ಯಲ್ಲಾಪುರ : ಗೂಗಲ್ ಮ್ಯಾಪ್ ನಲ್ಲಿ ಯಲ್ಲಾಪುರ ಪಟ್ಟಣದ ಕಾಳಮ್ಮ ನಗರವನ್ನು ಟಿಪ್ಪು ನಗರವನ್ನಾಗಿಸಿದ್ದನ್ನು ವಿರೊಧಿಸಿ ಕಾಳಮ್ಮನಗರ ಉಳಿಸಿ ಅಭಿಯಾನವನ್ನು ಪ್ರಾರಂಭಿಸುವುದಾಗಿ ಬಿಜೆಪಿ ಮುಖಂಡ ಎಲ್ ಆರ್ ಭಟ್ ತೋಟ್ಮನೆ ಕಂಪನಿಗೆ ಹಾಗೂ ಅಧಿಕಾರಿಗಳಿಗೆ ಎಚ್ಚರಿಸಿದರು.

ಈ ಕುರಿತು ಸತ್ವಧಾರಾ ನ್ಯೂಸ್ ಜತೆ ಮಾತನಾಡಿದ ಅವರು, ಕಳೆದ ಎಂಟು ವರ್ಷಗಳ ಹಿಂದೆ ಯಲ್ಲಾಪುರ ವನ್ನು ಇಸ್ಲಾಂಪುರ ಎಂದು ಗೂಗಲ್ ಮ್ಯಾಪ್ ನಲ್ಲಿ ಬದಲಾಯಿಸಲಾಗಿತ್ತು .ಅದೇ ರೀತಿ ಕಳೆದ ಮೂರು ವರ್ಷಗಳ ಹಿಂದೆ ಕಾಳಮ್ಮ ನಗರವನ್ನು ಟಿಪ್ಪು ನಗರ ಎಂದು ಗೂಗಲ್ ಮ್ಯಾಪ್ ನಲ್ಲಿ ಬದಲಾಯಿಸಲಾಗಿತ್ತು. ಆ ಸಂದರ್ಭದಲ್ಲಿ ಅದನ್ನು ಪ್ರಭಲವಾಗಿ ವಿರೋಧಿಸಿ ಸರಿಪಡಿಸಲಾಗಿತ್ತು ಆದರೇ ಮತ್ತೀಗ ಅದೇ ಸಮಸ್ಯೆ ಸಂಭವಿಸಿದ್ದು ತಕ್ಷಣದಲ್ಲಿ ಸಂಭಂದಿಸಿದವರು ಎಚ್ಚೆತ್ತು ಟಿಪ್ಪು ನಗರವೆಂದು ನಮೂದಿಸಲಾದ ಕಾಳಮ್ಮ ನಗರವನ್ನು ಮತ್ತೆ ಕಾಳಮ್ಮ ನಗರವೆಂದೇ ಗೂಗಲ್ ಮ್ಯಾಪ್ ನಲ್ಲಿ ಗುರುತಿಸಬೇಕು. ಇಲ್ಲವಾದಲ್ಲಿ ಕಾಳಮ್ಮನಗರ ಉಳಿಸಿ ಅಭಿಯಾನವನ್ನು ಪ್ರಾರಂಭಿಸುವುದಾಗಿ ಸಂಬಂಧಿಸಿದ ಕಂಪನಿ ಹಾಗೂ ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ.

RELATED ARTICLES  ಹೊನ್ನಾವರ ತಾಲೂಕಿನಲ್ಲಿ ಇಂದು 8 ಜನರಿಗೆ ಕರೊನಾ ಪಾಸಿಟಿವ್

ಕಳೆದ ಐದು ವರ್ಷಗಳಿಂದ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದ್ದು ,ಉತ್ತರ ಕನ್ನಡ ಜಿಲ್ಲೆಯಲ್ಲೂ ಅದೇ ದೌರ್ಜನ್ಯ ಮುಂದುವರಿದಿದೆ .ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗುವಂತಹ ಯಾವುದೇ ಒಂದು ಘಟನೆಗಳು ನಡೆದರೂ ಅದನ್ನು ವಿರೋಧಿಸುತ್ತೇವೆ. ಈ ಹಿಂದೆ ಕುಮಟಾ ,ಭಟ್ಕಳ ಹೊನ್ನಾರದಲ್ಲಿ ನಡೆದಂತಹ ಗಲಾಟೆ, ಗಲಭೆಗಳು ಯಲ್ಲಾಪುರದಲ್ಲಿ ನಡೆಯದಂತೆ ಅಧಿಕಾರಿಗಳು ಎಚ್ಚರವಹಿಸಬೇಕು ತತ್ಕ್ಷಣದಲ್ಲೇ ಟಿಪ್ಪು ನಗರವನ್ನು ಕಾಳಮ್ಮ ನಗರವನ್ನಾಗಿಸಬೇಕು ಇಲ್ಲವಾದಲ್ಲಿ ಮುಂದಾಗುವ ಅನಾಹುತಗಳಿಗೆ ಸಂಬಂಧಿಸಿದ ಅಧಿಕಾರಿಗಳು ,ಗೂಗಲ್ ಮ್ಯಾಪ್ ಕಂಪನಿಯೇ ಹೊಣೆಯಾಗುತ್ತಾರೆ ಎಂದು ಎಚ್ಚರಿಸಿದರು.

RELATED ARTICLES  ಸ್ನಾನ ಮಾಡುವ ವೀಡಿಯೋ ಬೇಕೆಂದು ಮಹಿಳೆಯನ್ನು ಪೀಡಿಸುತ್ತಿದ್ದ ವ್ಯಕ್ತಿ..?