ಹೊಸದಿಲ್ಲಿ, : ಭಾರತ ಕ್ರಿಕೆಟಿಗ ಮುಹಮ್ಮದ್ ಶಮಿ ಡೆಹ್ರಾಡೂನ್‌ನಿಂದ ದಿಲ್ಲಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಘಟನೆಯಿಂದ ಶಮಿ ತಲೆಗೆ ಸ್ವಲ್ಪ ಗಾಯವಾಗಿದೆ. ಶಮಿ ತೆರಳುತ್ತಿದ್ದ ಕಾರು ಟ್ರಕ್ಗೆ ಢಿಕ್ಕಿಯಾಗಿ ಅವಘಡ ಸಂಭವಿಸಿದ್ದು ,ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು ತಲೆಗೆ ಹೊಲಿಗೆಗಳನ್ನು ಹಾಕಲಾಗಿದೆ. ಶಮಿ ಪತ್ನಿ ಹಸಿನಾ ಜಹಾನ್ ಕೌಟುಂಬಿಕ ಹಿಂಸಾಚಾರ ದೂರು ನೀಡಿದ ಹಿನ್ನೆಲೆಯಲ್ಲಿ ಶಮಿ ವಿರುದ್ಧ ಹತ್ಯೆಗೆ ಯತ್ನ ಸಹಿತ ಹಲವು ಜಾಮೀನುರಹಿತ ಪ್ರಕರಣ ದಾಖಲಿಸಲಾಗಿದೆ. ಶಮಿ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪವನ್ನು ಜಹಾನ್ ಹೊರಿಸಿದ್ದರು. ಈ ಆರೋಪದಿಂದ ಶಮಿ ಮುಕ್ತರಾಗಿದ್ದಾರೆ.

RELATED ARTICLES  ಕೊರೋನಾವನ್ನು ಆಯುರ್ವೇದದ ಮೂಲಕ ಗುಣಪಡಿಸಬಲ್ಲೆ : ಡಾ.ಕಜೆ