ಯಲ್ಲಾಪುರ ; ಯಕ್ಷಗಾನವು ಈ ಮಣ್ಣಿನ ಸತ್ವಯುತವಾದ ಕಲೆ, ಕಲೆಯ ಶ್ರೀಮಂತಿಕೆ ಸಮಾಜದ ಸಮೃದ್ದಿಯನ್ನು ಪ್ರತಿನಿಧಿಸುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ನರಸಿಂಹ ಕೋಣೆಮನೆ ಅಭಿಪ್ರಾಯಪಟ್ಟರು.

ಅವರು ತೇಲಂಗಾರದ ಮೈತ್ರಿ ಕಲಾ ಬಳಗ, ವೀರಭದ್ರ ದೇವಾಲಯ ಆಡಳಿತ ಮಂಡಳಿಯ ಸೇವಾ ಸಮಿತಿ ,ಕನ್ನಡ ಸಂಸ್ಕøತಿ ಇಲಾಖೆ ಸಂಯುಕ್ತವಾಗಿ ಹೊನಗದ್ದೆಯ ವೀರಭದ್ರ ದೇವಾಲಯದಲ್ಲಿ ಆಯೋಜಿಸಿದ್ದ ದಿವಂಗತ ವೆಂಕ್ರಟಮಣ ಭಟ್ಟ ಬಾಸಲ್ ರವರ ವೇದಿಕೆಯಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡುತಿದ್ದರು.

ಕಲಾರಾಧನೆಯು ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಂತೆಲ್ಲಾ ಅದರ ಮೌಲ್ಯ ಹೆಚ್ಚುತ್ತಾ ಹೋಗುತ್ತದೆ. ಭೌತಿಕವಾಗಿ ಅಭಿವೃದ್ದಿ ಎನ್ನುವುದು ಸೀಮಿತ ಮಿತಿಗೆ ಒಳಪಡದೇ ಸರವಾಂಗೀಣವಾಗಿ ಎಲ್ಲಾ ಕ್ಷೇತ್ರಗಳು ಬೆಳವಣಿಗೆ ಹೊಂದುವುದು ಚಲನಶೀಲತೆಯ ಸಂಕೇತ. ಅಂತಹ ಅವಕಾಶಗಳನ್ನು ಸಂಘಟನೆಗಳು ಒದಗಿಸಿಕೊಟ್ಟಾಗ ಕಲೆ ಜೀವಂತವಾಗಿರಲು ಸಾಧ್ಯ ಎಂದು ಅವರು ಹೇಳಿದರು.

RELATED ARTICLES  ಹಾಲಕ್ಕಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂಬ ಬೇಡಿಕೆ ನ್ಯಾಯಸಮ್ಮತ : ಪೂಜಾರಿ

ರಂಗ ಸಹ್ಯಾದ್ರಿ ಅಧ್ಯಕ್ಷ ಡಿ ಎನ್ ಗಾಂವ್ಕಾರ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಗ್ರಾಮ ಪಂಚಾಯತ ಅಧ್ಯಕ್ಷ ಗಜಾನನ ಭಟ್ಟ,ಸದಸ್ಯ ಸುಬ್ರಹ್ಮಣ್ಯ ಗಾಂವ್ಕಾರ, ಆರ್ ಎನ್ ಕೋಮಾರ, ಜಿ ವಿ ಭಟ್ಟ ಬಾಸಲ್ ಉಪಸ್ಥಿತರಿದ್ದರು.

RELATED ARTICLES  'ಶಕ್ತಿ ಸಂಚಯ' ಮಹಿಳಾ ಸಮಾವೇಶದ ಸಿದ್ಧತೆಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿರುವ ಮಹಿಳೆಯರು.

ಇದೇ ಸಂದರ್ಭದಲ್ಲಿ ಪರಿಸರ ಹೋರಾಟಗಾರ, ಕೃಷಿ ತಜ್ನ ಬಿ ಜಿ ಹೆಗಡೆ ಗೇರಾಳರವರನ್ನು ಸನ್ಮಾನಿಸಲಾಯಿತು. ನೂತನ ಎಚ್ ಹೆಗಡೆ, ಗಣೇಶ ಭಟ್ಟ, ಸುಬ್ರಾಯ ಭಟ್ಟ ಕಲ್ಲಾರೆಯವರನ್ನು ವಿವಿಧ ಕ್ಷೇತ್ರದ ಸಾಧನೆಗಾಗಿ ಅಭಿನಂದಿಸಲಾಯಿತು.

ಡಿ ಜಿ ಭಟ್ಟ ದುಂಡಿ ಸ್ವಾಗತಿಸಿದರು. ಬಾಲಸುಬ್ರಹ್ಮಣ್ಯ ಭಟ್ಟ ನಿರೂಪಿಸಿದರು. ಮಹೇಶ ಸಾಬೇಕುಂಬ್ರಿ ವಂದಿಸಿದರು. ನಂತರ ಉಡುಪಿಯ ಗಣಪತಿ ಭಟ್ಟ ಹಾಗೂ ನಾರಾಯಣ ಭಟ್ಟ ಕಲ್ಲಾರೆ ತಂಡದವರಿಂದ ಕಂಸ ದಿಗ್ವಿಜಯ ಯಕ್ಷಗಾನ ಪ್ರದರ್ಶನಗೊಂಡಿತು.