ಅಂಕೋಲಾ: ಭಾರತೀಯ ಜನತಾ ಪಾರ್ಟಿ ವತಿಯಿಂದ ಉತ್ತರ ಕನ್ನಡ ಜಿಲ್ಲಾ ಹಿಂದುಳಿದ ಮೋರ್ಚಾ ಹಾಗೂ ಮುಖ್ಯ ಪದಾಧಿಕಾರಿಗಳ ರಾಜ್ಯ ಓ.ಬಿ.ಸಿ ಸಮಾವೇಶದ ಪೂರ್ವಭಾವಿ ಸಭೆ ಅಂಕೋಲಾದಲ್ಲಿ ನಡೆಯಿತು ಈ ಸಂದರ್ಭದಲ್ಲಿ ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಕೆ.ಎಸ್ ಈಶ್ವರಪ್ಪ ಹಾಜರಿದ್ದರು. ನಂತರ ನಡೆದ ಸುದ್ಧಿಗೋಷ್ಟಿಯಲ್ಲಿ ಅವರು ಕಾಂಗ್ರೆಸ್ ಸರಕಾರದ ವಿರುದ್ಧ ಕಿಡಿ ಕಾರಿದರು .

” ಗೋವು ಹಿಂದುಗಳಿಗೆ ಪ್ರಾಣಿಯಲ್ಲ ಅದು ದೇವತೆ ಗೋ ಮಾತೆಯ ರಕ್ಷಣೆಗೆ ಮುಂದಾಗಿದ್ದ ಸೂರಜ್ ಸೋನಿಯವರ ವಿರುದ್ಧ ರಾಜಕೀಯ ಪ್ರೇರಿತ ದೂರು ದಾಖಲಿಸಿ ಬಂಧಿಸಲಾಗಿದೆ ” ಎಂದು ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಕೆ.ಎಸ್ ಈಶ್ವರಪ್ಪ ಅವರು ಆರೋಪಿಸಿದರು.

RELATED ARTICLES  ಮಳೆಯ ಅಬ್ಬರ ಕುಮಟಾದ ಹೆರವಟ್ಟಾದ ಶ್ರೀ ಸಾಣಿಅಮ್ಮ ದೇವಸ್ಥಾನದೊಳಕ್ಕೆ ನುಗ್ಗಿದ ನೀರು

ರಾಜ್ಯ ಸರ್ಕಾರ ತಮ್ಮ ಅವಶ್ಯಕತೆಗೆ ತಕ್ಕಂತೆ ಪೋಲಿಸ್ ಇಲಾಖೆಯನ್ನು ಬಳಸಿಕೊಂಡು ಬಿ.ಜೆ.ಪಿ ಕಾರ್ಯಕರ್ತರು ಹಾಗೂ ಸಂಘ ಪರಿವಾರದವರ ಮೇಲೆ ದೂರು ದಾಖಲಿಸುತ್ತಿದೆ ಎಂದರು. ಕಾಂಗ್ರೆಸ್ ಸರಕಾರದ ವಿರುದ್ಧ ಅವರು ಹರಿ ಹಾಯ್ದರು.

RELATED ARTICLES  ಕಾಡಾನೆ ದಾಳಿಯಿಂದ ತೋಟ, ಗದ್ದೆ ನಾಶ; ಪರಿಹಾರಕ್ಕೆ ಆಗ್ರಹ

ಈ ಕಾಂಗ್ರೆಸ್ ಸರ್ಕಾರದ ದುರಾಡಳಿತ ಇನ್ನು ಕೇವಲ ಎರಡು ತಿಂಗಳಿಗೆ ಮಾತ್ರ ಸೀಮಿತವಾಗಿದ್ದು ಮುಂಬರುವ ಚುನಾವಣೆಯಲ್ಲಿ ರಾಜ್ಯದ ಜನರು ಕಾಂಗ್ರೇಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ಬಿಜೆಪಿಗೆ ಗೆಲುವು ನಿಷ್ಚಿತ ಎಂಬಂತೆ ತಮ್ಮ ಮಾತು ಮುಂದಿವರಿಸಿದರು ಎನ್ನಲಾಗಿದೆ.

ಈ ಸಂದರ್ಭದಲ್ಲಿ ಬಿ.ಜೆ.ಪಿ ಮುಖಂಡರಾದ ರಾಮು ರಾಯ್ಕರ್ , ರೂಪಾಲಿ ನಾಯ್ಕ್ , ಜಗನ್ನಾಥ ನಾಯಕ್, ರಾಜೇಶ್ ನಾಯಕ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.