ಬಾಗಲಕೋಟೆ: ಗಂಡ ಸರಿಯಾಗಿ ಮನೆ ನಡೆಸುವುದಿಲ್ಲ ಎಂದು ಜಗಳವಾಡಿ ದೂರು ನೀಡಲು ಬಂದಿದ್ದ ಪತ್ನಿಗೆ ಆಕೆಯ ಗಂಡ ಥಳಿಸಿದ ಘಟನೆ ಬಾದಾಮಿ ಪೊಲೀಸ್​ ಠಾಣೆಯಲ್ಲಿ ನಡೆದಿದೆ.

ಬಾದಾಮಿ ತಾಲೂಕಿನ ಶಿರಬಡಿಗಿ ಗ್ರಾಮದ ಗಂಡ-ಹೆಂಡತಿ ಇಬ್ಬರೂ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಜಗಳವಾಡಿಕೊಂಡು ಠಾಣೆಗೆ ಬಂದಿದ್ದರು. ಠಾಣೆಯಲ್ಲಿ ಗಂಡ ತನ್ನ ಹೆಂಡತಿಗೆ ಥಳಿಸಿದ್ದಾನೆ. ಈ ಸಂದರ್ಭದಲ್ಲಿ ಅಲ್ಲೇ ಇದ್ದ ಗಂಡ ಹೆಂಡತಿಯರಿಬ್ಬರ ಕಡೆಯ ಪೋಷಕರ ನಡುವೆ ಮಾತಿಗೆ ಮಾತು ಬೆಳೆದು ಕೈ-ಕೈ ಮಿಲಾಯಿಸಿದ್ದಾರೆ.

RELATED ARTICLES  ಆರ್.ಎಸ್.ಎಸ್ ನ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಪ್ರಣಬ್ ಮಾತಿನ ಮೋಡಿ!

ಬಾದಾಮಿ ಪೊಲೀಸ್ ಠಾಣೆಯ ಎದುರೇ ಎರಡು ಗುಂಪಿನ ಕಡೆಯವರು ಮೈಮೇಲಿನ ಶರ್ಟ್​ ಹರಿಯುವ ಹಾಗೆ ಪರಸ್ಪರ ಬಡಿದಾಡಿಕೊಂಡರು. ಹೊಡೆದಾಟಕ್ಕಿಳಿದಿದ್ದ ಎರಡು ಕಡೆಯ ಗುಂಪಿನವರನ್ನು ಚದುರಿಸಲು ಪೊಲೀಸರು ಹರಸಾಹಸ ಪಟ್ಟರು. ನಂತರ ಪೊಲೀಸರು ಎರಡು ಕಡೆಯ ಗುಂಪಿನವರನ್ನ ಎಳೆದು ಠಾಣೆಯ ಒಳಗೆ ಕರೆದೊಯ್ದು ಸಮಾಧಾನ ಪಡಿಸಿದರು.

RELATED ARTICLES  ಕುಮಟಾದ ಜನತೆಗೆ ಗುಡ್ ನ್ಯೂಸ್..!