ಹೊನ್ನಾವರ: ಶ್ರೀ ರಾಜೇಶ ಇಲೆವೆನ್ ಇವರ ಆಶ್ರಯದಲ್ಲಿ ಪ್ರಥಮ ವರ್ಷದ ಹಿಂದೂ ಟ್ರೋಫಿ ಸೂಪರ ಸಿಕ್ಸ್ ಕ್ರಿಕೆಟ್ ಪಂದ್ಯಾವಳಿಯನ್ನು ಹಳದಿಪುರದ ಆರ್. ಈ.ಎಸ್. ಹೈಸ್ಕೂಲ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವನ್ನು ಬಿಜೆಪಿ ಮುಖಂಡರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್‍ನ ಅಧ್ಯಕ್ಷ ಶ್ರೀ ನಾಗರಾಜ ನಾಯಕ ತೊರ್ಕೆ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಶ್ರೀ ರಾಜೇಶ ಇಲೆವೆನ್ ಇವರ ಆಶ್ರಯದಲ್ಲಿ ಅಗಲಿದ ಗೆಳೆಯ ರಾಜೇಶನ ಸ್ಮರಣಾರ್ಥವಾಗಿ ಕಳೆದ 20 ವರ್ಷಗಳಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿರುವುದು ಶ್ಲಾಘನೀಯ. ಈ ಪಂದ್ಯಾವಳಿಗೆ ಹಿಂದೂ ಟ್ರೋಫಿ ಎಂದು ಹೆಸರಿಟ್ಟಿರುವುದು ಅತ್ಯಂತ ವಿಶೇಷವಾಗಿದೆ. ಇಂದು ಹಿಂದೂ ಧರ್ಮದ ಮೇಲೆ ಹಿಂದೂ ಕಾರ್ಯಕರ್ತರ ಮೇಲೆ ಅನೇಕ ರೀತಿಯಲ್ಲಿ ಪ್ರಹಾರ ನಡೆಯುತ್ತಿದೆ. ಆದರೂ ಎದೆಗುಂದದೇ ಧರ್ಮದ ರಕ್ಷಣೆಗಾಗಿ ನಾವೆಲ್ಲ ಒಟ್ಟಾಗಿದ್ದು ಪ್ರತಿಯೊಬ್ಬರಲ್ಲೂ ಹಿಂದುತ್ವ ಪುಟಿದೇಳುತ್ತಿದೆ. ನಮ್ಮ ಹಿಂದೂ ಧರ್ಮದ ಸಂಪ್ರದಾಯ, ಸಂಸ್ಕøತಿಯನ್ನು ನಾವು ಪಾಲಿಸಿ ಅವುಗಳನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕು. ಬಲಿಷ್ಠವಾದ ಸಮಾಜವನ್ನು ನಿರ್ಮಿಸುವಲ್ಲಿ ಇಂತಹ ಸಂಘಟನೆಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಇಂತಹ ಸಂಘಟನೆಗಳು ಮನರಂಜನಾ ಕ್ಷೇತ್ರಕ್ಕೆ ಮಾತ್ರ ಸೀಮಿತರಾಗದೇ ಸಾಮಾಜಿಕ ಕಾರ್ಯಗಳಲ್ಲಿ ಕೂಡಾ ತೊಡಗಿಕೊಳ್ಳಬೇಕು. ಸರಕಾರವು ಅನುಷ್ಠಾನಗೊಳಿಸುವ ಯೋಜನೆಗಳನ್ನು ಕಾಲ ಕಾಲಕ್ಕೆ ಜನರಿಗೆ ತಲುಪಿಸುವ ಕೆಲಸವನ್ನು ಇಂತಹ ಸಂಘಟನೆಗಳು ಪ್ರಾಮಾಣ ಕವಾಗಿ ಮಾಡಬೇಕು ಎಂದು ಕಿವಿಮಾತು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಾಜಿ ಶಾಸಕ ದಿನಕರ ಶೆಟ್ಟಿ ಅವರು ಮಾತನಾಡಿ ಅತ್ಯಂತ ಅಚ್ಚುಕಟ್ಟಾಗಿ ಅರ್ಥಪೂರ್ಣವಾದ ಹೆಸರಿನೊಂದಿಗೆ ಈ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಹಿಂದೂ ಟ್ರೋಫಿ ಎಂಬ ಈ ಹೆಸರೇ ಇಂದು ನಮ್ಮೆಲ್ಲರನ್ನೂ ಒಗ್ಗೂಡಿಸಿದೆ. ಹಿಂದುತ್ವದ ರಕ್ಷಣೆಗಾಗಿ ನಾವೆಲ್ಲ ಒಗ್ಗೂಡಬೇಕು ಎಂದು ಕರೆ ನೀಡಿದರು.
ಬಹುಮಾನ ವಿತರಕರಾಗಿ ಆಗಮಿಸಿದ ಶಿವಾನಂದ ಹೆಗಡೆ, ಸುಬ್ರಾಯ ವಾಳ್ಕೆ, ಮುಖ್ಯ ಅತಿಥಿಗಳಾದ ಗುಣಮಾಲಾ ಜೈನ ಮಾತನಾಡಿದರು. ಹಿಂದೂ ಪರಿಷತ್ ಪ್ರಮುಖರಾದ ಸಚಿನ ನಾಯ್ಕ ಅವರು ಹಿಂದುತ್ವದ ಕುರಿತು ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ದೀಪಕ ಶೇಟ್, ರತ್ನಾಕರ ನಾಯ್ಕ, ಗಣೇಶ ಪೈ, ಸತೀಶ ಹಬ್ಬು, ಅಜಿತ್ ನಾಯ್ಕ, ಗೋಪಾಲ ನಾಯ್ಕ, ವೆಂಕಟೇಶ ಗೌಡ, ಗಣಪು ಹರಿಕಾಂತ,ಸುರೇಶ ಮೇಸ್ತ, ರಾಮಕೃಷ್ಣ ನಾಯ್ಕ, ಶಿವಾನಂದ ನಾಯ್ಕ, ಪರಮೇಶ್ವರ ನಾಯ್ಕ, ರಾಮನಾಥ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವೀಣಾ ಕೊಡಿಯಾ ಸ್ವಾಗತಿಸಿದರು. ಶೀಲಾ ಮೇಸ್ತ ಕಾರ್ಯಕ್ರಮವನ್ನು ನಿರೂಪಿಸಿದರು. ನಂತರ ಹಾರ್ಟ ಬ್ರೇಕರ್ಸ್ ಭಟ್ಕಳ ಹಾಗೂ ಓಷಿಯನ್ ಹಾರ್ಟ ಬ್ರೇಕರ್ಸ್ ಹೊನ್ನಾವರ ಇವರಿಂದ ವಿವಿಧ ಮನರಂಜನಾ ಕಾರ್ಯಕ್ರಮ ಜರುಗಿತು.