ಮೂಡಲಗಿ: ಮೂಡಲಗಿ ತಾಲೂಕಿನಲ್ಲಿ ಜರುಗಿದ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಒಟ್ಟು 6026 ಮಕ್ಕಳಲ್ಲಿ ಬಾಲಕರು 3252 ಬಾಲಕಿಯರು 2622 ಒಟ್ಟು 5874 ಮಕ್ಕಳು ಹಾಜರಾಗಿದ್ದಾರೆ. 108 ಬಾಲಕರು 44 ಬಾಲಕಿಯರು ಒಟ್ಟು 152 ಮಕ್ಕಳು ಗೈರ ಹಾಜರಾಗಿದ್ದು, ಪರೀಕ್ಷೆಗಳು ವಲಯದ 17 ಪರೀಕ್ಷಾ ಕೇಂದ್ರಗಳಲ್ಲಿ ಯಶಸ್ವಿಯಾಗಿ ಸುವ್ಯಸ್ಥಿತವಾಗಿ ಜರುಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಸಿ ಗಂಗಾಧರ ತಿಳಿಸಿದ್ದಾರೆ.

RELATED ARTICLES  ನಾಗಾಂಜಲಿಗೆ ಆತ್ಮೀಯ ಸನ್ಮಾನ

ಮಲ್ಲಾಪೂರ ಪಿ.ಜಿಯ ಸರಕಾರಿ ಪ್ರೌಢ ಶಾಲೆ, ಕೆ.ಆರ್.ಎಚ್ ಕೇಂದ್ರಗಳಿಗೆ ಜಿಲ್ಲಾ ಜಾಗೃತ ದಳದ ಡೈಟ್ ಬೆಳಗಾವಿಯ ಉಪನ್ಯಾಸಕರಾದ ಎಮ್.ಎಫ್ ಪಾಟೀಲ್, ಚೌದರಿಯವರು ಭೇಟಿ ನೀಡಿ ಪರೀಕ್ಷೆಗಳನ್ನು ಅವಲೊಕಿಸಿದರು. ಮೂಡಲಗಿಯ ಕೆ.ಎಚ್.ಎಸ್ ಜಿ.ಎಚ್.ಎಸ್, ಎಸ್.ಎಸ್.ಆರ್ ಪ್ರೌಢ ಶಾಲೆ, ಖಾನಟ್ಟಿ ಕೇಂದ್ರಗಳಿಗೆ ಎ.ಸಿ ಗಂಗಾಧರ ಭೇಟಿ ನೀಡಿ ಪರೀಕ್ಷೆಯ ಮೇಲ್ವಿಚಾರಣೆ ನಡೆಸಿದರು. ನೋಡಲ್ ಅಧಿಕಾರಿ ಎಸ್.ಎ ನಾಡಗೌಡ, ಇ.ಸಿ.ಓ ಆರ್.ಕಡಿ, ಬಿ.ಆರ್.ಪಿ ಕೆ.ಎಲ್. ಮೀಶಿ ಉಪಸ್ಥಿತರಿದ್ದರು.

RELATED ARTICLES  ವಿರೋಧಿ ಪಕ್ಷದವರು ಅನಾವಶ್ಯಕವಾಗಿ ಅಪಪ್ರಚಾರ ಮಾಡುತ್ತಿದ್ದಾರೆ: ಶಾಸಕ ಮಂಕಾಳ ವೈದ್ಯ

ವಲಯದ 17 ಪರೀಕ್ಷಾ ಕೇಂದ್ರಗಳಲ್ಲಿ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಹಾಗೂ ಮೇಲಾಧಿಕಾರಿಗಳ ಮಾರ್ಗದರ್ಶನದಂತೆ ಅಗತ್ಯ ಕ್ರಮ ಕೈಗೊಂಡು ಯಾವುದೇ ಗೊಂದಲಗಳಿಗೆ ಅಸ್ಪದ ನೀಡದಂತೆ ಪರೀಕ್ಷೆಗಳು ಪೊಲೀಸ್ ಬಂದೂಬಸ್ತನಲ್ಲಿ ಯಶಸ್ವಿಯಾಗಿ ಜರುಗಿದವು.