ಸಿದ್ದಾಪುರ: ತಾಲೂಕಿನ ಕೊಪ್ಪದಲ್ಲಿ ಎಮ್ಮೆಯೊಂದು ಎರಡು ತಲೆಯನ್ನು ಹೊಂದಿರುವ ಗಂಡುಕರುವಿಗೆ ಮಂಗಳವಾರ ರಾತ್ರಿ ಜನ್ಮ ನೀಡಿದ್ದು ಕರು ಬುಧವಾರ ಸಾವನ್ನಪ್ಪಿದೆ.
ಕೊಪ್ಪದ ಗಣಪತಿ ಚೌಡ ನಾಯ್ಕ ಎನ್ನುವವರ ಎಮ್ಮೆ ಇದಾಗಿದೆ. ಕರುವನ್ನು ನೋಡಲು ಸುತ್ತಮುತ್ತಲಿನ ಜನತೆ ಆಗಮಿಸಿ ಇದು ಪ್ರಕೃತಿಯ ವಿಸ್ಮಯಕ್ಕೆ ಒಂದು ಉದಾಹರಣೆ ಆಗಿದೆ ಎಂದು ಆಡಿಕೊಂಡರು.
ಎಮ್ಮೆ ಆರೋಗ್ಯದಿಂದ ಇದೆ ಎಂದು ತಾಲೂಕು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ನಂದಕುಮಾರ ಪೈ ತಿಳಿಸಿದ್ದಾರೆ.

RELATED ARTICLES  ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 66 ಜನರಿಗೆ ಕರೋನಾ ಪಾಸಿಟಿವ್