ಹೊನ್ನಾವರ: ತಾಲೂಕಿನ ಸಾಗರ ರೆಸಿಡೆನ್ಸಿಯಲ್ಲಿ ಶಾಸಕಿ ಶಾರದಾ ಶೆಟ್ಟಿಯವರು ಪತ್ರಿಕಾಗೋಷ್ಠಿ ನಡೆಸಿ ತಮ್ಮ ಅವಧಿಯಲ್ಲಿ ಮಾಡಿದ ಸಾಧನೆಗಳ ಬಗ್ಗೆ ತಾವು ತಂದ ಯೋಜನೆಗಳ ಬಗ್ಗೆ ವಿವರಿಸಿದರು.

ಹೊನ್ನಾವರ ತಾಲೂಕಿನ ಕೆಲವೆಡೆಗಳಲ್ಲಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ತುಂಬಾ ಇದ್ದು ಅವರ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ ಬಹುಗ್ರಾಮ ನೀರಾವರಿ ಯೋಜನೆಯನ್ನು ಮಂಜೂರಿ ಮಾಡಲಾಗಿದೆ. ಇನ್ನು ಎರಡು ತಿಂಗಳಲ್ಲಿ ಇದರ ಕಾಮಗಾರಿ ಪ್ರಾರಂಭವಾಗುತ್ತದೆ ಎಂದರು. ಕಳೆದ ಐದು ವರ್ಷದಲ್ಲಿ ಜನರು ತಮ್ಮಲ್ಲಿ ಇಟ್ಟ ಎಲ್ಲ ಬೇಡಿಕೆಗಳನ್ನು ಇಡೆರಿಸಿದ್ದೇನೆ ನನ್ನ ಅವಧಿಯಲ್ಲಿ ಸುಮಾರು ಸಾವಿರದ ಎರಡು ನೂರು ಕೋಟಿ ಅನುದಾನ ತಂದಿದ್ದು , ಅಷ್ಟೇ ಅಲ್ಲದೇ ಶರಾವತಿ ಇಂದ ಹೊನ್ನಾವರ ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಬರುವ ಸ್ಥಳಗಳಿಗೆ ಮತ್ತು 9 ಗ್ರಾಮ ಪಂಚಾಯತ ಕ್ಕೆ 122 ಕೋಟಿ ಅನುದಾನ ಸಂದಾಯಮಾಡಿದ್ದೇನೆ.

RELATED ARTICLES  ಮನೆಗೆ ನುಗ್ಗಿ ಒಳ ಉಡುಪು ಕದಿಯುತ್ತಿದ್ದ ವ್ಯಕ್ತಿ : ಅಂಕೋಲಾದಲ್ಲಿ ವಿಚಿತ್ರ ಪ್ರಕರಣ

ನನಗೆ ನನ್ನ ಅವಧಿಯಲ್ಲಿ ಮಾಡಿದ ಕೆಲಸ ನನಗೆ ತೃಪ್ತಿ ತಂದಿದೆ ಎಂದರು. ಈ ಮಧ್ಯೆ ವರದಿಗಾರರು ಮುಂದಿನ ಚುನಾವಣೆಯಲ್ಲಿ ಕೆಲವು ಹಾಲಿ ಶಾಸಕರಿಗೆ ಟಿಕೆಟ್ ನೀಡದಿರುವ ಸಾಧ್ಯತೆ ಹೆಚ್ಚಿದ್ದು ನಿಮ್ಮ ಹೆಸರು ಕೂಡ ಇದೆ ಎಂದು ಕೇಳಿದಾಗ ನನಗೆ ಟಿಕೆಟ್ ಸಿಕ್ಕೆ ಸಿಗುತ್ತದೆ ನಾನು ಗೆದ್ದೆ ಗೆಲ್ಲುತ್ತೇನೆ ಎಂದು ಉತ್ತರಿಸಿದರು.

RELATED ARTICLES  ಕಾರಿನಲ್ಲಿ ಬಂದ ಮೂವರಿಂದ ಯುವತಿಯ ಕಿಡ್ನಾಪ್..? ದಾಖಲಾಗಿದೆ ಪ್ರಕರಣ