ಕುಮಟಾ: ಸೂರಜ್ ನಾಯ್ಕ ಸೋನಿ ಹಾಗೂ ಇತರ 7 ಜನ ಕಾರ್ಯಕರ್ತರ ಬಂಧನ ವಿರೋಧಿಸಿ ಬ್ರಹತ್ ಪ್ರತಿಭಟನೆ ಹಾಗೂ ಮೌನ ಮೆರವಣಿಗೆಯನ್ನು ಕುಮಟಾದಲ್ಲಿ ಹಮ್ಮಿಕೊಳ್ಳಲಾಗಿತ್ತು. ನಾಮಧಾರಿ ಸಮಾಜ ಬಾಂಧವರು ಹಾಗೂ ಇತರೆ ಸಮಾಜದ ಸಂಘಟನೆಗಳು, ಹಿಂದೂ ಕಾರ್ಯಕರ್ತರು ಸೋನಿ ಬಂಧನದ ವಿರುದ್ಧ ಕಿಡಿ ಕಾರಿದ್ದಾರೆ. ಹಿಂದುತ್ವ ಹಾಗೂ ಗೋ ರಕ್ಷಣೆಗೆ ಮುಂದಾದ ಹಿಂದು ಕಾರ್ಯಕರ್ತ ಸೂರಜ್ ನಾಯ್ಕ ಬಂಧನ ಅದು ಅವರ ಮೇಲೆ ಪ್ರಹಾರ ಮಾಡುವ ಪ್ರಯತ್ನ, ಅವರ ತೇಜೋವಧೆ ಮಾಡಿ ಅವರನ್ನು ಕುಗ್ಗಿಸುವ ಪ್ರಯತ್ನವೂ ಇದರೆಲ್ಲಿ ಅಡಗಿದೆ ಎಂದು ಇದೇ ಸಂದರ್ಭದಲ್ಲಿ ಆಕ್ರೋಶ ಹೊರ ಬಿದ್ದಿರುವುದು ಕಂಡುಬಂತು. ಜನತೆಯ ತಾಳ್ಮೆಯ ಕಟ್ಟೆ ಒಡೆಯುತ್ತಿದೆಯೇ ಎಂಬ ಪ್ರಶ್ನೆಯೂ ನೋಡುಗರಲ್ಲಿ ಮೂಡಿರುವುದು ಸುಳ್ಳಲ್ಲ.

ಸೂರಜ್ ನಾಯ್ಕ ಸೋನಿ ಬಂಧನದ ಸುದ್ಧಿ ಹಬ್ಬುತಿದ್ದಂತೆ ಜಿಲ್ಲೆಯಲ್ಲಿ ವಾತಾವರಣ ಬಿಸಿಏರ ತೊಡಗಿತ್ತು . ಗೋ ರಕ್ಷಕರ ಮೇಲೆಯೇ ಕೇಸ್ ಹಾಕಿದ್ದು ತೀವ್ರ ಟೀಕೆಗೂ ಗುರಿಯಾಗಿತ್ತು.

ಒಂದು ಕ್ಷುಲ್ಲಕ ಪ್ರಕರಣದಲ್ಲಿ 307 ಮುಕದ್ದಮೆ ಹೂಡಿ, ಹಿಂದೂ ಮುಖಂಡ ಸೂರಜ್ ಸೋನಿ ಬಂಧನ ಮಾಡಿರುವುದರಿಂದ ಜಿಲ್ಲೆಯಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ ಎಂದೂ ಹೇಳಲಾಗಿತ್ತು. ಈ ಬಂಧನದ ಕುರಿತು ಸ್ಥಳೀಯ ಬಿಜೆಪಿ ಪ್ರಮುಖರು ಈಗಾಗಲೇ ಮನವಿ ಸಲ್ಲಿಸಿದ್ದರು. ಆದರೆ ಸೋನಿ ಜಾಮೀನು ಅರ್ಜಿ ವಜಾ ಗೊಂಡ ಹಿನ್ನೆಲೆಯಲ್ಲಿ ಮತ್ತೆ ಪ್ರಕರ್ಣ ಹೆಚ್ಚಿನ ತೀವ್ರತೆ ಪಡೆದಿದೆ. ಎಲ್ಲ ಸಮಾಜದ ಸಂಘಟನೆಗಳು ಹಾಗೂ ಹಿಂದೂ ಕಾರ್ಯಕರ್ತರು ಇಂದು ಬೀದಿಗಿಳಿದು ಉಗ್ರ ಪ್ರತಿಭಟನೆ‌ ನಡೆಸಿದ್ದಾರೆ.

RELATED ARTICLES  ಹೊಸ್ಕೇರಿ ಕಡಿಮೆ ಶಾಲೆಯಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮ

ಇಂದು ನಡೆದ ಮೆರವಣಿಗೆ ಮೂಲಕ ಸೂರಜ್ ನಾಯ್ಕ ಸೋನಿ ಇವರ ಬಿಡುಗಡೆ ಹಾಗೂ ಅವರನ್ನು ಬಂಧಿಸಲು ಕಾರಣವಾದ ಸುಳ್ಳು ಸಾಕ್ಷಿ ಯನ್ನು ವಜಾಗೊಳಿಸಬೇಕು ಎಂದು ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ.

15/03/2018 ರಂದು ನಾಮಧಾರಿ ಸಮಾಜದ ಮುಖಂಡರು ಹಾಗೂ ಎಲ್ಲಾ ವರ್ಗದ ಜನರನ್ನು ಪ್ರೀತಿ ಮತ್ತು ಗೌರವದಿಂದ ಕಾಣುವ ಸೂರಜ ನಾಯ್ಕ ಸೋನಿ ಇವರ ಮೇಲೆ ಹೊನ್ನಾವರ ಪೊಲೀಸ್ ಠಾಣೆಯವರು ಸುಳ್ಳು ಪ್ರಕರಣವನ್ನು ದಾಖಲಿಸುವುದನ್ನು ನಾವು ಖಂಡಿಸುತ್ತೇವೆ. ಪಕ್ಷದ ಕೆಲಸದ ನಿಮಿತ್ತ ದೆಹಲಿಗೆ ಹೋಗುತ್ತಿರಬೇಕಾದರೆ ಫರೀದಾಬಾದನಲ್ಲಿ ದಸ್ತಗಿರಿ ಮಾಡಿರುತ್ತಾರೆ ಅವರ ಮೇಲೆ ಅನೇಕ ಭಾರತೀಯ ದಂಡ ಸಂಹಿತೆಯ ಕಾಲಂಗಳನ್ನು ಜೊತೆಗೆ ಕೊಲೆ ಯತ್ನದ ಕಲಂ 307 ನ್ನು ಕೂಡಾ ಸೇರಿಸಿ ಪ್ರಕರಣ ದಾಖಲಿಸಿರುತ್ತಾರೆ ಆದರೆ ಭಾರತೀಯ ಜನತಾ ಪಕ್ಷದ ಮುಖಂಡರಾಗಿರುವ ಇವರು ಹೊಡೆದಾಟ ಹಾಗೂ ಪ್ರಾಣಕ್ಕೆ ಅಪಾಯ ಮಾಡುವಂತಹ ಯಾವುದೇ ಕೆಲಸವನ್ನು ಯಾವತ್ತೂ ಮಾಡಿರುವುದಿಲ್ಲ. ಆದರೆ ರಾಜಕೀಯ ದುರುದ್ದೇಶದಿಂದ ಭಾರತೀಯ ದಂಡ ಸಂಹಿತೆ ಕಲಂ 307ನ್ನು ಸೇರಿಸಿದ್ದನ್ನು ನೋಡಿದರೆ ಸೂರಜ ನಾಯ್ಕ ಸೋನಿ ಮೇಲಿನ ಪ್ರಕರಣದ ಹಿಂದೆ ಪ್ರಬಲ ರಾಜಕೀಯ ವಿರೋಧಿಗಳ ಕೈವಾಡ ಇರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

RELATED ARTICLES  ಇಂದಿನ ಪ್ರಮುಖ ಧಾರಣೆಗಳು

ಮುಂದೆ ಬರುವ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದಿಂದ ಅಭ್ಯರ್ಥಿಯಾಗಿ ಅವರ ಹೆಸರು ಇರುವುದನ್ನು ಕಂಡು ರಾಜಕೀಯ ದುರುದ್ದೇಶದಿಂದ ಸೂರಜ ನಾಯ್ಕ ಸೋನಿ ಅವರ ಮೇಲೆ ಈ ರೀತಿ ಪ್ರಕರಣ ಮಾಡಿದ್ದು ಕಂಡುಬರುತ್ತದೆ ಎಂದು ಆಕ್ರೋಶ ವ್ಯಕ್ತವಾಗಿದೆ. ಈ ರೀತಿ ಒಬ್ಬ ಯುವ ಮುಖಂಡನ ಮೇಲೆ ವ್ಯವಸ್ಥಿತ ಪಿತೂರಿ ನಡೆಸಿ ಯಾವುದೇ ಅಧಿಕೃತ ದಾಖಲೆಗಳಿಲ್ಲದಿದ್ದರೂ ಕೂಡಾ ಅಮಾನವೀಯವಾಗಿ ವರ್ತಿಸಿ ಅವರನ್ನು ನ್ಯಾಯಾಂಗ ಬಂಧನದಲ್ಲಿಟ್ಟಿರುತ್ತಾರೆ ಘನತೆವೆತ್ತ ರಾಜ್ಯಪಾಲರು ಈ ವಿಚಾರದಲ್ಲಿ ಕೂಡಲೇ ಕ್ರಮಕೈಗೊಂಡು ನಿರಪರಾಧಿ ಸೂರಜ್ ನಾಲ್ಕು ಸೋನಿಯವರನ್ನು ಕೂಡಲೇ ಬಂಧಮುಕ್ತಗೊಳಿಸಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.