ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್​ನ ಏಳು ಬಂಡಾಯ ಶಾಸಕರ ಮತದಾನ ಹಕ್ಕು ಅಬಾಧಿತವಾಗಿದ್ದು, ಕಾಂಗ್ರೆಸ್​ನ ಮೂರನೇ ಅಭ್ಯರ್ಥಿಯ ಗೆಲುವಿಗೆ ಎದುರಾಗಿದ್ದ ವಿಘ್ನ ನಿವಾರಣೆ ಆಗಿದೆ. ಆ ಮೂಲಕ ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆ ಎದುರಿಸಲು ಕಾಂಗ್ರೆಸ್​ಗೆ ಹೊಸ ಆತ್ಮವಿಶ್ವಾಸ ದಕ್ಕಿದೆ. ಒಟ್ಟಾರೆ 7 ರಾಜ್ಯಗಳ 26 ಸ್ಥಾನಗಳಿಗೆ ಶುಕ್ರವಾರ ಮತದಾನ ನಡೆಯಲಿದೆ.

ಕಳೆದ ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿದ್ದ ಏಳು ಬಂಡಾಯ ಶಾಸಕರಿಗೆ ಮತದಾನದ ಹಕ್ಕು ನಿರಾಕರಿಸುವಂತೆ ಜೆಡಿಎಸ್ ನ್ಯಾಯಾಲಯದ ಮೆಟ್ಟಿಲೇರಿತ್ತು. ಆದರೆ ಸ್ಪೀಕರ್ ಕಾರ್ಯದಲ್ಲಿ ಮಧ್ಯಪ್ರವೇಶ ಮಾಡಲು ಹೈಕೋರ್ಟ್ ಸಿದ್ಧವಿಲ್ಲದ ಕಾರಣ ಮೂರನೇ ಅಭ್ಯರ್ಥಿ ಕಣಕ್ಕಿಳಿಸಿದ್ದ ಕಾಂಗ್ರೆಸ್​ಗೆ ಗುರುವಾರದ ಬೆಳವಣಿಗೆ ಹೊರೆ ಇಳಿಸಿದೆ.

RELATED ARTICLES  ಶ್ರೀಭಾರತೀ ವಿದ್ಯಾಲಯದಲ್ಲಿ ಮಾತಾ ಪಿತೃಪೂಜೆ ~ಜನ್ಮದಾತರಿಗೆ ಪೂಜೆ ಸಲ್ಲಿಸಿದ ಮಕ್ಕಳು

ಕಾಂಗ್ರೆಸ್ ಮೂರು ಹಾಗೂ ಬಿಜೆಪಿ ಒಂದು ಸ್ಥಾನ ಗೆಲ್ಲುವುದು ಖಚಿತವಾಗಿದ್ದರೆ, ಜೆಡಿಎಸ್​ನಿಂದ ಎರಡನೇ ಬಾರಿ ಕಣಕ್ಕಿಳಿದಿರುವ ಫಾರೂಕ್ ಮತ್ತೆ ಮುಖಭಂಗಕ್ಕೆ ಒಳಗಾಗುವ ಎಲ್ಲಾ ಸಾಧ್ಯತೆಗಳಿವೆ. ವಿಧಾನಸೌಧದಲ್ಲಿ ಶುಕ್ರವಾರ ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದ್ದು, ಸಂಜೆ 6 ಗಂಟೆ ಒಳಗೆ ಫಲಿತಾಂಶ ಹೊರಬೀಳುವ ನಿರೀಕ್ಷೆ ಇದೆ.

ಮತ ಲೆಕ್ಕಾಚಾರ: ವಿಧಾನಸಭೆಯ ಒಟ್ಟು ಸದಸ್ಯ ಬಲ 225. ಈ ಪೈಕಿ ನಾಮನಿರ್ದೇಶಿತ ಸದಸ್ಯರಿಗೆ ಮತ ಚಲಾವಣೆಯ ಹಕ್ಕಿಲ್ಲ. ಏಳು ಸ್ಥಾನಗಳು ಖಾಲಿ ಇವೆ. ಹೀಗಾಗಿ ಒಟ್ಟು 217 ಸದಸ್ಯರು ಮತ ಚಲಾವಣೆ ಮಾಡಲಿದ್ದು, ಒಬ್ಬ ಅಭ್ಯರ್ಥಿ ಗೆಲ್ಲಲು 44 ಮತಗಳು ಬೇಕು. ಯಾವುದಾದರೂ ಅಭ್ಯರ್ಥಿಗೆ 44 ಮತಗಳು ಬಾರದಿದ್ದಲ್ಲಿ ಆಗ ಎರಡನೇ ಪ್ರಾಶಸ್ಱದ ಮತಗಳ ಲೆಕ್ಕಾಚಾರ ನಡೆಯಲಿದೆ. ಆದರೆ ಈ ಚುನಾವಣೆಯಲ್ಲಿ ಎರಡನೇ ಪ್ರಾಶಸ್ಱದ ಮತಗಳ ಅಗತ್ಯ ಬೀಳದೆ ಮೊದಲ ಪ್ರಾಶಸ್ಱದಲ್ಲೇ ನಾಲ್ಕು ಅಭ್ಯರ್ಥಿಗಳು ಗೆಲ್ಲಲು ಕಾಂಗ್ರೆಸ್ ಮತ್ತು ಬಿಜೆಪಿ ರಣತಂತ್ರ ರೂಪಿಸಿವೆ.

RELATED ARTICLES  ದಿನಾಂಕ 20/05/2019 ರ ದಿನ ಭವಿಷ್ಯ ಇಲ್ಲಿದೆ ನೋಡಿ.