ಸಿಂಧನೂರು ; ಜೆಡಿಎಸ್ ಮಾತ್ರವೇ ಮಹಿಳೆಯರ ಆಶಾಕಿರಣ ಎಂದು ಚೈತ್ರ ಗೌಡ ಹೇಳಿದರು.ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನಲ್ಲಿ ನಡೆಯುತ್ತಿರುವ ಐತಿಹಾಸಿಕ ಜೆಡಿಎಸ್ ಬೃಹತ್ ಮಹಿಳಾ ಸಮಾವೇಶದಲ್ಲಿ ಅವರು ಮಾತನಾಡಿದರು.

ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಅವರ ಧರ್ಮ ಪತ್ನಿ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ದೀಪ ಬೆಳಗಿ ಸಮಾವೇಶಕ್ಕೆ ಚಾಲನೆ‌ ನೀಡಿದರು.

RELATED ARTICLES  ದೇವಸ್ಥಾನದಲ್ಲಿ ದಲಿತ ಅರ್ಚಕರನ್ನು ನಾವೂ ನೇಮಿಸುತ್ತೇವೆ : ಸಿಎಂ ಸಿದ್ದರಾಮಯ್ಯ

ನಂತರ ಮಾತನಾಡಿದ ಅವರು, ಬೇರೆ ಎಲ್ಲ ರಾಷ್ಟ್ರೀಯ ಪಕ್ಷಗಳಿಗಿಂತ ಜಾತ್ಯತೀತ ಜನತಾದಳದಲ್ಲಿ ಮಹಿಳೆಯರಿಗೆ ಮುಕ್ತ ಅವಕಾಶಗಳಿವೆ. ಮಹಿಳೆಯರ ಹಕ್ಕು ರಕ್ಷಿಸುವುದುರೊಂದಿಗೆ ಅವರಿಗೆ ಹೆಚ್ಚು ಅವಕಾಶಗಳನ್ನು ಕೊಟ್ಟಿರುವುದು ಜೆಡಿಎಸ್ ಪಕ್ಷ ಮಾತ್ರ ಎಂದು ಹೇಳಿದರು.

ಜೆಡಿಎಸ್ ಯುವ ಮಹಿಳಾ ರೈತ ದಳದ ರಾಜ್ಯಾಧ್ಯಕ್ಷೆ ಚೈತ್ರ ಗೌಡ ಅಭಿಪ್ರಾಯ ವ್ಯಕ್ತಪಡಿಸಿ, ಪುರುಷರಿಗೆ ಸಮಾನವಾಗಿ ರಾಜಕೀಯದಲ್ಲಿ ಸ್ಥಾನಮಾನ ಪಡೆಯಬೇಕಾದರೆ ಜೆಡಿಎಸ್ ಪಕ್ಷ ಒಂದೇ ಮಹಿಳೆಯರಿಗೆ ಮುಕ್ತ ಅವಕಾಶವನ್ನು ನೀಡುತ್ತದೆ. ತಮ್ಮ ಹಕ್ಕು ಸ್ವತಂತ್ರ ಹಾಗೂ ರಾಜಕೀಯ ಶಕ್ತಿಯನ್ನು ಪ್ರದರ್ಶಿಸಲು ಕುಮಾರಸ್ವಾಮಿ ಅವರನ್ನು ಬೆಂಬಲಿಸಬೇಕು ಎಂದು ಅವರು ಕರೆ ನೀಡಿದರು.

RELATED ARTICLES  ವಿಮಾನದಲ್ಲಿ ಸ್ಫೋಟಕ ಬಾಂಬ್ ಇದೆ ಎಂದು ಪೊಲೀಸರಿಗೆ ಕರೆ

ಮಹಿಳೆಯರ ಏಳ್ಗೆ ಹಾಗೂ ನಮ್ಮ ಸಮಾಜದಲ್ಲಿನ ಮಹಿಳೆಯರ ಪಾತ್ರ , ಪಾಲ್ಗೂಳ್ಳುವಿಕೆ, ಅವರ ಮಹತ್ವ , ಸ್ಥಾನಮಾನ , ಮೀಸಲಾತಿ ಬಗ್ಗೆ ಕುರಿತು ಚೈತ್ರ ಗೌಡ ಮಾತನಾಡಿದರು.