ಸಿಂದಗಿ: ತಾಲೂಕಿನ ಹಂದಿಗನೂರ ಗ್ರಾಮದ ವಾರ್ಡ ನಂಬರ ಒಂದು ರಲ್ಲಿ ಬರುವ ಚನಗೊಂಡ ಓಣಿಯಲ್ಲಿ ಶಾಂತಾಬಾಯಿ ರೇಡಿಹಾಳ ಹಾಗೂ ಷನ್ಮುಖ ಹತ್ತಿ ಇವರ ಮನೆಯ ಮುಂದೆ ಹಲವಾರು ವರ್ಷಗಳಿಂದ ಪಾಳು ಬಿದ್ದ ಬಲಿಗಾಗಿ ಕಾದು ಕುಂತ ತೆರೆದ ಬಾವಿ ಈ ಬಾವಿಯೋಳಗೆ ಕಸ ಕಡಿ ಇತ್ಯಾದಿ ತ್ಯಾಜವಸ್ತು ಗಳು ಸಾರ್ವಜನಿಕರು ಹಾಕುತ್ತಿದ್ದಾರೆ.
ಅನಾಹುತ ಆದಾಗ ಸರಕಾರ ಹಾಗೂ ಅಧಿಕಾರಿಗಳು ಲಕ್ಷಗಟ್ಟಲೆ ಹಣ ಖರ್ಚು ಮಾಡುತ್ತರೆ ಆದರೆ ಅಧಿಕಾರಿಗಳು ಹಾಗೂ ಪ್ರಜಾಪ್ರತಿನಿಧಿಗಳ ನಿರ್ಲಕ್ಷದಿಂದಾದಿ ಇಂತಹ ಅನಾಹುಗಳು ಸಂಬವಿಸುತ್ತದೆ ಈ ಸಮಸ್ಯಗಳಿಗೆ ಸಂಬಂದಿಸಿದಂತೆ ಹಲವು ಬಾರಿ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ತಾಲೂಕ ಪಂಚಾತ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹಾಗೂ ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಜಯ ಕರ್ನಾಟಕ ಸಂಘಟನೆಯ ವತಿಯಿಂದ ಮನವಿ ಸಲಿಸಿದರು ಪ್ರಯೋಜನ ವಾಗಿಲ್ಲ ಹೀಗೆ ಹತ್ತು ಹಲವಾರು ಗ್ರಾಮದಲ್ಲಿ ಸಮಸ್ಯಗಳಿದ್ದರು ಇತ್ತ ಕಡೆ ಮೇಲ್ಲಾಧಿಕಾರಿಗಳು ಹರಿಹಾವುತ್ತಿಲ್ಲ ಎಂದು ಚನ್ನಪ್ಪಗೌಡ ಬಿರಾದಾರ ತಾಲೂಕ ಅಧ್ಯಕ್ಷರು ದೇವರಹಿಪ್ಪರಗಿ ಇನ್ನಾದರು ಮೇಲ್ಲಾಧಿರಿಗಳು ಈ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿ ಮುಂದಾಗುವ ಅನಾಹುತಕ್ಕೆ ಅಡಿಮಾಡದೆ ಮುನ್ನೆಚ್ಚರಿಕೆಯನ್ನು ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
ಒಂದು ವೇಳೆ ಮೇಲ್ಲಾಧಿಗಳು ನಮ್ಮ ಸಮಸ್ಯಗಳಿಗೆ ಸ್ಪಂದಿಸದಿದ್ದರೆ ಗ್ರಾಮ ಪಂಚಾಯತ ಕಾರ್ಯಲಯಕ್ಕೆ ಬೀಗ ಜಡಿದು ಸಂಘಟನೆಯು ಹಾಗೂ ಗ್ರಾಮಸ್ಥರ ವತಿಯಿಂದ ಉಗ್ರವಾದ ಹೋರಾಟ ಕೈಗೊಳ್ಳಲಾಗುವುದು ಎಂದು ಈ ಮೂಲಕ ಎಚ್ಚರಿಕೆ ನೀಡುತ್ತೇವೆ.