮಿತಿ ಸಭೆ: ಪಟ್ಟಣದ ಕನ್ನಡ ಭವನದಲ್ಲಿ ನಡೆದ ಅಂಕೋಲಾ ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಸಬೆ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಸ್ವಾಗತ ಸಮಿತಿ ಅಧ್ಯಕ್ಷ ಕೆ.ವಿ.ನಾಯಕ ಅವರು ತಾಲೂಕು ಸಾಹಿತ್ಯ ಸಮ್ಮೇಳನವನ್ನು ಎಲ್ಲರ ಸಹಕಾರದೊಂದಿಗೆ ಅತ್ಯಂತ ಪರಿಣಾಮಕಾರಿಯಾಗಿ ಸಜ್ಜುಗೊಳಿಸುತ್ತೇವೆ. ಆಮಂತ್ರಣ ಪತ್ರಿಕೆಯನ್ನು ಕರಡು ಪ್ರತಿ ತಯಾರಿಸಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಅವರೊಂದಿಗೆ ಚರ್ಚಿಸಿ ಸಲಹೆ ಸೂಚನೆ ಪಡೆದು ಅಂತಿಮಗೊಳಿಸುತ್ತೇವೆ. ಸಮ್ಮೇಳನದ ದಿನಾಂಕವನ್ನು ಸ್ಥಳೀಯ ಅನುಕೂಲತೆ ಗಮನಿಸಿ ಸದ್ಯದಲ್ಲಿಯೇ ಘೋಷಿಸಲಾಗುವುದು ಎಂದರು.
ಮೋಹನ ಹಬ್ಬು ಅವರು ಮಾತನಾಡಿ ಸಂಘಟನಾ ಶಕ್ತಿ ಮತ್ತು ಶಿಸ್ತು ಇರುವ ಕೆ.ವಿ.ನಾಯಕ ಅವರು ಸ್ವಾಗತ ಸಮಿತಿ ಅಧ್ಯಕ್ಷರಾಗಿರುವುದರಿಂದ ಸಮ್ಮೇಳನ ಖಂಡಿತ ಯಸಸ್ವಿಯಾಗುತ್ತದೆ. ತಾವೆಲ್ಲರೂ ಅವರಿಗೆ ಸಹಕಾರ ನೀಡೋಣ ಎಂದರು.

RELATED ARTICLES  ಗ್ರಂಥಸ್ಥ ವ್ಯಕ್ತಿತ್ವದ ಮುಲ್ಲಾ ಇಲಾಖೆಗೆ ಮಾದರಿ “ಎದೆಯದನಿ” ಮುಲ್ಲಾಭಿನಂದನದ ಲೋಕಾರ್ಪಣದಲ್ಲಿ ಡಿಡಿಪಿಐ ಅಭಿಮತ

ಸಭೆಯಲ್ಲಿ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಜೇಂದ್ರ ನಾಯ್ಕ ಅವರು ಸಮ್ಮೇಳನದ ಸ್ಮರಣ ಸಂಚಿಕೆಗೆ ನಿಗಮದಿಂದ ರೂ.15 ಸಾವಿರ ಮೌಲ್ಯದ ಜಾಹೀರಾತಿಗಾಗಿ ಸ್ವಾಗತ ಸಮಿತಿ ಅಧ್ಯಕ್ಷ ಕೆ.ವಿ.ನಾಯಕ ಅವರಿಗೆ ಚೆಕ್ ನೀಡಿದರು.
ತಾ.ಪಂ. ಅದ್ಯಕ್ಷೆ ಸುಜಾತಾ ಗಾಂವಕರ, ಸದಸ್ಯೆ ಶಾಂತಿ ಆಗೇರ, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಾನಂದ ಬಿ. ಮಲ್ಲಾಡ್, ರಾಮಕೃಷ್ಣ ಗುಂದಿ, ಎನ್.ವಿ. ನಾಯಕ, ಗೌರಿಶ ನಾಯಕ ಶಿರಗುಂಜಿ, ಎಸ್ ಆರ್. ನಾಯಕ, ರಫೀಕ್ ಶೇಖ್, ವಾಸುದೇವ ನಾಯಕ, ತಿಮ್ಮಣ್ಣ ಭಟ್ಟ ಎಮ್.ಎಮ್..ಕರ್ಕಿಕರ್, ಪ್ರಭಾಕರ ಬಂಟ, ಎನ್.ಬಿ.ನಾಯಕ, ಗೋಪಾಲಕೃಷ್ಣ ನಾಯಕ, ಮುಂತಾದವರಿದ್ದರು.

RELATED ARTICLES  ಚಿನ್ನಾಭರಣ ಹಾಗೂ ನಗದು ದೋಚಿದ ಕಳ್ಳರು..!

ತಾಲೂಕು ಕಸಾಪ ಅಧ್ಯಕ್ಷ ಡಾ. ಪ್ರಕಾಶ ನಾಂiÀiಕ ಸ್ವಾಗತಿಸಿದರು. ಕೋಶಾಧ್ಯಕ್ಷ ಮಹೇಶ ನಾಯಕ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ದಾಮೋದರ ನಾಯ್ಕ ವಂದಿಸಿದರು.