ಶ್ರೀ ರಾಮ ನವಮಿಯು ಶ್ರೀ ರಾಮನ ಜನ್ಮದಿನ. ಶ್ರೀ ರಾಮನು ಪ್ರಾಚೀನ ಕಾಲದ ನಿರ್ವಹಣಾ ಗುರುವಾಗಿದ್ದಾನೆ (ಸರ್ವಧರ್ಮವನ್ನೂ ನಿರ್ವಹಿಸಬಲ್ಲವ). ಇಲ್ಲಿ ಶ್ರೀ ರಾಮ ನವಮಿಯ ಸುಲಭ ಪೂಜೆಯ ವಿಧಾನ ಕೊಟ್ಟಿದೆ. ಯಾವುದೇ ಪೂಜೆಗಾದರೂ ಸ್ವಚ್ಛತೆ ಬಹಳ ಮುಖ್ಯ. ಮನೆ ಮತ್ತು ಪೂಜಾಸ್ಥಳವನ್ನು ಸ್ವಚ್ಚಗೊಳಿಸಬೇಕು. ಕೆಲವು ಭಕ್ತರು ಶ್ರೀ ರಾಮ ನವಮಿಯ ದಿನ ಉಪವಾಸವಿದ್ದು ಪೂಜೆಯ ನಂತರ ಪ್ರಸಾದವನ್ನು ಸ್ವೀಕರಿಸುತ್ತಾರೆ. ಈಗ ಶ್ರೀ ರಾಮ ನವಮಿಯ ಪೂಜೆಯ ವಿಧಾನವನ್ನು ನೋಡೋಣ.
೧. ಶ್ರೀ ರಾಮ ನವಮಿಯ ಪೂಜೆಯನ್ನು ಧ್ಯಾನ ಶ್ಲೋಕದ ಮೂಲಕ ಪ್ರಾರಂಭಿಸೋಣ.
ಶ್ರೀ ರಾಘವಂ ದಶರಥಾತ್ಮಜಮಪ್ರಮೇಯಮ್
ಸೀತಾಪತಿಂ ರಘುಕುಲಾನ್ವಯ ರತ್ನದೀಪಮ್
ಆಜಾನುಬಾಹುಂ ಅರವಿಂದ ದಳಾಯತಾಕ್ಷಮ್
ರಾಮಂ ನಿಶಾಚರ ವಿನಾಶಕರಂ ನಮಾಮಿ
ಆಪದಾಮಪಹರ್ಥಾರಂ ದಾತಾರಂ ಸರ್ವ ಸಂಪದಾಮ್
ಲೋಕಾಭಿರಾಮಂ ಶ್ರೀರಾಮಂ ಭೂಯೋ ಭೂಯೋ ನಮಾಮ್ಯಹಮ್
೨. ಶ್ರೀ ರಾಮ ಮತ್ತು ಅವನ ಪರಿವಾರವನ್ನು ಪೂಜೆಗೆ ಆಹ್ವಾನಿಸಿ.
ಓಂ ಶ್ರೀ ಸೀತಾರಾಮಚಂದ್ರ ಪರಬ್ರಹ್ಮಣೆ ನಮಃ ಆವಾಹಯಾಮಿ
೩. ಶ್ರೀ ರಾಮನಿಗೆ ಮತ್ತು ಅವನ ಪರಿವಾರಕ್ಕೆ ರತ್ನಸಿಂಹಾಸನ ಸಮರ್ಪಣೆ.
ಓಂ ಶ್ರೀ ಸೀತಾರಾಮಚಂದ್ರ ಪರಬ್ರಹ್ಮಣೆ ನಮಃ
ರತ್ನಸಿಂಹಾಸನಮ್ ಸಮರ್ಪಯಾಮಿ
ವೈದೇಹಿಸಹಿತಂ ಸುರದ್ರುಮತಲೇ ಹೈಮೇ ಮಹಾಮಂಟಪೇ
ಮಧ್ಯೇ ಪುಷ್ಪಕಮಾಸನೇ ಮಣಿಮಯೇ ವೀರಾಸನೇ ಸುಸ್ಥಿತಮ್
ಅಗ್ರೇ ವಾಚಯತಿ ಪ್ರಭಂಜನಸುತೇ ತತ್ತ್ವಂ ಮುನಿಭ್ಯ: ಪರಂ
ವ್ಯಾಖ್ಯಾಂತಂ ಭರತಾದಿಭಿ: ಪರಿವೃತಂ ರಾಮಂ ಭಜೇ ಶ್ಯಾಮಲಮ್
೪. ನಿಮ್ಮ ಕೈಗಳನ್ನು, ಕಾಲು ಮತ್ತು ಮುಖವನ್ನು ಸ್ವಚ್ಚಗೊಳಿಸಿಕೊಂಡು ಶ್ರೀ ರಾಮನಿಗೆ ಮತ್ತು ಅವನ ಪರಿವಾರಕ್ಕೆ ಕೈಗಳನ್ನು, ಕಾಲು ಮತ್ತು ಮುಖವನ್ನು ಸ್ವಚ್ಚಗೊಳಿಸಿಕೊಳ್ಳಲು ನೀರನ್ನು ನೀಡಿರಿ.
ಓಂ ಶ್ರೀ ಸೀತಾರಾಮಚಂದ್ರ ಪರಬ್ರಹ್ಮಣೆ ನಮಃ ಅರ್ಘ್ಯಂ ಸಮರ್ಪಯಾಮಿ
ನೀರನ್ನು ತೋರಿಸಿ, ಶ್ರೀ ರಾಮನ ಕೈಗಳಿಗೆ ಸಿಂಪಡಿಸಿ ಮತ್ತು ಅದನ್ನು ಇನ್ನೊಂದು ಪಾತ್ರೆಯಲ್ಲಿಡಿ.
ಓಂ ಶ್ರೀ ಸೀತಾರಾಮಚಂದ್ರ ಪರಬ್ರಹ್ಮಣೆ ನಮಃ ಪಾದ್ಯಂ ಸಮರ್ಪಯಾಮಿ
ನೀರನ್ನು ಶ್ರೀ ರಾಮನ ಪಾದಗಳಿಗೆ ತೋರಿಸಿ ಮತ್ತು ಅದನ್ನು ಇನ್ನೊಂದು ಪಾತ್ರೆಯಲ್ಲಿಡಿ -2 ಬಾರಿ.
ಓಂ ಶ್ರೀ ಸೀತಾರಾಮಚಂದ್ರ ಪರಬ್ರಹ್ಮಣೆ ನಮಃ ಆಚಮನಂ ಸಮರ್ಪಯಾಮಿ
ನೀರನ್ನು ಶ್ರೀ ರಾಮನ ಬಾಯಿಗೆ ತೋರಿಸಿ ಮತ್ತು ಅದನ್ನು ಇನ್ನೊಂದು ಪಾತ್ರೆಯಲ್ಲಿಡಿ -3 ಬಾರಿ.
೫. ಶ್ರೀ ರಾಮನಿಗೆ ಮತ್ತು ಅವನ ಪರಿವಾರಕ್ಕೆ ಒಂದು ಪುಷ್ಪದಳದಿಂದ ಸ್ವಲ್ಪ ನೀರಿನ ಹನಿಗಳನ್ನು ಸಿಂಪಡಿಸಿ.
ಓಂ ಶ್ರೀ ಸೀತಾರಾಮಚಂದ್ರ ಪರಬ್ರಹ್ಮಣೆ ನಮಃ ಸ್ನಾನಂ ಸಮರ್ಪಯಾಮಿ
೬. ಶ್ರೀ ರಾಮನಿಗೆ ಮತ್ತು ಅವನ ಪರಿವಾರಕ್ಕೆ ಪುಷ್ಪದಳವನ್ನು( ವಸ್ತ್ರದಂತೆ ) ಸಮರ್ಪಿಸಿ.
ಓಂ ಶ್ರೀ ಸೀತಾರಾಮಚಂದ್ರ ಪರಬ್ರಹ್ಮಣೆ ನಮಃ ಪ್ಲೋಥ ವಸ್ತ್ರಂ ಸಮರ್ಪಯಾಮಿ
೭. ಮೃದು ರೇಷ್ಮೆ ಬಟ್ಟೆಗಳಂತಿರುವ ಪುಷ್ಪಗಳನ್ನು ಶ್ರೀ ರಾಮನಿಗೆ ಸಮರ್ಪಿಸಿ.
ಓಂ ಶ್ರೀ ಸೀತಾರಾಮಚಂದ್ರ ಪರಬ್ರಹ್ಮಣೆ ನಮಃ ವಸ್ತ್ರಯುಗ್ಮಂ ಸಮರ್ಪಯಾಮಿ
೮. ಶ್ರೀ ರಾಮನ ಹಣೆಗೆ ತಿಲಕದಂತೆ ಪುಷ್ಪವನ್ನು ಸಮರ್ಪಿಸಿ.
ಓಂ ಶ್ರೀ ಸೀತಾರಾಮಚಂದ್ರ ಪರಬ್ರಹ್ಮಣೆ ನಮಃ ಊರ್ದ್ವಪುಂಡ್ರಮ್ ಸಮರ್ಪಯಾಮಿ
೯. ಶ್ರೀ ರಾಮನಿಗೆ ಹೂವುಗಳಿಂದ ಆಭರಣ ವಸ್ತ್ರಗಳಂತೆ ಅಲಂಕರಿಸಿ.
ಓಂ ಶ್ರೀ ಸೀತಾರಾಮಚಂದ್ರ ಪರಬ್ರಹ್ಮಣೆ ನಮಃ ದಿವ್ಯಆಭರಣ ಅಲಂಕಾರಾನ್ ಸಮರ್ಪಯಾಮಿ
೧೦. ಶ್ರೀ ರಾಮನ ಕೆಲವು ನಾಮಗಳನ್ನು ಜಪಿಸುತ್ತಾ ಶ್ರೀ ರಾಮನ ಪಾದಪದ್ಮಗಳಿಗೆ ಹೂವುಗಳನ್ನು ಸಮರ್ಪಿಸಿ.
೧೧. ಧೂಪದಕಡ್ಡಿಯನ್ನು ಹಚ್ಚಿ ಅದರ ಸುಗಂಧವನ್ನು ಶ್ರೀರಾಮನಿಗೆ ಮತ್ತು ಅವನ ಪರಿವಾರಕ್ಕೆ ಸಮರ್ಪಿಸಿ.
ಓಂ ಶ್ರೀ ಸೀತಾರಾಮಚಂದ್ರ ಪರಬ್ರಹ್ಮಣೆ ನಮಃ ಧೂಪಂ ಸಮರ್ಪಯಾಮಿ
೧೨. ಮಂಗಳಕರ ದೀಪವನ್ನು ಹಚ್ಚಿ ಶ್ರೀರಾಮನಿಗೆ ಮತ್ತು ಅವನ ಪರಿವಾರಕ್ಕೆ ತೋರಿಸಿ.
ಓಂ ಶ್ರೀ ಸೀತಾರಾಮಚಂದ್ರ ಪರಬ್ರಹ್ಮಣೆ ನಮಃ ದೀಪಮ್ ಸಮರ್ಪಯಾಮಿ
೧೩. ತಿಂಡಿತಿನಿಸು, ಹಣ್ಣುಗಳನ್ನು ಶ್ರೀರಾಮನಿಗೆ ಮತ್ತು ಅವನ ಪರಿವಾರಕ್ಕೆ ಸಮರ್ಪಿಸಿ.
ಓಂ ಶ್ರೀ ಸೀತಾರಾಮಚಂದ್ರ ಪರಬ್ರಹ್ಮಣೆ ನಮಃ ನೈವೇದ್ಯಂ ಸಮರ್ಪಯಾಮಿ
ಯಾ ಪ್ರೀತಿರ್ವಿದುರಾರ್ಪಿತೇ ಮುರರಿಪೋ ಕುಂತ್ಯರ್ಪಿತೇ ಯಾದೃಶೀ
ಯಾ ಗೋವರ್ಧನಮೂರ್ಧ್ನಿ ಯಾ ಚ ಪೃಥುಕೇ ಸ್ತನ್ಯೇ ಯಶೋದಾರ್ಪಿತೇ
ಭಾರದ್ವಾಜ ಸಮರ್ಪಿತೇ ಶಬರಿಕಾದತ್ತೇsಧರೇ ಯೋಷಿತಾಂ
ಯಾ ಪ್ರೀತಿರ್ಮುನಿಪತ್ನಿಭಕ್ತಿರಚಿತೇsಪ್ಯತ್ರಾಪಿತಾಂ ತಾಂ ಕುರು
೧೪. ಶ್ರೀರಾಮನಿಗೆ ಮತ್ತು ಅವನ ಪರಿವಾರಕ್ಕೆ ಕರ್ಪೂರದ ಆರತಿ ಮಾಡಿ.
ಓಂ ಶ್ರೀ ಸೀತಾರಾಮಚಂದ್ರ ಪರಬ್ರಹ್ಮಣೆ ನಮಃ ನೀರಾಜನಂ ಸಮರ್ಪಯಾಮಿ
ಮಂಗಳಂ ಕೊಸಲೆಂದ್ರಾಯ ಮಹನೀಯ ಗುಣಾಥ್ಮನೆ
ಚಕ್ರವರ್ತಿ ಥನುಜಯ ಸಾರ್ವಭೌಮಾಯ ಮಂಗಳಂ
ಶ್ರೀಯಃ ಕಾಂತಾಯ ಕಲ್ಯಾಣ ನಿಧಯೇ
ಶ್ರೀಯಃ ಕಾಂತಾಯ ಕಲ್ಯಾಣ ನಿಧಯೇ ನಿಧಯೇರ್ಥಿನಾಂ
ಶ್ರೀ ವೇಂಕಟ ನಿವಾಸಾಯ ಶ್ರೀನಿವಾಸಾಯ ಮಂಗಳಂ
ಮಂಗಲಾಶಾಸನಪರೈಹಿ ಮದಾಚಾರ್ಯ ಪುರೋಗಮೈಹಿ
ಸರ್ವೈಸ್ಚ ಪೂರ್ವೈಹಿ ಆಚಾರ್ಯೈಹಿ ಸತ್ಕ್ರುಥಾಯಾಸ್ತು ಮಂಗಳಮ್
೧೫. ಶ್ರೀ ರಾಮನಲ್ಲಿ ಶರಣಾಗಿ ಮಾಡಿದ ತಪ್ಪುಗಳೆಲ್ಲವನ್ನೂ ಮನ್ನಿಸುವಂತೆ ಪ್ರಾರ್ಥಿಸಿ.
ಕಾಯೇನ ವಾಚಾ ಮನಸೇನ್ದ್ರಿಯೈವ
ಭುದ್ಯಾತ್ಮನ ವಾ ಪ್ರಕೃತೇಸ್ವಭಾವಾತ್
ಕರೋಮಿ ಯದ್ ಯದ್ ಸಕಲಂ ಪರಸ್ಮೈ
ನಾರಾಯನೇತಿ ಸಮರ್ಪಯಾಮಿ
೧೬. ಪ್ರಪಂಚದಲ್ಲಿನ ಎಲ್ಲಾ ಜೀವಿಗಳ ಕಲ್ಯಾಣಕ್ಕಾಗಿ ದೇವರನ್ನು ಪ್ರಾರ್ಥಿಸಿ.
ಸ್ವಸ್ತಿ ಪ್ರಜಾಭ್ಯಃ ಪರಿಪಾಲಯಂತಾಮ್
ನ್ಯಾಯೇನ ಮಾರ್ಗೇಣ ಮಹೀಂ ಮಹೀಶಾಃ ||
ಗೋಸಜ್ಜನೇಭ್ಯಃ ಶುಭಮಸ್ತು ನಿತ್ಯಂ
ಲೋಕಾಃ ಸಮಸ್ತಾಃ ಸುಖಿನೋ ಭವಂತು ||
ಕಾಲೇ ವರ್ಷತು ಪರ್ಜನ್ಯಃ ಪೃಥಿವೀ ಸಸ್ಯ ಶಾಲಿನೀ ||
ದೇಶೋಽಯಂ ಕ್ಷೋಭರಹಿತಃ ಸಜ್ಜನಾಃ ಸಂತು ನಿರ್ಭಯಾಃ ||
ಸರ್ವಂ ಶ್ರೀಕೃಷ್ಣಾರ್ಪಣಮಸ್ತು
೧೭. ಮೃದುವಾದ ಹಾಸಿಗೆಯಂತೆ ಒಂದು ಹೂವನ್ನು ಶ್ರೀ ರಾಮನಿಗೆ ಸಮರ್ಪಿಸಿ. ಗುರುಗಳನ್ನು ಜ್ಞಾಪಿಸಿಕೊಳ್ಳುತ್ತಾ, ಶಾಂತಿ ಮಂತ್ರವನ್ನು ಹೇಳುತ್ತಾ ಪೂಜೆಯನ್ನು ನಿರ್ವಿಗ್ನವಾಗಿ ನಡೆಸಿದ್ದಕ್ಕೆ ಧನ್ಯವಾದಗಳನ್ನು ಸಮರ್ಪಿಸಿ.
ಓಂ ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ಪೂರ್ಣಮುದಚ್ಯತೇ
ಓಂ ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾಶಿಷ್ಯತೇ
ಓಂ ನಮೋ ಪರಮ ಋಷಿಭ್ಯೋ ನಮಃ ಪರಮ ಋಷಿಭ್ಯಃ
ಓಂ ಅಸ್ಮತ್ ಗುರುಭ್ಯೋ ನಮಃ
೧೮. ಈ ಕೆಳಗಿನ ಶ್ಲೋಕವನ್ನು 3 ಬಾರಿ ಹೇಳುತ್ತಾ ತೀರ್ಥವನ್ನು ಕುಡಿಯಿರಿ.
ಅಕಾಲ ಮೃತ್ಯು ಹರಣಂ ಸರ್ವವ್ಯಾಧಿ ನಿವಾರಣಂ
ಸಮಸ್ತ ದುರಿತೋಪಶಮನಂ ವಿಷ್ಣು ಪಾದೋದಕಂ ಪಾವನಂ ಶುಭಂ
ಶರೀರೆ ಜರ್ಜರೀ ಭೂತೆ ವ್ಯಾದಿಗ್ರಸ್ತೇ ಕಳೇಬರೇ
ಔಷಧಂ ಜಾನ್ಹವಿ ತೋಯಂ ವೈದ್ಯೋ ನಾರಾಯಣೋ ಹರೀ
೧೯. ಪ್ರಸಾದವನ್ನು ಸ್ವೀಕರಿಸಿ ಬಂದಿರುವ ಭಕ್ತರಿಗೆಲ್ಲರಿಗೂ ತೀರ್ಥ ಪ್ರಸಾದವನ್ನು ಹಂಚಿರಿ. ಈದಿನ ಕೆಲವರು ಸೀತಾರಾಮ ಕಲ್ಯಾಣವನ್ನೂ ಸಹಾ ಮಾಡಿಸುತ್ತಾರೆ.
೨೦.ನಂತರ ಈ ಶ್ಲೋಕವನ್ನು ಹೇಳುತ್ತಾ ಪ್ರದಕ್ಷಿಣೆ ನಮಸ್ಕಾರ ಮಾಡಿ.
ಯಾನಿ ಕಾನಿಚ ಪಾಪಾನಿ ಜನ್ಮಾಂತರ ಕೃತಾನಿಚ
ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣ ಪದೇ ಪದೇ
ಶ್ರೀಸೀತಾರಾಮಚಂದ್ರಾರ್ಪಣಮಸ್ತು.