ಭಟ್ಕಳ: ಎಸ್.ವಿ.ಇ.ಇ.ಪಿ. ಕಾರ್ಯಕ್ರಮದಡಿಯಲ್ಲಿ ವಿಕಲಚೇತನರಿಗೆ ಮತದಾನ ಜಾಗೃತಿ ಕುರಿತು ಜಾಥಾ ಹಾಗೂ ಸ್ಫರ್ಧಾ ಕಾರ್ಯಕ್ರಮವನ್ನು ಸಹಾಯಕ ಆಯುಕ್ತ ಎಮ್.ಎನ್. ಮಂಜುನಾಥ ಹಸಿರು ಬಾವುಟ ತೋರಿಸುವುದರ ಜಾಥಾಗೆ ಚಾಲನೆ ನೀಡಿದರು.
ಜಾಥಾವು ಸಂಶುದ್ದೀನ್ ಸರ್ಕಲ್‍ನಿಂದ ಆರಂಭವಾಗಿ ಮತದಾನ ಜಾಗೃತಿಯ ಘೋಷಣೆಯೊಂದಿಗೆ ಜನರಿಗೆ ವಿಕಲಚೇತನರ ಮತದಾನ ಜಾಗೃತಿಯ ಬಗ್ಗೆ ಮಾಹಿತಿ ನೀಡುತ್ತಾ ಇಲ್ಲಿನ ಶ್ರೀ ಗುರು ಸುಧೀಂದ್ರ ಕಾಲೇಜಿನವರೆಗೆ ಸಾಗಿಬಂದಿತು. ಜಾಥಾದಲ್ಲಿ ವಿಕಲಚೇತನರು ಅವರ ತ್ರಿಚಕ್ರ ವಾಹನದೊಂದಿಗೆ ಹುರುಪಿನಲ್ಲಿ ಪಾಲ್ಗೊಂಡದರು. ಹಾಗೂ ಬೀದಿ ನಾಟಕವನ್ನು ವಿಕಲಚೇತನರು ಪ್ರದರ್ಶಿಸುವ ಮೂಲಕ ವಿಕಲಚೇತನದ ಮತದಾನ, ಅದರಲ್ಲಿ ಸಾಮಾನ್ಯರ ಅರಿವು ಹಾಗೂ ಅವರ ಪಾಲ್ಗೊಳ್ಳುವಿಕೆ ಇತರರ ಪ್ರೋತ್ಸಾಹವನ್ನ ಬೀದಿ ನಾಟಕದಲ್ಲಿ ಜಾಗೃತಿ ಕಾರ್ಯಕ್ರಮದಲ್ಲಿ ಸಂದೇಶವನ್ನು ನೀಡಿದರು.

RELATED ARTICLES  ಸಂಕುಚಿತ ಮನೋಭಾವದಿಂದ ಹೊರಬನ್ನಿ. :ಎಂ ಜಿ ಭಟ್.

ಜಾಥಾ ಬಳಿಕ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ವಿಕಲಚೇತನರಿಗೆ ರಂಗೋಲಿ ಸ್ಪರ್ಧೇ, ಚಿತ್ರಕಲೆ ಸ್ಪರ್ಧೇ ಮತ್ತು ಕವನ ವಾಚನವನ್ನು ಓದಿ ಹೇಳುವ ಸ್ಫರ್ಧೆಯನ್ನು ಆಯೋಜಿಸಲಾಯಿತು. ಸಂಜೆ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆದಿದ್ದು, ವಿವಿಧ ಸ್ಫರ್ಧೇಗಳಲ್ಲಿ ವಿಜೇತರಾದ ಸ್ಪರ್ಧಾಳುವಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕೋಗ್ತಿಯ ವಿಶೇಷ ಮಕ್ಕಳ ಶಾಲೆಯ 18 ವರ್ಷ ಮೇಲ್ಪಟ್ಟ ವಿಕಲಚೇತನರು ಜಾಥಾದ ಪ್ರಮುಖ ಆಕರ್ಷಣೆಯಾದರು.

RELATED ARTICLES  ರೈಲಿಗೆ ಸಿಲುಕಿ ವ್ಯಕ್ತಿ ಸಾವು

ತಹಸೀಲ್ದಾರ ವಿ.ಎನ್.ಬಾಡಕರ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸಿ.ಟಿ.ನಾಯ್ಕ, ತಾಲುಕಾ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಶೀಲಾ ಮೋಗೇರ, ಕ್ಷೇತ್ರ ಶಿಕ್ಷಣಾಧಿಕಾರಿ ಎಮ್.ಆರ್.ಮುಂಜಿ, ತಾಲೂಕಾ ಆರೋಗ್ಯಾ ಧಿಕಾರಿ ಡಾ.ಮೂರ್ತಿರಾಜ್ ಭಟ್, ಆರೋಗ್ಯ ಇಲಾಖೆ ಸಹಾಯಕ ಅಧಿಕಾರಿ ಈರಯ್ಯ ದೇವಾಡಿಗ, ತಾಲೂಕಾ ಸಮನ್ವಯಾಧಿಕಾರಿ ಹಾಗೂ ಕಛೇರಿ ಸಿಬ್ಬಂದಿಗಳು, ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ಸೇರಿದಂತೆ ಕಛೇರಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು.