ಹೊನ್ನಾವರ : ಮಹಾತ್ಮಾ ಗಾಂಧಿ ನರೇಗಾ ಯೋಜನೆ ಆರ್ಥಿಕವಾಗಿ ಹಿಂದುಳಿದವರಿಗಾಗಿಯೇ ಇರುವ ಒಂದು ಮಹತ್ವಪೂರ್ಣ ಯೋಜನೆಯಾಗಿದ್ದು, ಸಮಾಜದಲ್ಲಿ ನಿರ್ಗತಿಕರು ಅಸಹಾಯಕರಿಗೆ ಯೋಜನೆ ಅತ್ಯಂತ ಉಪಯೋಗಿಯಾಗಿದೆ ಎಂದು ತಾಲೂಕಾ ಸೋಶಿಯಲ್ ಆಡಿಟರ್ ಉಮೇಶ ಮುಂಡಳ್ಳಿ ಹೇಳಿದರು. ಯೋಜನೆ ನಿಂತ ನೀರಲ್ಲ ಸದಾ ಹರಿಯುವ ನದಿಯಂತೆ. ಯೋಜನೆ ನಿಯಮದಂತೆ ಕಾಮಗಾರಿ ನಿರ್ವಹಿಸಿದ್ದಲ್ಲಿ ಅನೇಕ ಕಾಮಗಾರಿಗಳನ್ನು ಕೈಗೊಳ್ಳಬಹುದಾಗಿದೆ ಎಂದರು. ಈ ಬಗ್ಗೆ ಗ್ರಾಮದ ಸಾಮಾನ್ಯ ಜನರಿಗೆ ಅರಿವೂ ಮೂಡಿಸುವ ಅವಶ್ಯಕತೆ ಇದೆ ಆ ದಿಶೆಯಲ್ಲಿ ಸಾಮಾಜಿಕ ಪರಿಶೋಧನೆ ತಂಡ ತನ್ನ ಪ್ರಯತ್ನ ಮುಂದುವರಿಸಿದೆ ಎಂದರು.
ಸಾಮಾಜಿಕ ಪರಿಶೋಧನೆಯಿಂದ ಇಂದು ನರೇಗಾ ಯೋಜನೆಯ ಕಾಮಗಾರಿಗಳಲ್ಲಿ ಪಾರದರ್ಶಕತೆ ಹೆಚ್ಚಾಗಿದೆ. ಸ್ವಯಂ ಪ್ರೇರಿತವಾಗಿ ಗ್ರಾಮಸ್ಥರು ಪಂಚಾಯತ ಕಡೆಗೆ ಮುಖಮಾಡುವಂತಾಗಿದೆ ಸಾಮಾಜಿಕ ಪರಿಶೋಧನೆಯಿಂದ ಸಾಮಾಜಿಕ ಒಳಗೊಳ್ಳುವಿಕೆ ಸಾಧ್ಯ ಅವರು ಇತ್ತೀಚೆಗೆ ತಾಲೂಕಿನ ಚಿತ್ತಾರ ಗ್ರಾಮ ಪಂಚಾಯತ ಹಿ.ಪ್ರಾ.ಶಾಲಾ ಸಭಾ ಭವನದಲ್ಲಿ ನಡೆದ 2017-18ನೇ ಸಾಲಿನ ಎರಡನೇ ಹಂತದ ಸಾಮಾಜಿಕ ಪರಿಶೋಧನೆ ಗ್ರಾಮ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

RELATED ARTICLES  ಬಾಡ ವಲಯ ಮಟ್ಟದ ಪ್ರತಿಭಾ ಕಾರಂಜಿ: ಚಿತ್ರಿಗಿಯೇ ಬೆಸ್ಟ್

ಗ್ರಾಮಮಟ್ಟದಲ್ಲಿ ನಡೆಯುತ್ತಿರುವ ಹಲವು ಯೋಜನೆಗಳಲ್ಲಿ ಉದ್ಯೋಗ ಖಾತ್ರಿ ಯೋಜನೆ ಅತ್ಯಂತ ಉಪಯುಕ್ತವಾಗಿದ್ದು, ಯಾವುದೇ ಕಾಮಗಾರಿ ನಿರ್ವಹಿಸುವ ಮೊದಲು ಅವಶ್ಯ ದಾಖಲುಗಳನ್ನು ಸಂಗ್ರಹಿಸಿಕೊಂಡು ಮತ್ತು ಯೊಜನೆಯ ನಿಯಮ ಮೀರದಂತೆ ಕಾಮಗಾರಿ ನಿರ್ವಹಿಸಬೇಕಾಗಿ ಗ್ರಾಮಸಭೆಯ ಅಧ್ಯಕ್ಷತೆ ವಹಿಸಿದ್ದ ತಾಲೂಕು ರೇಷ್ಮೇ ನಿರೀಕ್ಷಕ ಆರ್.ಎನ್. ನಾಯ್ಕ ಅವರು ಹೇಳಿದರು. ಸಾಮಾಜಿಕ ಪರಿಶೋಧನಾ ವರದಿಯನ್ನು ತಾಲೂಕು ಸಂಯೋಜಕರ ಸಹಾಯಕರಾದ ಗ್ರಾಮಸಂಪನ್ಮೂಲ ವ್ಯಕ್ತಿ ಅಜಿತ್ ನಾಯ್ಕ ಸಭೆಯಲ್ಲಿ ಮಂಡಿಸಿ ಸಭೆಯ ತಿರ್ಮಾನಕ್ಕೆ ಬಿಟ್ಟರು.

RELATED ARTICLES  ಕುಮಾರಿ ಪೂಜಾ ಹೆಗಡೆ ಮಹಿಮೆಗೆ "ಸೌಮ್ಯಸಿರಿ" ಗೌರವ

ಈ ಅವಧಿಯಲ್ಲಿ ನಿರ್ವಹಿಸಿದ ಕಾಮಗಾರಿಗಳ ವಿವರವನ್ನು, ಹಿಂದಿನ ಸಭೆಯ ನಡಾವಳಿಯನ್ನು ಪಿಡಿಓ ರಾಮದಾಸ್ ನಾಯ್ಕ ಓದಿ ಹೇಳಿದರು. ಪಂಚಾಯತ ಅಧ್ಯಕ್ಷೆ ಶ್ರೀಮಾಲಾ ಗೌಡಾ ಯೋಜನೆಯ ಸದುಪಯೋಗ ಪಡೆದುಕೊಳ್ಳುವ ಬಗ್ಗೆ ಗ್ರಾಮೀಣ ಜನರಲ್ಲಿ ಕೇಳಿಕೊಂಡರು. ಗ್ರಾಮ ಪಂಚಾಯತ ಸದಸ್ಯ ಮೋಹನ ನಾಯ್ಕ, ಸಿಬ್ಬಂದಿ ವರ್ಗದವರು ಮತ್ತು ಫಲಾನುಭವಿಗಳು ಹಾಜರಿದ್ದರು.