ಬೆಂಗಳೂರು: ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ (ಎಸ್‌ಬಿಐ) ವಿಲೀನಗೊಂಡಿರುವ ಐದು ಸಹವರ್ತಿ ಬ್ಯಾಂಕ್‌ಗಳ ಗ್ರಾಹಕರ ಬಳಿ ಇರುವ ಹಳೆಯ ಚೆಕ್‌ಬುಕ್‌ಗಳು ಮಾರ್ಚ್ ತಿಂಗಳ ಅಂತ್ಯದವರೆಗೆ ಮಾತ್ರ ಬಳಕೆಗೆ ಬರಲಿವೆ.

ಹೊಸ ಹಣಕಾಸು ವರ್ಷದಿಂದ (ಏಪ್ರಿಲ್‌ 1) ಹೊಸ ಚೆಕ್‌ ಬುಕ್‌ಗಳನ್ನು ಮಾತ್ರ ಮಾನ್ಯಮಾಡಲಾಗುವುದು. ಈ ಕಾರಣಕ್ಕೆ ಸಹವರ್ತಿ ಬ್ಯಾಂಕ್‌ಗಳ ಗ್ರಾಹಕರು ಹೊಸ ಚೆಕ್‌ಬುಕ್‌ ಪಡೆದುಕೊಳ್ಳಬೇಕು. ಹೊಸ ಚೆಕ್‌ಬುಕ್‌ಗಳನ್ನು ಇಂಟರ್‌ನೆಟ್‌ ಬ್ಯಾಂಕಿಂಗ್‌, ಮೊಬೈಲ್‌ ಬ್ಯಾಂಕಿಂಗ್‌, ಎಟಿಎಂಗಳಿಂದ ಅಥವಾ ಬ್ಯಾಂಕ್‌ ಶಾಖೆಗಳಿಂದ ಪಡೆಯಬಹುದು ಎಂದು ಬ್ಯಾಂಕ್‌ ಸೂಚಿಸಿದೆ.

RELATED ARTICLES  ಚುನಾವಣೆಗೆ ನಡೆದಿದ್ದೆ ಸಿದ್ಧತೆ: ಉತ್ತರಕನ್ನಡದಲ್ಲಿ ಅಧಿಕಾರಿಗಳು ಜಾಗ್ರತಿವಹಿಸಲು ಸೂಚನೆ

ಐದು ಸಹವರ್ತಿ ಬ್ಯಾಂಕ್‌ಗಳು ಮತ್ತು ಭಾರತೀಯ ಮಹಿಳಾ ಬ್ಯಾಂಕ್‌ (ಬಿಎಂಬಿ) ಕಳೆದ ವರ್ಷ ಎಸ್‌ಬಿಐನಲ್ಲಿ ವಿಲೀನಗೊಂಡಿದ್ದವು. ಈ ಬ್ಯಾಂಕ್‌ಗಳ ಗ್ರಾಹಕರು ಹೊಸ ಚೆಕ್‌ ಬುಕ್‌ ಪಡೆದುಕೊಳ್ಳಲು ಎಸ್‌ಬಿಐ ಈಗಾಗಲೇ ಎರಡು ಬಾರಿ ಗಡುವು ವಿಸ್ತರಿಸಿತ್ತು. ಈ ವಿಲೀನಗೊಂಡ ಬ್ಯಾಂಕ್‌ಗಳ ಚೆಕ್‌ ಬುಕ್‌ಗಳು ಮಾರ್ಚ್‌ 31ರ ನಂತರ ಬಳಕೆಗೆ ಮಾನ್ಯವಾಗಿರುವುದಿಲ್ಲ. ಈ ಗಡುವಿನ ಒಳಗೆ ಹೊಸ ಚೆಕ್‌ಬುಕ್‌ಗೆ ಮನವಿ ಸಲ್ಲಿಸಬೇಕು ಎಂದು ತಿಳಿಸಲಾಗಿದೆ. ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು, ಸ್ಟೇಟ್‌ ಬ್ಯಾಂಕ್‌ ಆಫ್‌ ಹೈದರಾಬಾದ್‌, ಸ್ಟೇಟ್‌ ಬ್ಯಾಂಕ್‌ ಆಫ್‌ ಪಟಿಯಾಲಾ, ಸ್ಟೇಟ್‌ ಬ್ಯಾಂಕ್‌ ಆಫ್‌ ಟ್ರವಾಂಕೂರ್‌ ಹಾಗೂ ಸ್ಟೇಟ್‌ ಬ್ಯಾಂಕ್‌ ಆಫ್‌ ಬಿಕಾನೇರ್‌ ಆ್ಯಂಡ್‌ ಜೈಪುರ, ಎಸ್‌ಬಿಐನಲ್ಲಿ ವಿಲೀನಗೊಂಡಿದ್ದವು.

RELATED ARTICLES  ಬಿಜೆಪಿ ಯುವ ಮುಖಂಡ ಹತ್ಯೆ: ರಾಘವೇಶ್ವರ ಶ್ರೀ ಖಂಡನೆ

ಐದು ಸಹವರ್ತಿ ಬ್ಯಾಂಕ್‌ಗಳ ಹಳೆಯ ಚೆಕ್‌ಬುಕ್‌ಗಳಿಗೆ ಮಾನ್ಯತೆ ಇಲ್ಲ

ಏ.1ರಿಂದ ಹೊಸ ಚೆಕ್‌ಬುಕ್ ಕಡ್ಡಾಯ