ಮೂಡಲಗಿ: ಪ್ರಸಕ್ತ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಮಾ. 23 ರಿಂದ ಏ 6 ರವರೆಗೆ ಮೂಡಲಗಿ ತಾಲೂಕಿನ 17 ಪರೀಕ್ಷಾ ಕೇಂದ್ರಗಳಲ್ಲಿ ಗಂಡು 3282 ಹೆಣ್ಣು 2770 ಒಟ್ಟು 6032 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವರೆಂದು ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎ ಸಿ ಗಂಗಾಧರ ಪತ್ರಿಕಾಗೊಷ್ಠಿಯಲ್ಲಿ ತಿಳಿಸಿದರು.

ಪಟ್ಟಣದ ಬಿ.ಆರ್.ಸಿ ಕೇಂದ್ರದಲ್ಲಿ ಆಯೋಜಿಸಿದ್ದ ಎಸ್.ಎಸ್.ಎಲ್.ಸಿ ಪರೀಕ್ಷೆಯ ಕುರಿತ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಮೂಡಲಗಿ ವಲಯವು ಹ್ಯಾಟ್ರಿಕ್ ಸಾಧನೆ ಗೈದು ಪ್ರಸಕ್ತ ಸಾಲಿನಲ್ಲಿಯೂ ವಿಶೇಷ ಕಾಳಜಿ ಮತ್ತು ಅವಿರತ ಪ್ರಯತ್ನವನ್ನು ಶಿಕ್ಷಕರ ಹಾಗೂ ವಿಶೇಷ ಸಂಪನ್ಮೂಲ ವ್ಯಕ್ತಿಗಳಿಂದ ಮಾಡಿದೆ. ದಕ್ಷಿಣ ಭಾರತದಲ್ಲಿಯೇ ಪ್ರಖ್ಯಾತ ಇಂಗ್ಲೀಷ ಉಪನ್ಯಾಸಕಿ ಶಾಂತಿ ದೇಸಾಯಿಯವರ ಇಂಗ್ಲೀಷ ಮಾಲಿಕೆಗಳು, ವಿಜ್ಞಾನದಲ್ಲಿಯ ಚಿತ್ರಗಳನ್ನು ಸುಲಭವಾಗಿ ಬಿಡಿಸಲು ಸುರೇಶ ಕುಲಕಣ ್ಯವರಿಂದ ಮಾರ್ಗದರ್ಶನ, ಕ್ಲಾಸಿಕ್ ಶಿಕ್ಷಣ ಸಂಸ್ಥೆಯವರಿಂದ ಗಣ ೀತ, ವಿಜ್ಞಾನ, ಇಂಗ್ಲೀಷ ವಿಷಯಗಳ ಬೋಧನೆ ಮಾಡಲಾಗಿದೆ. ಮಿಷನ್ 625 ಅಭಿಯಾನದಲ್ಲಿ 340 ವಿದ್ಯಾರ್ಥಿಗಳಿಗೆ ಕಾರ್ಯಾಗಾರ, ಟಾರ್ಗೆಟ್ 40 ಅಡಿ 600 ಮಕ್ಕಳಿಗೆ ಪ್ರೋತ್ಸಾಹಕ ಬೋಧನೆ ಅಷ್ಟೇ ಅಲ್ಲದೆ ಫಿಕನಿಕ ಫಜಲ್, ಗುಂಪು ಅಧ್ಯಯನ, ವಸತಿ ಸಹಿತ ಪಾಠ ಬೋಧನೆ, ಪರೀಕ್ಷಾ ದಿನಗಳನ್ನು ಹೊರತು ಪಡಿಸಿ ಇನ್ನೂಳಿದ ದಿನಗಳಲ್ಲಿ ತರಗತಿಗಳನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ ನಿವಾರಿಸುವ ನಿಟ್ಟಿನಲ್ಲಿ ಪ್ರಯತ್ನಿಸಿರುವದಾಗಿ ತಿಳಿಸಿದರು.

RELATED ARTICLES  ಬಿಎಸ್ಎನ್ಎಲ್ ಮ್ಯಾನೇಜ್ ಮೆಂಟ್ ಟ್ರೈನಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ.

ಮೂಡಲಗಿ ತಾಲೂಕಿನಲ್ಲಿ 17 ಪರೀಕ್ಷಾ ಕೇಂದ್ರಗಳಿದ್ದು, ಎಲ್ಲ ಕೇಮದ್ರಗಳಿಗೆ ಸಿ.ಸಿ.ಟಿ.ವಿ, ಕುಡಿಯುವ ನೀರು, ಶೌಚಾಲಯ, ಮೂಲಭೂತ ಸೌಲಭ್ಯಗಳು, ಜಾಗೃತ ತಂಡಗಳು, ಅಗತ್ಯ ಪೊಲೀಸ್ ಬಂದೂ ಬಸ್ತ, ವೈಧ್ಯಕೀಯ ಹಾಗೂ ವಿದ್ಯುತ್ ನಿಯಮಿತವಾಗಿರುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೋಳ್ಳಲಾಗಿದೆ. ನಿಕಟಪೂರ್ವ ಶಿಕ್ಷಣಾಧಿಕಾರಿ ಎ.ಸಿ ಮನ್ನಿಕೇರಿ ಹಾಗೂ ಮೇಲಾಧಿಕಾರಿಗಳ ನಿರಂತರ ಮಾರ್ಗದರ್ಶನದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೋಳ್ಳಲಾಗಿದೆ ಎಂದು ಬಿ.ಇ.ಓ ಎ.ಸಿ ಗಂಗಾಧರ ತಿಳಿಸಿದರು.

RELATED ARTICLES  ಹಿಂದುಗಳ ಹತ್ಯೆ ಮಾಡಿಸಿದ್ದು ಬಿ.ಎಸ್.ವೈ ಎಂದ ಶ್ರೀರಾಮಲು!

ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ನೋಡಲ್ ಅಧಿಕಾರಿ ಎಸ್.ಎ ನಾಡಗೌಡರ, ಬಿ.ಎಚ್.ಮೋರೆ, ಕೆ.ಎಲ್.ಮೀಶಿ, ಎ.ಬಿ ಚವಡನ್ನವರ, ಬಿ.ಎಮ್ ನಂದಿ, ಪಿ.ಜಿ ಪಾಟೀಲ್ ಉಪಸ್ಥಿತರಿದ್ದರು.