ಲಕನೌ. : ಉತ್ತರ ಪ್ರದೇಶದಲ್ಲಿ ನಡೆದ 10 ಸ್ಥಾನಗಳ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ 9 ಸ್ಥಾನಗಳಲ್ಲಿ ಗೆದ್ದು ದಿಗ್ವಿಜಯ ಸಾಧಿಸಿದೆ. ತೀವ್ರ ಕುತುಹಲ ಕೆರಳಿಸಿದ್ದ ಉತ್ತರ ಪ್ರದೇಶದ ಈ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದಿಂದ ಜಯಾ ಬಚ್ಚನ್ ಅವರು ಗೆಲುವು ಸಾಧಿಸಿದರೆ ಇನ್ನೊಂದೆಡೆ ಮಾಯಾವತಿಯವರ ಬಿಎಸ್‍ಪಿ ಅಭ್ಯರ್ಥಿಗೆ ಬೆಂಬಲ ಸುಚಿಸಿದ್ದ ಕಾಂಗ್ರೆಸ್ ಹಾಗೂ ಎಸ್‍ಪಿ ಗೆ ಭಾರಿ ಮುಖಬಂಗವಾಗಿದೆ .
ಮೈತ್ರಿಯ ವಿಶ್ವಾಸದಿಂದ ಮಾಯಾವತಿಯವರಿಗೆ ಬೆಂಬಲ ಸೂಚಿಸಿ ಉಳಿಕೆಯಾಗಿದ್ದ ಎಸ್‍ಪಿಯ ಮತಗಳನ್ನು ನೀಡಿದರೂ, ಕಾಂಗ್ರೆಸ್ ಬೆಂಬಲಿಸಿದರೂ ಸೋಲು ಕಂಡಿರುವುದು ಮಾಯಾವತಿಗೆ ಭಾರಿ ಆಘಾತ ನೀಡಿದೆ. ಕಳೆದ ಒಂದು ವಾರದ ಹಿಂದೆ ನಡೆದ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಿ ಬೀಗಿದ್ದ ಎಸ್‍ಪಿ ಮತ್ತು ಬಿಎಸ್‍ಪಿಗೆ ರಾಜ್ಯಸಭಾ ಚುನಾವಣೆÉ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಬಿಎಸ್‍ಪಿ ನಾಯಕರು ಎಸ್‍ಪಿ ಮೋಸ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿಸದ್ದಾರೆ. 2 ನೇ ಪ್ರಾಶಸ್ತ್ಯ ಮತದಲ್ಲಿ ಬಿಜೆಪಿಗೆ ಅದೃಷ್ಟ ಒಲಿದು 9ನೇ ಅಭ್ಯರ್ಥಿ ಕೂಡ ವಿಜಯ ಸಾಧಿಸಿರುವುದು ಕಮಲ ಪಾಳಯದಲ್ಲಿ ಸಂಭ್ರಮ ಮೂಡಿಸಿದೆ.