ಜೋಧಪುರದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಯು ಸಹಾಯಕ ನರ್ಸಿಂಗ್ ವ್ಯವಸ್ಥಾಪಕ, ಹಿರಿಯ ನರ್ಸಿಂಗ್ ಅಧಿಕಾರಿ, ನರ್ಸಿಂಗ್ ಅಧಿಕಾರಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ – 755
ಹುದ್ದೆಗಳ ವಿವರ
ಸಹಾಯಕ ನರ್ಸಿಂಗ್ ವ್ಯವಸ್ಥಾಪಕ – 28
ಹಿರಿಯ ನರ್ಸಿಂಗ್ ಅಧಿಕಾರಿ – 127
ನರ್ಸಿಂಗ್ ಅಧಿಕಾರಿ – 600
ವಿದ್ಯಾರ್ಹತೆ : ಕ್ರ. ಸಂ 1,2ರ ಹುದ್ದೆಗೆ 4 ವರ್ಷದ ಬಿಎಸ್ಸಿ ನರ್ಸಿಂಗ್ ಪದವಿ ಅಥವಾ ಬಿಎಸ್ಸಿ (ಪೋಸ್ಟ್ ಸರ್ಟಿಫಿಕೇಟ್), ಕ್ರ. ಸಂ 3ರ ಹುದ್ದೆಗೆ ಬಿಎಸ್ಸಿ (ಹಾನರ್ಸ್) ನರ್ಸಿಂಗ್ ಪದವಿ ಪಡೆದಿರಬೇಕು.
ವಯೋಮಿತಿ : ಕ್ರ. ಸಂ 1ರ ಹುದ್ದೆಗೆ ಕನಿಷ್ಠ 25 ವರ್ಷ, ಗರಿಷ್ಠ 40 ವರ್ಷ, ಕ್ರ. ಸಂ 2ರ ಹುದ್ದೆಗೆ ಕನಿಷ್ಠ 21 ವರ್ಷ, ಗರಿಷ್ಠ 35 ವರ್ಷ, ಕ್ರ. ಸಂ 3ರ ಹುದ್ದೆಗೆ ಕನಿಷ್ಠ 18 ವರ್ಷ, ಗರಿಷ್ಠ 30 ವರ್ಷ ವಯೋಮಿತಿಯನ್ನು ನಿಗದಿಗೊಳಿಸಿದೆ. ಸರ್ಕಾರಿ ನಿಯಮಗಳ ಪ್ರಕಾರ ವಯೋಮಿತಿಯಲ್ಲಿ ಸಡಿಲತೆ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 08–04-2018

RELATED ARTICLES  ಕ್ಯಾಂಪಸ್ ಸಂದರ್ಶನ ನಾಳೆ.

ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು https://www.aiimsjodhpur.edu.in ಗೆ ಭೇಟಿ ನೀಡಿ.